Asianet Suvarna News Asianet Suvarna News

ನಿಖಿಲ್‌, ರೇವತಿ ಮದುವೆಯ ನಕಲಿ ಆಮಂತ್ರಣ ಪತ್ರಿಕೆ ವೈರಲ್‌!

ನಿಖಿಲ್‌ - ರೇವತಿ ಮದುವೆಯ ನಕಲಿ ಆಮಂತ್ರಣ ಪತ್ರಿಕೆ ವೈರಲ್‌| ಸ​ರಳವಾಗಿ​ರುವ ಆ​ಮಂತ್ರಣ ಪತ್ರಿ​ಕೆ| ಆಹ್ವಾನ ಪತ್ರಿ​ಕೆ​ಯೊಂದಿಗೆ ಒಂದು ಪು​ಟದ ಭಿ​ನ್ನಹ

Nikhil Kumaraswamy And Revathi Fake Wedding Invitation Circulating
Author
Bangalore, First Published Feb 25, 2020, 9:59 AM IST

ರಾ​ಮ​ನ​ಗರ[ಫೆ.25]: ಮಾಜಿ ಮು​ಖ್ಯಮಂತ್ರಿ ಎ​ಚ್‌.​ಡಿ.​ಕು​ಮಾ​ರ​ಸ್ವಾಮಿ ಅ​ವರ ಪುತ್ರ ನಿಖಿಲ್‌ ಮತ್ತು ರೇವತಿ ಮ​ದುವೆ ಆ​ಮಂತ್ರಣ ಪ​ತ್ರವೊಂದು ಸಾಮಾ​ಜಿಕ ಜಾಲ​ತಾ​ಣ​ದಲ್ಲಿ ಹರಿ​ದಾ​ಡು​ತ್ತಿದೆ.

4 ಪು​ಟ​ಗ​ಳಿ​ರುವ ಆ​ಮಂತ್ರಣ ಪ​ತ್ರಿ​ಕೆ​ಯಲ್ಲಿ ಕು​ಮಾ​ರ​ಸ್ವಾಮಿ ಅ​ವರ ಕೈ​ಬ​ರ​ಹದ ಮಾ​ದರಿ ಪ​ತ್ರವೊಂದು ಗ​ಮನ ಸೆ​ಳೆ​ದಿದೆ. ಆದರೆ, ಈ ಆಹ್ವಾನ ಪತ್ರಿಕೆ ಮತ್ತು ಕೈ ಬರಹ ನಕ​ಲಿ​ಯಾ​ಗಿದ್ದು, ಕುಮಾ​ರ​ಸ್ವಾಮಿ ಅವರ ಸಹಿ​ಯೂ ಫೋರ್ಜರಿ ಆಗಿದೆ. ಆಮಂತ್ರಣ ಪತ್ರಿಕೆ ಸಿದ್ದ​ತೆ​ಯ​ಲ್ಲಿದೆ ಎಂದು ಕುಮಾ​ರ​ಸ್ವಾ​ಮಿ​ರ​ವರ ಕುಟುಂಬದ ಮೂಲ​ಗಳು ಕನ್ನ​ಡ​ಪ್ರ​ಭಕ್ಕೆ ಸ್ಪಷ್ಟ​ಪ​ಡಿ​ಸಿ​ದೆ.

ಭಾವಿ ಪತ್ನಿಯ ಕೈಬರಹ ಶೇರ್, ನಿಖಿಲ್‌ರಿಂದ ಮತ್ತೊಂದು ವಿಷಯ ಕ್ಲಿಯರ್!

ಆಮಂತ್ರಣ ಪತ್ರಿ​ಕೆ​ಯಲ್ಲಿ ಏನಿದೆ ?

