ಯಶ್‌ರಂತೆ ಅಲ್ಲು ಅರ್ಜುನ್ ಕೂಡ ಸ್ಥಳೀಯ ಭಾಷೆಯಲ್ಲಿ ಮಾತನಾಡಿ ಗೌರವ ತೋರಿಸುವುದಾಗಿ ಹೇಳಿದ್ದಾರೆ. ಯಶ್ ಕೆಜಿಎಫ್ ಪ್ರಚಾರದ ವೇಳೆ ತೆಲುಗಿನಲ್ಲಿ ಮಾತನಾಡಿದ್ದರು. ಅಲ್ಲು ಅರ್ಜುನ್ ತಮಿಳಿನಲ್ಲಿ ಮಾತನಾಡಿದ್ದಾರೆ. ಈ ನಡೆಗೆ ಕೆಲವರು ಮಾತೃಭಾಷೆಯಲ್ಲೇ ಮಾತನಾಡಬೇಕೆಂದು ವಿರೋಧ ವ್ಯಕ್ತಪಡಿಸಿದ್ದಾರೆ. "ಪುಷ್ಪ 2" ಯಶಸ್ಸಿನ ನಡುವೆಯೂ, ಪ್ರೀಮಿಯರ್ ಶೋ ವೇಳೆ ಅಭಿಮಾನಿಯೊಬ್ಬರ ಸಾವು ಚಿತ್ರತಂಡಕ್ಕೆ ದುಃಖ ತಂದಿದೆ.

ರಾಕಿಂಗ್ ಸ್ಟಾರ್ ಯಶ್ (Yash) ಅವರು ಕೆಜಿಎಫ್ ಸಿನಿಮಾ ಪ್ರಮೋರ್ಶನ್‌ ವೇಳೆ ಒಂದು ಮಾತು ಹೇಳಿದ್ದರು. ಈಗ ಅದೇ ಮಾತನ್ನು ತೆಲುಗು ಸ್ಟಾರ್ ನಟರೊಬ್ಬರು ಹೇಳಿದ್ದಾರೆ. ಆ ಮಾತು ಅಂದು ಭಾರಿ ಸಂಚಲನ ಮೂಡಿಸಿತ್ತು. ಏಕೆಂದರೆ, ಪರಭಾಷಿಗನೊಬ್ಬ ಮಾತೃಭಾಷಿಗರ ಮುಂದೆ ಆ ಮಾತನ್ನು ಹೇಳಿದಾಗ ಸಹಜವಾಗಿಯೇ ಹಲವರಿಗೆ ಹಲವು ಭಾವನೆಗಳು, ಸಂದೇಶಗಳು ಹೋಗುತ್ತವೆ. ಅಂದು ಅದೇ ಆಗಿತ್ತು, ಇಂದು ಕೂಡ ಅದೇ ಆಗಿದೆ. ಹಾಗಿದ್ರೆ ಅಂದು ಯಶ್ ಹೇಳಿದ್ದ ಮಾತನ್ನು ಇಂದು ಆಡಿರುವ ತೆಲುಗು ಸ್ಟಾರ್ ನಟ ಯಾರು? ಅವರು ಹೇಳಿದ್ದೇನೆ? ಇಲ್ಲಿದೆ ಡೀಟೇಲ್ಸ್.. 

ಹೌದು, ಕೆಜಿಎಫ್ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ನಟರಾಗಿರುವ ಕನ್ನಡದ ರಾಕಿಂಗ್ ಸ್ಟಾರ್ ನಟ ಯಶ್ ಅವರು, ಆ ಚಿತ್ರದ ಪ್ರಮೋಶನ್ ವೇಳೆ ಆ ಮಾತು ಹೇಳಿದ್ದರು. ಅಂದರೆ, ' ಹೌದು, ನಾನು ಈಗ ತೆಲುಗು ಮಾತಾಡ್ತೀನಿ, ಯಾಕೆ ಅಂದ್ರೆ ನಾವು ಯಾವ ಜಾಗದಲ್ಲಿ ಇರ್ತವೋ ಆ ಜಾಗದ ಜನ ಮತ್ತು ಮಣ್ಣಿಗೆ ಗೌರವ ಕೊಡಬೇಕು' ಎಂದಿದ್ದರು. ಈಗ ಅದೇ ಮಾತನ್ನು ತೆಲುಗು ಸ್ಟಾರ್ ಅಲ್ಲು ಅರ್ಜುನ್ (Allu Arjun) ಹೇಳಿದ್ದಾರೆ. 'ನಾನು ತಮಿಳು ಮಾತಾಡ್ತಿನಿ, ಯಾಕಂದ್ರೆ ನಾವು ಯಾವ ಜಾಗದಲ್ಲಿ ಇರ್ತೀವೋ ಅಲ್ಲಿನ ಜನಕ್ಕೆ, ಮಣ್ಣಿಗೆ ಗೌರವ ಕೊಡಬೇಕು' ಎಂದಿದ್ದಾರೆ. 

