ಚೀನಾ 'ಬಾಂಬೂ' ಕಥೆ ಹೇಳಿ ನಟ ಯಶ್ ಸಮಾಜಕ್ಕೆ ಯಾವ ಸಂದೇಶ ಕೊಟ್ಟಿದ್ದಾರೆ?
ನಟ ಯಶ್ ಸದ್ಯಕ್ಕೆ ಎರಡು ಪ್ರಾಜೆಕ್ಟ್‌ಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಒಂದು ಪ್ಯಾನ್ ವರ್ಲ್ಡ್ ಸಿನಿಮಾ ಆಗಲಿರುವ ಟಾಕ್ಸಿಕ್ ಚಿತ್ರವಾದರೆ ಮತ್ತೊಂದು ಬಾಲಿವುಡ್‌ನ ಬಿಗ್ ಪ್ರಾಜೆಕ್ಟ್ ರಾಮಾಯಣ. ಟಾಕ್ಸಿಕ್ ಚಿತ್ರವನ್ನು ಮಲಯಾಳಂ ಮೂಲದ ಗೀತು ಮೋಹನ್ ದಾಸ್ ಅವರು ನಿರ್ದೇಶನ ಮಾಡುತ್ತಿದ್ದರೆ ರಾಮಾಯಣ ಚಿತ್ರವನ್ನು ನಿತೇಶ್ ತಿವಾರಿ ಡೈರೆಕ್ಟ್ ಮಾಡುತ್ತಿದ್ದಾರೆ...
ಕನ್ನಡದ ಪ್ಯಾನ್ ಇಂಡಿಯಾ ಸ್ಟಾರ್ ಯಶ್ (Rocking Star Yash) ಅವರು ಒಂದು ಸಂಗತಿ ಹೇಳುವ ಮೂಲಕ ದೊಡ್ಡ ಸಂದೇಶವನ್ನೇ ನೀಡಿದ್ದಾರೆ. ಚೈನಾ, ಬಿದಿರು ಮರ ಹಾಗೂ ಬೇರು ಎಂದೆಲ್ಲಾ ಹೇಳಿ ಅದೇನು ಹೇಳಬೇಕೋ ಅದನ್ನು ಹೇಳಿ ಮುಗಿಸಿದ್ದಾರೆ. 'ಹೇಳಿದ್ದನ್ನು ಮಾಡಿ ತೋರಿಸುವುದರಲ್ಲಿ ಯಶ್ ಸಿದ್ದಹಸ್ತರು' ಎನ್ನಲಾಗುತ್ತದೆ. ಆದರೆ, ಮಾಡಿ ತೋರಿಸಿ ಹೇಳಿದ್ದಾರೆ ಅಂತನೂ ಇಲ್ಲಿನ ಕತೆಗೆ ಸಂಬಂಧಿಸಿ ಹೇಳಬಹುದು. ಕೆಜಿಎಫ್ ಸಿನಿಮಾ ಮೂಲಕ ನಟ ಯಶ್ ಅವರು ಜಾಗತಿಕ ಮಟ್ಟದಲ್ಲಿ ತಾವು ಗುರುತಿಸಿಕೊಂಡಿದ್ದು ಹಾಗೂ ಕನ್ನಡ ಸಿನಿಮಾ ಖ್ಯಾತಿಯನ್ನು ವಿಶ್ವವ್ಯಾಪಿ ಆಗಿಸಿದ್ದು ಗೊತ್ತೇ ಇದೆ.
