ಉದ್ಯಮಿ ನಿತಿನ್ ರಾಜ್‌ ಜೊತೆ ಸೈಲೆಂಟ್ ಆಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ಪ್ರಣೀತಾ ಸುಭಾಷ್‌ಗೆ ಸೋಷಿಯಲ್ ಮೀಡಿಯಾದಲ್ಲಿ ಶುಭಾಶಯಗಳು ಹರಿದು ಬರುತ್ತಿವೆ. ಸ್ಟಾರ್ ನಟಿ ಸೈಲೆಂಟ್ ವೆಡ್ಡಿಂಗ್ ಬಗ್ಗೆ ಗುಸು ಗುಸು, ಪಿಸು ಪಿಸು ಮಾಡುತ್ತಿರುವ ನೆಟ್ಟಿಗರು ಈಗ ರಮ್ಯಾ ಕಡೆ ಮುಖ ಮಾಡಿದ್ದಾರೆ. 

ಮತ್ತೆ ಚರ್ಚೆಗೆ ಬಂತು ನಟಿ ರಮ್ಯಾ ಮದುವೆ ವಿಚಾರ; ಮೋಹಕ ತಾರೆ ಕೊಟ್ಟ ಉತ್ತರವಿದು! 

ಮೇ. 30ರಂದು ಬೆಂಗಳೂರಿನ ರೆಸಾರ್ಟ್‌ನಲ್ಲಿ ನಡೆದ ಮದುವೆ ಬಗ್ಗೆ ಪ್ರಣೀತಾ ಪೋಸ್ಟ್‌ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಈ ಪೋಸ್ಟ್‌ಗೆ 'ಕಂಗ್ರಾಜುಲೇಷನ್ಸ್ ಪ್ರಣೀತಾ' ಎಂದು ರಮ್ಯಾ ಕಾಮೆಂಟ್ ಮಾಡಿದ್ದಾರೆ. ರಮ್ಯಾ ಕಾಮೆಂಟ್ ನೋಡಿದ ತಕ್ಷಣವೇ ನೆಟ್ಟಿಗರು 'ನಿಮ್ಮ ಮದುವೆ ಯಾವಾಗ?' ಎಂದು ಪ್ರಶ್ನೆ ಮಾಡಿದ್ದಾರೆ.

ಪೃಥ್ವಿ ರಾಣಿ ಯಾದವ್ ಹೆಸರಿನ ಖಾತೆಯಿಂದ 'ಗಿಡ ಮರದಲ್ಲಿ ಬಳ್ಳಿ ಹೂವು ಬಿಟ್ಟಾಯಿತು, ನಿಮ್ಮ ಮದುವೆ ಯಾವಾಗ?' ಎಂದು ಕಾಮೆಂಟ್ ಮಾಡಿದ್ದಾರೆ.  ರಮ್ಯಾ ಮದುವೆ ವಿಚಾರದ ಬಗ್ಗೆ ನೆಟ್ಟಿಗರು ಪ್ರಶ್ನೆ ಮಾಡುತ್ತಿರುವುದು ಇದೇ ಮೊದಲೇನಲ್ಲ. ಪ್ರಶ್ನೆ ಮಾಡಿದಾಗ ರಮ್ಯಾ ಮೌನಕ್ಕೆ ಶರಣಾಗುತ್ತಾರೆ. ವಿಪರೀತ ಎಂದೆನಿಸಿದರೆ ಯಾಕೆ ಮದುವೆ ಬಗ್ಗೆ ಚಿಂತೆ ಎಂದು ಹೇಳಿ, ಸುಮ್ಮನಾಗುತ್ತಾರೆ. ರಮ್ಯಾ ವೈಯಕ್ತಿಕ ಜೀವನ ತುಂಬಾನೇ ಪ್ರೈವೇಟ್ ಆಗಿಟ್ಟಿರುವ ಕಾರಣ ಜನರಿಗೆ ಅವರ ಜೀವನದ ಬಗ್ಗೆ ತಿಳಿದುಕೊಳ್ಳಲು ಕುತೂಹಲ ಹೆಚ್ಚಿದೆ.