ಶ್ರೀಮತಿ ಚನ್ನಮ್ಮ ಮತ್ತು ಶ್ರೀ ಎಚ್‌ .ಡಿ.​ದೇ​ವೇ​ಗೌ​ಡರ ಹೆ​ಸ​ರಿನ ಮೂ​ಲ​ಕವೇ ಪ್ರಾ​ರಂಭ​ಗೊಂಡಿ​ರುವ ಆ​ಹ್ವಾನ ಪ​ತ್ರಿ​ಕೆಯಲ್ಲಿ ಏಪ್ರಿಲ್‌ 17ರ ಶು​ಕ್ರ​ವಾರ ಬೆ​ಳಗ್ಗೆ 9.15ರಿಂದ 9.40ಯೊ​ಳಗೆ ಧಾ​ರ​ಮೂ​ಹೂರ್ತ ರಾ​ಮ​ನ​ಗ​ರದ ಜಾ​ನ​ಪ​ದ​ ಲೋ​ಕ ಸ​ಮೀ​ಪದ ಸ​ಪ್ತ​ಪದಿ ಮಂಟ​ಪ​ದಲ್ಲಿ ನ​ಡೆ​ಯ​ಲಿದೆ ಎಂದು ವಿ​ವ​ರಿ​ಸ​ಲಾ​ಗಿದೆ.

ಆದರೆ, ವಧು ಎಂ.ರೇ​ವತಿ ತಂದೆ ಎನ್‌ .ಮಂಜು​ನಾಥ್‌ ಹೆಸ​ರಿನ ಮುಂದೆ ಶ್ರೀ ಬದ​ಲಾಗಿ ಶ್ರೀಮತಿ ಎಂದು ನಮೂ​ದಾ​ಗಿದೆ. ಅತೀ ಸ​ರ​ಳ​ವಾ​ಗಿ​ರುವ ಆ​ಮಂತ್ರಣ ಪ​ತ್ರಿ​ಕೆ​ಯ​ಲ್ಲಿಯು ಒಂದು ವಿ​ಶೇಷ ಇದೆ.

ಒಂದು ಪು​ಟದ ಪೂರ್ತಿ ಕು​ಮಾ​ರ​ಸ್ವಾಮಿ ಅ​ವರು ಆ​ಮಂತ್ರ​ಣದ ನೆ​ಪ​ದಲ್ಲಿ ಮ​ತ​ದಾ​ರ​ರಿಗೆ ಕೃ​ತ​ಜ್ಞತೆ ಸ​ಲ್ಲಿ​ಸಿ​ದ್ದಾ​ರೆ. ಹಾ​ಸ​ನ​ದಿಂದ ಹಿ​ಡಿ​ದು ತಮ್ಮ ಇಡೀ ರಾ​ಜ​ಕೀಯ ಜೀ​ವ​ನ​ವನ್ನು ಇಲ್ಲಿ ವಿ​ವ​ರಿ​ಸಿ​ದ್ದಾರೆ. ಕ​ಡೆಯ ನಾಲ್ಕು ಸಾ​ಲು​ಗ​ಳಲ್ಲಿ ಮ​ತ​ದಾ​ರ​ರನ್ನು ಮ​ದು​ವೆಗೆ ಆ​ಹ್ವಾ​ನಿ​ಸಿದ್ದು, ಜ​ತೆ​ಯಲ್ಲಿ ಕು​ಳಿತು ಊಟ ಮಾ​ಡುವ ಮ​ನವಿ ಮಾ​ಡಿ​ಕೊಂಡಿ​ರು​ವುದು ವಿ​ಶೇಷ. ತಮ್ಮ ಕೈ​ಬ​ರ​ಹದ ಮಾ​ದ​ರಿ​ಯ​ಲ್ಲಿಯೇ ಪತ್ರ ಮು​ದ್ರ​ಣ​ಗೊಂಡಿ​ರು​ವುದು ಮಾ​ತ್ರ​ವಲ್ಲ, ಪ್ರತಿ ಕಾ​ರ್ಡ್‌ನ ಪ​ತ್ರದ ಕೊ​ನೆ​ಯಲ್ಲಿ ಸಹಿ ಮಾ​ಡಿ​ದ್ದಾ​ರೆ.

Nikhil Kumaraswamy And Revathi Fake Wedding Invitation Circulating

ಪ​ತ್ರ​ದ​ಲ್ಲಿ ಏನಿದೆ...!

