ಕಿರುತೆರೆಯ ಜನಪ್ರಿಯ ನಿರೂಪಕಿ ಅನುಶ್ರೀ ತನ್ನದೇ ಆದ ಯುಟ್ಯೂಬ್ ಚಾನಲ್ ತೆರೆದು ಕನ್ನಡ ಚಿತ್ರರಂಗದ ಅನೇಕ ಸಿನಿಮಾ ನಟ-ನಟಿಯರನ್ನು ಹಾಗೂ ಸಿನಿಮಾ ಮತ್ತು ಸಂಗೀತ ನಿರ್ದೇಶಕರ ಸಂದರ್ಶನ ಮಾಡಿದ್ದಾರೆ. ರಿಲೀಸ್ ಆದ ಪ್ರತಿ ವಿಡಿಯೋನೂ ಸೋಷಿಯಲ್ ಮೀಡಿಯಾದಲ್ಲಿ ಮಿಲಿಯನ್ ಗಟ್ಟಲೇ ವೀಕ್ಷಣೆ ಪಡೆದುಕೊಳ್ಳುತ್ತದೆ. ಆದರೆ ಇದೀಗ ಒಂದು ಪ್ರೋಮೋನೇ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ಮೈಸೂರಿನ 'ಅರ್ಜುನ' ಹಾಗೂ 'ದುರ್ಗಾಪರಮೇಶ್ವರಿ'ಯೊಂದಿಗೆ ನಿಖಿಲ್ ಕುಮಾರಸ್ವಾಮಿ ದಂಪತಿ!

ಹೌದು! ವೈವಾಹಿಕ ಜೀವನಕ್ಕೆ ಯುವರಾಜ ನಿಖಿಲ್ ಕುಮಾರಸ್ವಾಮಿ ಕಾಲಿಟ್ಟ ನಂತರ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಯಾವ ಖಾಸಗಿ ಸಂದರ್ಶನಗಳಲ್ಲಿ ಭಾಗಿಯಾಗಿರಲಿಲ್ಲ ಆದರೆ ಅನುಶ್ರೀ ಅವರ ಜೊತೆ ಸಂದರ್ಶನದಲ್ಲಿ ಪಾಲ್ಗೊಂಡು ಇದೇ ಮೊದಲ ಬಾರಿ ಮನ ಬಿಚ್ಚಿ ಟ್ರೋಲ್‌ಗಳ ಬಗ್ಗೆ, ರಾಜಕೀಯ ಸೋಲುಗಳ ಬಗ್ಗೆ ಮಾತನಾಡಿದ್ದಾರೆ.

 

ಸಮುದ್ರದ ಅಲೆಗಳ ವಿರುದ್ಧವಾಗಿ ಈಜುತ್ತಿರುವ ನಿಖಿಲ್ ರಾಜಕೀಯ ಮಾಡಲು ಬಾರದವರಿಗೆ ಒಂದು ಟಿಪ್ಸ್ ನೀಡಿದ್ದಾರೆ. ನಿಖಿಲ್ ಎಲ್ಲಿದ್ಯಪ್ಪ  ಎಂದು ಕಾಲು ಎಳೆದವರಿಗೆ ಉತ್ತರಿಸಿದ್ದಾರೆ, ತಂದೆ ಹೇಳಿಕೊಟ್ಟ ಮಾತನ್ನು ಚಾಚು ತಪ್ಪದೆ ಫಾಲೋ ಮಾಡುತ್ತಿದ್ದಾರೆ. ಶೀಘ್ರದಲ್ಲಿ  ಸಂದರ್ಶನದ ವಿಡಿಯೋ ರಿಲೀಸ್ ಅಗುತ್ತಿದೆ.

ಹೊಸ ಮನೆ ಕಟ್ಟಲು ಮುಂದಾದ ನಿಖಿಲ್ ಕುಮಾರಸ್ವಾಮಿ- ರೇವತಿ!

'ಮಂಡ್ಯ ಎಲೆಕ್ಷನ್ ಕಹಿ ಅನುಭವ.. ಟ್ರೋಲ್ಸ್ ಮೀಮ್ಸ್ ಗಳ ಬಿರುಗಾಳಿಯ ನಡುವೆ ರಾಜಕೀಯ ಹಾಗೂ ಸಿನಿಮಾ ನಾಯಕನಾಗಿ ನಿಂತ ನಿಖಿಲ್ ಕುಮಾರಸ್ವಾಮಿಯವರ ಜೊತೆ ನೇರ ಹಾಗೂ ಖಡಕ್ ಮಾತುಕತೆ.. Exclusive ಮಾತು' ಎಂದು ಅನುಶ್ರೀ ಬರೆದುಕೊಂಡಿದ್ದಾರೆ.

 

'ಅನುಶ್ರೀ ಅವರೊಟ್ಟಿಗೆ ನಡೆದ ಸಂದರ್ಶನದಲ್ಲಿ ನನ್ನ ಕೆಲವೊಂದಿಷ್ಟು ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದೇನೆ' ಎಂದು ನಿಖಿಲ್‌ ಕೂಡ ಬರೆದುಕೊಂಡಿದ್ದಾರೆ. ಒಟ್ಟಿನಲ್ಲಿ ಹಲವು ದಿನಗಳ ನಂತರ ನಿಖಿಲ್‌ ಅವರನ್ನು ನೋಡಲು ಹಾಗೂ ಅವರ ಮಾತುಗಳನ್ನು ಕೇಳಲು ಅಭಿಮಾನಿಗಳು ಕಾಯುತ್ತಿದ್ದಾರೆ.