ಹಾಗಿದ್ದರೆ ಯಶ್ ಹೇಳಿದ್ದೇನು? 'ಚೈನಾದಲ್ಲಿ ಒಂದು ರೀತಿಯ ಬಾಂಬೂ ಟ್ರೀ ಇದ್ಯಂತೆ. ಇದು ತುಂಬಾ ವಿಶೇಷವಾಗಿ ಇದ್ಯಂತೆ. ಅದನ್ನ ಪ್ಲಾಂಟ್ ಮಾಡಿದ್ಮೇಲೆ ಆಲ್‌ಮೋಸ್ಟ್ ಮೂರು ವರ್ಷ ಅದು ಭೂಮಿಯಿಂದ ಮೇಲ್ಗಡೆ ಯಾವುದೇ ಬೆಳವಣಿಗೆ ಇರಲ್ಲ.. ಆಮೇಲೆ ಮುಂದಿನ ಮೂರು ತಿಂಗಳಲ್ಲಿ ಅದು ಭೂಮಿ ಮೇಲೆ 80 ಅಡಿ ಎತ್ತರ ಬೆಳೆಯುತ್ತಂತೆ. ಅಂದ್ರೆ ಆ ಮೂರು ವರ್ಷದವರೆಗೂ ನೀರು ಹಾಕ್ತಾ ಇರ್ಬೇಕು.. ನಮಗೆ ಅಷ್ಟು ಪೇಶನ್ಸ್ ಬೇಕು.. ಆ ಮೂರು ವರ್ಷ ಅದು ಏನ್ ಮಾಡ್ತಾ ಇತ್ತು ಅಂದ್ರೆ, ಆಮೇಲೆ ಎಂಭತ್ತು ಅಡಿ ಬೆಳೆಯೋ ಎತ್ತರ ತಡೆಯೋಕೆ ಬೇರು ಬಿಡ್ತಾ ಇತ್ತು..
ಕನ್ನಡದ ನಟ ಯಶ್ ಫಾಲೋ ಮಾಡಿದ ಅಲ್ಲು ಅರ್ಜುನ್, ನೆಟ್ಟಿಗರ ಕಣ್ಣು ಕೆಂಪಾಗಿದ್ದೇಕೆ?
ಅದು ಮೇಲೆ ಆಮೇಲೆ ಬೆಳೆಯೋದಕ್ಕೆ, ಮೂರು ವರ್ಷ ಕೆಳಗೆ ಬೆಳಿತಾ ಇರುತ್ತೆ.. ಕೆಳಗೆ ಬೇರು ಗಟ್ಟಿಯಾಗಿ ನಿಂತ ಮೇಲೆ, ಅದು ಅಷ್ಟು ಬೇಗ ಬೆಳೆದು ನಿಂತುಬಿಡುತ್ತೆ.. ಅಂದ್ರೆ, ನಮ್ ವ್ಯಾಲ್ಯೂ ಸಿಸ್ಟಮ್ ಕೂಡ ಹಾಗೇನೇ. ನಮಗೆ ಭರವಸೆ, ಶಕ್ತಿ ಅನ್ನೋ ಗುಣಗಳು ಇದ್ದಾಗ, ಅದು ಗಟ್ಟಿಯಾಗಿ ಬೇರು ಬಿಟ್ಟಿರುವಾಗ, ನಾವು ಎಷ್ಟೇ ಬೆಳೆದರೂ ಅದು ತಡೆಯುತ್ತೆ.. ರೂಟ್ ಸ್ಟ್ರಾಂಗ ಇಲ್ಲ ಅಂದ್ರೆ ನಾವು ಎಷ್ಟೇ ಬೆಳೆಯೋಕೆ ನೋಡಿದ್ರೂ ನಾವು ಬಿದ್ದೋಗ್ತೀವಿ... ' ಎಂದು ಚೈನಾ ಬಿದಿರು ಮರದ ಕಥೆಯನ್ನು ಹೇಳಿ ತಾವೇನು ಹೇಳುವ ಉದ್ಧೇಶವಿತ್ತೋ ಅದನ್ನು ಹೇಳಿದ್ದಾರೆ. ಈ ಬಾಂಬೂ (ಬಿದಿರು) ಕಥೆಯಂತೇ ತಾವೂ ಬೆಳೆದಿದ್ದಾರೆ ಎನ್ನಬಹುದು.