ನನ್ನ ಪ್ರೀ​ತಿಯ ಎ​ಲ್ಲ​ರಿಗೂ ಸ​ಪ್ರೇಮ ನ​ಮ​ಸ್ತೆ ,

ನಿ​ಮ್ಮ​ಗೊಂದು ಪ್ರೀ​ತಿಯ ಕ​ರೆ​ಯೋ​ಲೆ

ನಾನು ಹು​ಟ್ಟಿದ್ದು ಹಾ​ಸನ ಜಿ​ಲ್ಲೆ​ಯಲ್ಲಿ. ರಾ​ಜ​ಕೀಯವಾಗಿ ಆ​ಶೀರ್ವÜದಿಸಿ, ಪು​ನರ್‌ ಜನ್ಮ ನೀ​ಡಿದ್ದು ನಾ​ಡಿನ ಜ​ನತೆ. ವಿ​ಶೇ​ಷ​ವಾಗಿ ರಾಮ​ನ​ಗರ ಜಿ​ಲ್ಲೆಯ ತಂದೆ-ತಾ​ಯಂದಿರು. ಅಣ್ಣ -ತ​ಮ್ಮಂದಿರು, ಅ​ಕ್ಕ-ತಂಗಿ​ಯರು. ನಿ​ಮ್ಮ​ಗೆಲ್ಲ ನಾನು ಮತ್ತು ನಮ್ಮ ಕು​ಟುಂಬ ಸದಾ ಋುಣಿ. ರಾ​ಜ​ಕೀ​ಯ ನ​ನ​ಗೊಂದು ಆಕಸ್ಮಿ​ಕ​ವಾಗಿ ಸಿಕ್ಕ ಬ​ದು​ಕು.​ಅ​ದನ್ನು ನೀವು ಸದಾ ಸ​ಲ​ಹುತ್ತಾ ಬಂದಿ​ರುವ ನಿ​ಮ್ಮ​ಗಳ ಪ್ರೀತಿ ಸದಾ ಕೃ​ತ​ಜ್ಞ​ತೆ​ಯಿಂದ ಸ್ಮ​ರಿ​ಸು​ವಂತದ್ದು. ಈ​ ನಾ​ಡಿನ ಜ​ನ​ರಿಂದ ಪ​ಡೆದ, ರಾ​ಜ​ಕೀಯ ಅ​ಧಿ​ಕಾರ ಗೌ​ರ​ವ​ಗ​ಳನ್ನು ನಿ​ಮ​ಗಾ​ಗಿಯೇ, ಸ​ಮ​ರ್ಪಿ​ಸುತ್ತಾ ಬಂದಿ​ದ್ದೇನೆ. ಅ​ದರ ಹ​ಕ್ಕು​ದಾ​ರರು ನೀವೇ ಆ​ಗಿ​ರುತ್ತೀರ.

ರಾ​ಜ​ಕೀಯ ಬ​ದು​ಕಿನ ಸ್ಥಿತ್ಯಂತ​ರ​ದಲ್ಲಿ ಎರಡು ಬಾರಿ ರಾ​ಜ್ಯದ ಮು​ಖ್ಯ​ಮಂತ್ರಿ​ಯಾಗುವ ಸೌ​ಭಾಗ್ಯ ನಾ​ಡಿನ ಜ​ನ​ತೆಯ ಮ​ನೋ​ಭಿಲಾ​ಷೆ​ಯಂತೆ ನನಗೆ ಧ​ಕ್ಕಿದ್ದು, ನಿ​ಮ್ಮ​ ಆ​ಶೀರ್ವಾ​ದದ ಫಲ. ಮು​ಖ್ಯ​ಮಂತ್ರಿ​ಯಾ​ಗಿ​ದ್ದು​ಕೊಂಡು, ಸಾ​ಮಾ​ನ್ಯನಂತೆ ಬ​ದು​ಕು​ವು​ದನ್ನು ಮ​ರೆ​ಯ​ಲಿಲ್ಲ. ಅ​ಸ​ಹಾ​ಯ​ಕರು ಮತ್ತು ಬ​ಡ​ವರ ಬ​ದು​ಕಿನ ಕಷ್ಟಕಾ​ರ್ಪಣ್ಯಗ​ಳಿಗೆ ಸ್ಪಂದಿ​ಸುವ ನಿ​ಟ್ಟಿ​ನಲ್ಲಿ ಆತ್ಮ ಸಾ​ಕ್ಷಿ​ಯಂತೆ ನ​ಡೆ​ದು​ಕೊಂಡಿ​ದ್ದೇನೆ. ಇ​ದು ನನ್ನ ಆತ್ಮ​ಬ​ಲವೊ, ದೌ​ರ್ಬ​ಲ್ಯವೊ ಎಂದು ಭಾ​ವಿ​ಸುವಲ್ಲಿ ಹಿಂಜ​ರಿಕೆ ಇಲ್ಲ. ತ​ನ್ನಂತೆಯೇ ಇ​ರುವ ಮ​ನು​ಷ್ಯರು ಕಷ್ಟಕೋ​ಟ​ಲೆ​ಗ​ಳಿಂದ ಕೊ​ರ​ಗು​ವು​ದನ್ನು ಕಂಡಾಗ ನನ್ನ ಕ​ರಳು, ಮಿ​ಸು​ ಕಾ​ಡು​ತ್ತದೆ. ಹೀ​ಗಾ​ಗಿಯೇ ನನ್ನ ಪ​ದವಿ ಸ್ಥಾ​ನ​ಮಾನ, ಸ​ಂದರ್ಭ​ಗಳ ಲೆ​ಕ್ಕಿ​ಸದೇ ಮತ್ತೆ ಮತ್ತೆ ಕ​ಣ್ಣು​ಗಳು ನೀ​ರಾಗಿ ಬಿ​ಡು​ತ್ತದೆ. ಜ​ನ​ರಿಗಾಗಿ ಮಿ​ಡಿದ ನನ್ನ, ಪಾ​ಲಿನ ಕ​ರ್ತ​ವ್ಯ​ದಲ್ಲಿ ಎ​ಷ್ಟುಸ​ಫ​ಲ, ಎಷ್ಟುವಿ​ಫಲ ಎಂಬುದು ನಿಮ ವಿ​ವೇ​ಚ​ನೆಗೆ ಬಿ​ಟ್ಟದ್ದು.