ಪುರುಷರೇ, ಕನ್ಯತ್ವ ಉಳಿಸಿಕೊಂಡಿರುವ ಹೆಂಡತಿಗಾಗಿ ಹುಡುಕಬೇಡಿ: ಪ್ರಿಯಾಂಕಾ ಚೋಪ್ರಾ

ಅಂದರೆ, ಕನ್ನಡದ ನಟ ಯಶ್ ಅವರು ವಿಶ್ವವ್ಯಾಪಿ ಜನಪ್ರಿಯತೆ ಪಡೆದಿದ್ದು ಮಾತ್ರವಲ್ಲ, ಅವರ ಮಾತನ್ನು ಹಲವು ಸ್ಟಾರ್ ನಟರೂ ಕೂಡ ಫಾಲೋ ಮಾಡುತ್ತಾರೆ ಎನ್ನಬಹುದೇ? ಈಗ ಆಗಿದ್ದು ನೋಡಿದರೆ ಹಾಗೆ ಹೇಳದೇ ಬೇರೆ ದಾರಿಯಿಲ್ಲ. ಏಕೆಂದರೆ, ಯಶ್ ಅವರು ಹೇಳಿದ್ದ ಮಾತನ್ನೇ ಇಂದು ಅಲ್ಲು ಅರ್ಜುನ್ ಹೇಳಿದ್ದಾರೆ ಅಂದರೆ ಇನ್ನೇನು ಹೇಳಲು ಸಾಧ್ಯ? ಆದರೆ, ಈ ಮಾತಿಗೆ ಹಲವರು ಅಂದು ವಿರೋಧ ವ್ಯಕ್ತಪಡಿಸಿದ್ದರು, ಇಂದೂ ಕೂಡ ಅದು ರಿಪೀಟ್ ಆಗಿದೆ. ಹಾಗಿದ್ರೆ ಆಗ್ತಿರೋದೇನು?

ಹೌದು, ಯಶ್ ಹಾಗೂ ಅಲ್ಲು ಅರ್ಜುನ್ ಅವರುಗಳ ಮಾತಿಗೆ ಕೆಲವರು ಸೋಷಿಯಲ್ ಮೀಡಿಯಾಗಳಲ್ಲಿ ವಿರೋಧ, ಟೀಕೆ ವ್ಯಕ್ತಪಡಿಸಿದ್ದಾರೆ. ಕಾರಣ, ಎಲ್ಲೇ ಹೋದರೂ ನಾವು ನಮ್ಮ ಮಾತೃಭಾಷೆಯಲ್ಲಿಯೇ ನಾವು ಮಾತನ್ನಾಡಬೇಕು. ಅದನ್ನು ಅವರವರ ಭಾಷೆಯಲ್ಲಿ ಅನುವಾದ ಮಾಡುವುದಕ್ಕೆ ಅಲ್ಲಿ ವ್ಯವಸ್ಥೆ ಇರುತ್ತದೆ ಅಥವಾ ಇರಬೇಕು' ಏಕೆಂದರೆ, ಒಮ್ಮಲೇ ನಮಗೆ ಬೇರೆ ಭಾಷಯಲ್ಲಿ ಮಾತಾಡುವ ಪ್ರಭುತ್ವ ಬರೋದಿಲ್ಲ. ಜೊತೆಗೆ, ಅವರನ್ನು ಮೆಚ್ಚಿಸಲು ಹೋಗಿ ಏನಾದ್ರೂ ಯಡವಟ್ಟಾದರೆ ಕಷ್ಟ..' ಎಂದಿದ್ದಾರೆ ಹಲವರು. 

ಅಪ್ಪನ ಮೇಲಿರೋ ಪ್ರೀತಿ ತಡೆಯೋಕಾಗ್ದೇ ಸ್ವಲ್ಪ ಜಾಸ್ತಿನೇ ಮಾತಾಡ್ಬಿಟ್ರಾ ಆಯುಷ್?

ಒಟ್ಟಿನಲ್ಲಿ, ಸದ್ಯ ಟಾಲಿವುಡ್ ಸ್ಟಾರ್ ನಟ ಅಲ್ಲು ಅರ್ಜುನ್ ಹಾಗೂ ಕನ್ನಡತಿ ನಟಿ ರಶ್ಮಿಕಾ ಮಂದಣ್ಣ ಜೋಡಿಯ 'ಪುಷ್ಪ 2' ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಸಾಲಿಗೆ ಸೇರಿದೆ. ಗಳಿಕೆಯಲ್ಲೂ ಕೂಡ ಪುಷ್ಪ 2 ಚಿತ್ರವು ಹಳೆಯ ಅನೇಕ ದಾಖಲೆಗಳನ್ನು ಮುರಿದಿದೆ. ಆದರೆ, ಅಲ್ಲೂ ಅರ್ಜುನ್ ಅಂದುಕೊಂಡಷ್ಟು ಈ ಚಿತ್ರವು ಅವರಿಗೆ ನೆಮ್ಮದಿ ನೀಡಿಲ್ಲ ಎನ್ನಬಹುದು. ಕಾರಣ, ಅವರ ಸಿನಿಮಾ ಪ್ರೀಮಿಯರ್ ಶೋ ವೇಳೆ ರೇವತಿ ಎಂಬ ಮಹಿಳೆಯೊಬ್ಬರು ಕಾಲ್ತುಳಿತಕ್ಕೆ ಸಿಕ್ಕು ಅಸು ನೀಗಿದ್ದಾರೆ. ಈ ಪ್ರಕರಣ ಪುಷ್ಪ 2 ತಂಡಕ್ಕೆ ತಲನೋವು ತಂದಿಟ್ಟಿದೆ.