ನಟ ಯಶ್ ಸದ್ಯಕ್ಕೆ ಎರಡು ಪ್ರಾಜೆಕ್ಟ್‌ಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಒಂದು ಪ್ಯಾನ್ ವರ್ಲ್ಡ್ ಸಿನಿಮಾ ಆಗಲಿರುವ ಟಾಕ್ಸಿಕ್ ಚಿತ್ರವಾದರೆ ಮತ್ತೊಂದು ಬಾಲಿವುಡ್‌ನ ಬಿಗ್ ಪ್ರಾಜೆಕ್ಟ್ ರಾಮಾಯಣ. ಟಾಕ್ಸಿಕ್ ಚಿತ್ರವನ್ನು ಮಲಯಾಳಂ ಮೂಲದ ಗೀತು ಮೋಹನ್ ದಾಸ್ ಅವರು ನಿರ್ದೇಶನ ಮಾಡುತ್ತಿದ್ದರೆ ರಾಮಾಯಣ ಚಿತ್ರವನ್ನು ನಿತೇಶ್ ತಿವಾರಿ ಡೈರೆಕ್ಟ್ ಮಾಡುತ್ತಿದ್ದಾರೆ. ಹಿಂದಿ ಚಿತ್ರರಂಗದಲ್ಲಿ ಹಿಂದೆಂದೂ ಬಂದಿರದಂತಹ ಬಿಗ್ ಬಜೆಟ್ ಚಿತ್ರವಾಗಲಿದೆಯಂತೆ ರಾಮಾಯಣ. ಈ ಚಿತ್ರಕ್ಕೆ ಬರೋಬ್ಬರಿ 800 ಕೋಟಿ ವ್ಯಯಿಸಲಿದ್ದಾರೆ ಎನ್ನಲಾಗಿದೆ.
ಕನ್ನಡದ ಸ್ಟಾರ್ ನಟ ಯಶ್‌ಗೆ ಭಾರತದಲ್ಲೇ ಅತೀ ಹೆಚ್ಚು ಸಂಭಾವನೆ, ಆದ್ರೆ....
ಇನ್ನು ಟಾಕ್ಸಿಕ್ ಚಿತ್ರದ ಬಗ್ಗೆಯಂತೂ ಮಾತೇ ಆಡೋ ಹಾಗಿಲ್ಲ. ಅದೊಂದು ಹಾಲಿವುಡ್ ರೇಂಜ್‌ನ ಸಿನಿಮಾ ಆಗಲಿದೆ. ಅದರ ಬಜೆಟ್, ಸ್ಟಾರ್ ಕಾಸ್ಟ್ ಎಲ್ಲದರ ಬಗ್ಗೆ ಮಾತನಾಡಲು ಹೊರಟರೆ ಅದೇ ಒಂದು ದೊಡ್ಡ ಸ್ಟೋರಿ ಆಗಿಬಿಡುತ್ತೆ. ಆ ಪ್ರಯತ್ನ ಮಾಡುವ ಬದಲು ಟಾಕ್ಸಿಕ್ ತೆರೆಗೆ ಬಂದಾಗ ಸಿನಿಮಾ ಕಣ್ತುಂಬಿಕೊಳ್ಳೋದೇ ಲೇಸು ಎನ್ನಬಹುದು. ಒಟ್ಟಿನಲ್ಲಿ, ಕನ್ನಡಕ್ಕೊಬ್ಬರೇ ಯಶ್ ಎಂಬಂತೆ, ಹೊಸ ಹೊಸ ಪ್ರಯತ್ನದ ಮೂಲಕ ಕನ್ನಡ ಚಿತ್ರರಂಗವನ್ನು ಇನ್ನೊಂದು ಹಂತ ಮೇಲಕ್ಕೆ ಕೊಂಡೊಯ್ಯುವ ಕೆಲಸದಲ್ಲಿ ಯಶ್ ನಿರತರಾಗಿದ್ದಾರೆ ಎನ್ನಬಹುದು.