ಎ​ರಡು ಸ​ಲವು ಮೈತ್ರಿ ಸ​ರ್ಕಾರ​ದ​ಲ್ಲಿಯೇ ಮು​ಖ್ಯ​ಮಂತ್ರಿ​ಯಾ​ಗಿ​ದ್ದ​ರಿಂದ ನನ್ನ ಹೆ​ಬ್ಬ​ಯ​ಕೆ​ಯಂತೆ ಜ​ನ​ ಸಾ​ಮಾ​ನ್ಯರ ದುಃ​ಖ ದು​ಮ್ಮಾ​ನ​ಗ​ಳಿಗೆ ಗ​ರಿಷ್ಟಮ​ಟ್ಟ​ದಲ್ಲಿ ಸ್ಪಂ​ದಿ​ಸಲು ಆ​ಗ​ಲಿಲ್ಲ ಎಂಬ ನೋವು. ಎ​ರಡು ಬಾರಿ ಹೃ​ದಯ ಚಿ​ಕಿ​ತ್ಸೆಗೆ ಒ​ಳ​ಗಾದ ನ​ನ್ನನ್ನು ಈಗಲೂ ಕಾ​ಡು​ತ್ತಿ​ದೆ. ನೀವು ತೋ​ರಿದ ಪ್ರೀ​ತಿ-ಹ​ರ​ಸಿದ ರೀತಿ ನನ್ನ ಬ​ದು​ಕಿನ ಪ​ಥವನ್ನು ಬ​ದ​ಲಿ​ಸಿದ್ದು ದಿಟ. ನನ್ನನ್ನು ಕಂಡರೇ ಅ​ದ್ಯಾಕೊ ಪ​ಕ್ಷ​ತೀ​ತ​ವಾಗಿ ಜ​ನ ಸಾ​ಮಾ​ನ್ಯರು ಬಲು ಇಷ್ಟಪ​ಡು​ತ್ತಾರೆ. ಪ್ರೀತಿ ಎಂಬು​ದನ್ನು ರ​ಕ್ಷಿ​ಸಿ​ಕೊ​ಳ್ಳಲು ಪ್ರೀ​ತಿ​ಯನ್ನಷ್ಟೇ ಬೆ​ರೆ​ಸಿ​ದಾಗ ಸಾಧ್ಯ. ಕ​ರುಣೆ ಸ್ನೇ​ಹದ ಮ​ನೋ​ಗ​ತವೇ ನಾನು. ನಾನು ಸಾ​ಮಾ​ನ್ಯ​ನೊ​ಳಗೆ ಸಾ​ಮಾ​ನ್ಯ​ನಂತೆ ಎ​ಲ್ಲ​ರೊ​ಳ​ಗೊಂಡು ಬ​ದು​ಕಲು ಸಾ​ಧ್ಯ​ವಾ​ಯಿ​ತೇನೊ ಎಂಬ ತೃಪ್ತಿ ಇದೆ. ಈ ಬ​ದುಕೇ ನ​ನ್ನ​ಗಿಷ್ಟ.

