ವಿಷ್ಣು ಸ್ಮಾರಕ ಉದ್ಘಾಟನೆ ಕೇವಲ ಕಾಟಚಾರಕ್ಕೆ ಆಗ್ತಿದೆ: ಸರ್ಕಾರದ ವಿರುದ್ಧ ಅಭಿಮಾನಿಗಳ ಆಕ್ರೋಶ
ಸರ್ಕಾರ ಇತರೆ ಕಾರ್ಯಕ್ರಮಗಳಿಗೆ ಖಾಸಗಿ ಜೆಟ್ ಮೂಲಕ ಅನ್ಯಭಾಷಾ ನಟರನ್ನ ಕರೆತಂದು ಅದ್ಧೂರಿ ಕಾರ್ಯಕ್ರಮವನ್ನ ಮಾಡ್ತಾರೆ. ವಿಷ್ಣುವರ್ಧನ್ ವಿಚಾರದಲ್ಲಿ ಮಾತ್ರ ಯಾಕಿಷ್ಟು ನಿರ್ಲಕ್ಷ್ಯ ಅಂತ ಕಿಡಿ ಕಾರಿದ ವಿಷ್ಣು ಅಭಿಮಾನಿಗಳು.

ಬೆಂಗಳೂರು(ಜ.29): ವಿಷ್ಣು ಸ್ಮಾರಕ ಉದ್ಘಾಟನೆ ಕೇವಲ ಕಾಟಚಾರಕ್ಕೆ ಆಗುತ್ತಿದೆ. ಬೇರೆ ಕಾರ್ಯಕ್ರಮಗಳಿಗೆ ರಾಜ್ಯದಾದ್ಯಂತ ಪಬ್ಲಿಸಿಟಿ ಕೊಡುವ ಸರ್ಕಾರ ಈ ವಿಚಾರದಲ್ಲಿ ಮಾತ್ರ ನಿರ್ಲಕ್ಷ್ಯ ಮಾಡುತ್ತಿದೆ. ಕೇವಲ ಮೈಸೂರು ಡಿಸಿ ನೇತೃತ್ವದಲ್ಲಿ ಕಾರ್ಯಕ್ರಮ ಮುಗಿಸಿ ಸುಮ್ಮನಾಗುತ್ತಿದ್ದಾರೆ. ಸರ್ಕಾರ, ಚಲನಚಿತ್ರ ಮಂಡಳಿ, ಕನ್ನಡ ನಟರು ಯಾರು ಕೂಡ ಈ ಬಗ್ಗೆ ಸರಿಯಾದ ಗಮನ ಹರಿಸಿಲ್ಲ ಅಂತ ಸರ್ಕಾರದ ವಿರುದ್ಧ ವಿಷ್ಣು ಅಭಿಮಾನಿಗಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರ ಇತರೆ ಕಾರ್ಯಕ್ರಮಗಳಿಗೆ ಖಾಸಗಿ ಜೆಟ್ ಮೂಲಕ ಅನ್ಯಭಾಷಾ ನಟರನ್ನ ಕರೆತಂದು ಅದ್ಧೂರಿ ಕಾರ್ಯಕ್ರಮವನ್ನ ಮಾಡ್ತಾರೆ. ವಿಷ್ಣುವರ್ಧನ್ ವಿಚಾರದಲ್ಲಿ ಮಾತ್ರ ಯಾಕಿಷ್ಟು ನಿರ್ಲಕ್ಷ್ಯ ಅಂತ ವಿಷ್ಣು ಅಭಿಮಾನಿಗಳ ಕಿಡಿ ಕಾರಿದ್ದಾರೆ.
