ಬದಲಾಗು ಬದಲಾಯಿಸು ನೀ ಮೇಕಿಂಗ್ ವಿಡಿಯೋ ಕುರಿತು ನಿರ್ದೇಶಕ ಪವನ್ ಒಡೆಯರ್ ಮಾತನಾಡಿದ್ದಾರೆ. ಶೂಟಿಂಗ್ ಬಗ್ಗೆ ಮಾತನಾಡಿದ್ರೆ ಡಿ ಬಾಸ್ ಕೃಷಿ, ರೈತರು, ಬೆಳೆ, ಜಾನುವಾರುಗಳ ಬಗ್ಗೆ ಮಾತನಾಡಿದ್ದರು ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ ನಿರ್ದೇಶಕ.

ನಾವೆಲ್ಲ ಹೇಗೋ ಇದ್ದೇವೆ. ಕೃಷಿಕರು ಕೊರೋನಾ ಟೈಂನಲ್ಲಿ ಹೇಗಿರ್ತಾರೆ ಎನ್ನುವುದರ ಬಗ್ಗೆ ದರ್ಶನ್‌ಗಿದ್ದ ಕಾಳಜಿ ಬಗ್ಗೆ ಮಾತನಾಡಿದ್ದಾರೆ ನಿರ್ದೇಶಕ. ವಿಡಿಯೋ ಸಿನಿಮಾ ಬಿಟ್ಟು, ರೈತರು, ದಿನಗೂಲಿ ಕಾರ್ಮಿಕರ ಬಗ್ಗೆಯೇ ಅರ್ಧ ಗಂಟೆಗೂ ಹೆಚ್ಚು ಮಾತನಾಡಿದ್ದೆವು. ವಿಡಿಯೋ ಬಿಟ್ಟು ರೈತರು, ಕಾರ್ಮಿಕರ ಬಗ್ಗೆಯೇ ಸುದೀರ್ಘವಾಗಿ ಮಾತನಾಡಿದ್ದೆವು ಎಂದಿದ್ದಾರೆ.

 

ಕೊರಗಜ್ಜನ ಆಶೀರ್ವಾದ ಪಡೆದ ದರ್ಶನ್, ಜತೆಗೆ ಯಾರಿದ್ದರು?

ನಾನು ಕ್ಯಾಮೆರಾ ಮುಂದೆ ಬರುವಾಗ ಶಿಸ್ತು ಮೈಂಟೈನ್ ಮಾಡುತ್ತೇನೆ. ಒಂದೆರಡು ದಿನ ಬಿಡಿ. ನಾನೆಲ್ಲವನ್ನೂ ರೆಡಿ ಮಾಡಿ ನಿಮಗೆ ಹೇಳುತ್ತೇನೆ ಎಂದಿದ್ದರು. ಲೆನ್ಸ್ ತರೊಕಿದ್ದುದರಿಂದ ತಂಡ ಸ್ಥಳಕ್ಕೆ ತಲುಪಿದಾಗ ದರ್ಶನ್ ಅಗಲೇ ರೆಡಿಯಾಗಿದ್ದರು. ದರ್ಶನ್ ಫುಲ್ ರೆಡಿಯಾಗಿದ್ದು, ನಾವು ತಡವಾಗಿದ್ದನ್ನು ನೋಡಿ ಕೈ ಕಾಲು ಅಲುಗೋಯ್ತು ಅಂತಾರೆ ನಿರ್ದೇಶಕ.