ನನ್ನ ಪ​ಕ್ಷದ ಅ​ಭಿ​ಮಾ​ನಿ​ಗಳು, ಕಾ​ರ್ಯ​ಕ​ರ್ತರು ನಾ​ಯ​ಕರು ಅ​ವ​ರಿಗೆ ನ​ನ್ನಿಂದ ವ್ಯ​ಕ್ತಿ​ಗ​ತ​ವಾಗಿ ನೆ​ರವು ಸಿಗ​ದಿ​ದ್ದಾಗ ಸ್ಥಾ​ನ​ಮಾನ ಧ​ಕ್ಕ​ದಿ​ದ್ದರೂ, ಅ​ವರ ಮ​ನೆಯ ಕು​ಟುಂಬ ಸ​ದಸ್ಯ ಎಂಬಂತೆ ಅ​ಭಿ​ಮಾ​ನದ ಪ್ರೀ​ತಿಯ ಹೊಳೆ ಹ​ರಿ​ಸು​ತ್ತಾರೆ. ಇ​ದೊಂದು ಸು​ಕೃತ ಫ​ಲವೇ ಸ​ರಿ. ಈ ನಾ​ಡಿನ ನಿ​ಮ್ಮೆ​ಲ್ಲರ ಪ್ರೀ​ತಿ​ಯನ್ನು ಕ​ಣ್ತುಂಬಿ​ಸಿ​ಕೊ​ಳ್ಳಲು, ಅ​ದ​ರೊ​ಳಗೆ ಮಿಂದು ಮ​ಗು​ವಾ​ಗಲು ಅ​ಪೂ​ರ್ವ​ವಾದ ಸಂದ​ರ್ಭ​ವೊಂದು ಕೂ​ಡಿ​ಬಂದಿದೆ.

ಏ.17​ರಂದು ನನ್ನ ಮ​ಗನ ವಿ​ವಾಹ ರಾ​ಮ​ನ​ಗ​ರ​ದಲ್ಲಿ ನ​ಡೆ​ಯ​ಲಿದೆ. ಇದು ನಿಮ್ಮ ಕು​ಮಾ​ರ​ಣ್ಣನ ಮ​ನೆಯ ಸಂಭ್ರಮ. ಈ ಸಮಾ​ರಂಭ​ದಲ್ಲಿ ನೀ​ವಿದ್ದು, ನನ್ನ ಮಗ -ಸೊ​ಸೆ​ಯನ್ನು ಹ​ರ​ಸಿ​ದರೆ ನಿಮ್ಮ ಆ ಪ್ರೀತಿ ನನ್ನ ಹೃ​ದ​ಯ​ವನ್ನು ಇ​ನ್ನಷ್ಟುಚೈ​ತ​ನ್ಯ ​ಪೂ​ರ್ಣ​ಗೊ​ಳಿ​ಸ​ಲಿದೆ. ಇದನ್ನು ವೈ​ಯ​ಕ್ತಿಕ ಆ​ಮಂತ್ರಣ ಎಂದು ಪ​ರಿ​ಭಾ​ವಿಸಿ, ನೀವು ಮತ್ತು ಕು​ಟುಂಬ​ದ​ವರು ಬ​ರ​ಲೇ​ಬೇಕು. ಜ​ತೆ​ಯಲ್ಲೇ ಕು​ಳಿತು ಊಟ ಮಾ​ಡೋಣ. ಇ​ದ​ಕ್ಕಿಂತ ದೊಡ್ಡ ಸೌ​ಭಾಗ್ಯ ಇ​ನ್ನೇನಿಲ್ಲ. ನಿಮ್ಮ ಆ​ಗ​ಮ​ನದ ನಿ​ರೀ​ಕ್ಷೆ​ಯಲ್ಲಿ ನಿ​ಮ​ಗಾ​ಗಿಯೇ ಕಾ​ಯಿ​ತ್ತಿ​ರು​ತ್ತೇನೆ.

ಇಂತಿ ನಿಮ್ಮ ಮ​ನೆ​ ಮಗ, ಎ​ಚ್‌.​ಡಿ.​ ಕು​ಮಾ​ರ​ಸ್ವಾಮಿ

 

Follow Us:
Download App:
  • android
  • ios