ಬಾಲಣ್ಣ ಕುಟುಂಬ ಅವಮಾನಿಸಿದೆ, ಅಮ್ಮ ಕಣ್ಣೀರು ಸುರಿಸಿದ್ದಾರೆ; ಬೇಸರ ಹೊರಹಾಕಿದ ನಟ ಅನಿರುದ್ಧ್
200 ಕ್ಕೂ ಅಧಿಕ ಚಿತ್ರದಲ್ಲಿ ನಟಿಸಿರುವ ವಿಷ್ಣುವರ್ಧನ್‌ರವರಿಗೆ ಈ ರೀತಿ ಮಾಡೋದು ಸರಿಯಲ್ಲ ಅಂತ ಚಲನಚಿತ್ರ ವಾಣಿಜ್ಯ ಮಂಡಳಿ, ಸರ್ಕಾರದ ವಿರುದ್ಧ ವಿಷ್ಣು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
13 ವರ್ಷಗಳ ಹೋರಾಟದ ಫಲ: ಸಿಎಂ ಬೊಮ್ಮಾಯಿ ಅವರಿಂದ ಇಂದು ವಿಷ್ಣು ಸ್ಮಾರಕ ಉದ್ಘಾಟನೆ
ಮೈಸೂರು: ಖ್ಯಾತ ಸಿನಿಮಾ ತಾರೆ, ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ ಸ್ಮಾರಕ ಲೋಕಾರ್ಪಣೆಗೆ ಕ್ಷಣಗಣನೆ ಆರಂಭವಾಗಿದೆ. ಸತತ 13 ವರ್ಷಗಳ ಹೋರಾಟದ ಫಲವಾಗಿ ರಾಜ್ಯ ಸರ್ಕಾರವು ಎಚ್.ಡಿ.ಕೋಟೆ ರಸ್ತೆಯ ಉದ್ಬೂರು ಗೇಟ್ ಬಳಿಯ ಹಾಲಾಳು ಗ್ರಾಮದಲ್ಲಿ ಸ್ಮಾರಕ ನಿರ್ಮಿಸಿದ್ದು, ಇಂದು ಬೆಳಗ್ಗೆ 11ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸುವರು. ಡಾ.ವಿಷ್ಣುವರ್ಧನ್ ಪ್ರತಿಷ್ಠಾನ ಹಾಗೂ ವಿಷ್ಣುವರ್ಧನ್ ಅವರ ಕುಟುಂಬ ಸದಸ್ಯರ ಸತತ ಪ್ರಯತ್ನ ಮತ್ತು ಹೋರಾಟದ ಫಲವಾಗಿ ಸ್ಮಾರಕ ಉದ್ಘಾಟನೆಗೆ ಸಜ್ಜಾಗಿದೆ.
ಹಾಲಾಳು ಗ್ರಾಮದಲ್ಲಿ ಸರ್ಕಾರ ನೀಡಿದ 5 ಎಕರೆ ಜಾಗದ ಪೈಕಿ 3 ಎಕರೆ ಪ್ರದೇಶದಲ್ಲಿ 11 ಕೋಟಿ ವೆಚ್ಚದಲ್ಲಿ ಈ ಸ್ಮಾರಕ ನಿರ್ಮಿಸಿದ್ದು, 2020ರ ಸೆ.15 ರಂದು ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗುದ್ದಲಿ ಪೂಜೆ ನೆರವೇರಿಸಿದ್ದರು. ವಿಷ್ಣುವರ್ಧನ್ ಅವರು ತುಂಬಾ ಪ್ರೀತಿಸುತ್ತಿದ್ದ ಮೈಸೂರಿನಲ್ಲಿಯೇ ಸ್ಮಾರಕ ನಿರ್ಮಾಣಗೊಂಡಿರುವುದು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ವಿಷ್ಣುವರ್ಧನ್ ಅವರಿಗೆ ಮೈಸೂರು ಹುಟ್ಟೂರು. ಇಲ್ಲಿಯೇ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಪೂರೈಸಿ, ಚಾಮುಂಡಿಪುರಂನಲ್ಲಿ ವಾಸವಿದ್ದರು. ಮೈಸೂರಿನಲ್ಲಿ ಚಿತ್ರೀಕರಣ ನಡೆಸಿದರೆ ಅವರಿಗೆ ಎಲ್ಲಿಲ್ಲದ ಸಂತೋಷ. ಚಾಮುಂಡಿಬೆಟ್ಟ ಅವರ ನೆಚ್ಚಿನ ತಾಣವಾಗಿತ್ತು.