ಕ್ಷೇತ್ರಪತಿ ಸಿನಿಮಾ ಕಾರ್ಯಕ್ರಮದಲ್ಲಿ ನವೀನ್ ಮತ್ತು ಅರ್ಚನಾ ಮಾತುಕತೆ ವೈರಲ್. ನಟ-ನಟಿಗಿಂತ ಕೋಲ್ಡ್‌ ವಾರ್‌ ಕಾಣಿಸಿದ್ದೇ ಹೆಚ್ಚು ಎಂದ ನೆಟ್ಟಿಗರು...

ಗುಳ್ಟು ನವೀನ್ ಶಂಕರ್ ಮತ್ತು ಕೆಜಿಎಫ್ ತಾಯಿ ಅರ್ಚನಾ ಜೋಡಿಯಾಗಿ ನಟಿಸಿರುವ ಕ್ಷೇತ್ರಪತಿ ಸಿನಿಮಾ ಉತ್ತರ ಕರ್ನಾಟಕ ಭಾಷೆ ಮತ್ತು ಅಲ್ಲಿನ ರೈತರ ಸಮಸ್ಯೆಗಳ ಬಗ್ಗೆ ಜನರಿಗೆ ತೋರಿಸಿದ್ದಾರೆ. ಟ್ರೈಲರ್ ನೋಡಿದ ಚಿತ್ರ ಹೇಳುತ್ತಿರುವ ಮೆಸೇಜ್‌ ಸುಲಭವಾಗಿ ತಿಳಿಯುತ್ತದೆ. ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ನಟಿ ಆರ್ಚನಾ ಮಾತನಾಡಿದ ವಿಡಿಯೋ ವೈರಲ್ ಆಗುತ್ತಿದೆ. 

'ಚಿತ್ರದ ಬಗ್ಗೆ ಮಾತನಾಡಲು ನನಗೆ ಏನೂ ಇಲ್ಲ ಏಕೆಂದರೆ ಕ್ಷೇತ್ರಪತಿ ಫಸ್ಟ್‌ ಲುಕ್ ಮತ್ತು ಟೀಸರ್ ರಿಲೀಸ್ ಆಗಿದೆ. ಈಗ ಈವೆಂಟ್‌ ಕೂಡ ಮಾಡಿ ಎಲ್ಲಾ ವಿಚಾರಗಳನ್ನು ಜನರಿಗೆ ತಿಳಿಸಿದ್ದೀವಿ ಇನ್ನೇನಿದ್ದರು ಜನರು ಮಾತನಾಡಬೇಕು. ಸಿನಿಮಾ ಬಗ್ಗೆ ಮಾತನಾಡಲು ಬಂದಾಗ ನನ್ನ ತಂದೆ ಅವರ ತಾತನ ಕಾಲದಲ್ಲಿ ನಡೆದ ಘಟನೆಗಳನ್ನು ಹೇಳುತ್ತಿದ್ದರು ಅದು ನೆನಪಾಗಿತ್ತು ನನ್ನ ತಂದೆ ಕಾಲಕ್ಕೆ ವ್ಯವಸಾಯ ನಿಂತಿದೆ. ಸಿನಿಮಾದಲ್ಲಿ ಒಂದು ಒಳ್ಳೆ ಕಥೆ ಹೇಳುತ್ತಿದ್ದೀನಿ ಆಗ ಜನರಿಗೆ ಇದ್ದ ಸಮಸ್ಯೆ ಬಗೆ ಹರಿಯಬೇಕು ಅಲ್ಲದೆ ಈ ಸಿನಿಮಾ ಮೂಲಕ ಇಂತಹ ಸಮಸ್ಯೆಗಳು ಆಗಬಾರದು. ಸಿನಿಮಾ ಬಗ್ಗೆ ಹೆಚ್ಚಿಗೆ ರಿವೀಲ್ ಮಾಡಲಾಗದು. ಬದಲಾವಣೆ ಕಂಡರೆ ಸಿನಿಮಾಗೆ ಸಾರ್ಥಕತೆ ಸಿಗುತ್ತದೆ' ಎಂದು ಅರ್ಚನಾ ಮಾತನಾಡಿದ್ದಾರೆ. 

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗೀತಾ; ಫೋಟೋ ವೈರಲ್ ಆಗುತ್ತಿದ್ದಂತೆ ಫ್ಯಾನ್ಸ್‌ ಫುಲ್ ಶಾಕ್!

'ಮೊದಲಾಗಿ ಇದು ನವೀನ್ ಶಂಕರ್ ಸಿನಿಮಾ. ನವೀನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವುದು. ಹೊಂದಿಸಿ ಬರೆಯಿರಿ ಸಿನಿಮಾ ಸಮಯದಿಂದ ನಮ್ಮ ಪರಿಚಯವಾಗಿದ್ದು ಅದಿಕ್ಕೆ ಜಗನ್‌ ಅವರಿಗೆ ವಂದನೆಗಳನ್ನು ಹೇಳಬೇಕು. ತುಂಬಾ ಪ್ಯಾಶನ್ ಮತ್ತು ಕನಸು ಹೊತ್ತಿಕೊಂಡಿರುವ ವ್ಯಕ್ತಿ ನವೀನ್. ನಾನು ದೊಡ್ಡ ವ್ಯಕ್ತಿ ಅಂತ ಹೇಳುತ್ತಿಲ್ಲ ಒಬ್ಬ ಸ್ನೇಹಿತೆಯಾಗಿ ಅವರ ಯಶಸ್ಸು ನೋಡಲು ಕಾಯುವೆ' ಎಂದು ಅರ್ಚನಾ ಹೇಳಿದ್ದಾರೆ. ತಕ್ಷಣವೇ 'ನಮ್ಮ ಧನು (ನಟ ರಾಕ್ಷಸ ಡಾಲಿ ಧನಂಜಯ್) ಕೂಡ ಹೀಗೆ ಹೇಳುತ್ತಾರೆ. ನಾನೇನೋ ದೊಡ್ಡ ಹೀರೋ ಅನ್ನೋ ರೀತಿ ಹೇಳುತ್ತಿರುತ್ತೀನಿ' ಎಂದು ನವೀನ್ ಶಂಕರ್ ಹೇಳುತ್ತಾರೆ. ಆದರೆ ಅರ್ಚನಾ 'ನಾನು ಏನೋ ದೊಡ್ಡ ವ್ಯಕ್ತಿ ಅಂದ್ಕೊಂಡು ಹೇಳಲಿಲ್ಲ ಪ್ರಾಮಾಣಿಕವಾಗಿ ಸ್ನೇಹಿತೆಯಾಗಿ ಒಳ್ಳೆ ಮನಸ್ಸಿನಿಂದ ವಿಶ್ ಮಾಡುತ್ತೀನಿ. ತುಂಬಾ ದೊಡ್ಡ ಯಶಸ್ಸು ನಿಮ್ಮ ಪರಿಶ್ರಮಕ್ಕೆ ತಂದುಕೊಡಬೇಕು ನಿರ್ದೇಶಕರು ಮತ್ತು ನಿರ್ಮಾಪಕರ ಪರಿಶ್ರಮಕ್ಕೆ ಯಶಸ್ಸು ಸಿಗಬೇಕು' ಎಂದು ಅರ್ಚನಾ ಹೇಳಿದ್ದಾರೆ. 

ಟ್ರೈಲರ್ ಲಾಂಚ್ ಸಮಯದಲ್ಲಿ ಎಷ್ಟು ಮಂದಿ ಕೇಳಿಸಿಕೊಂಡಿದ್ದೀರಾ ಗೊತ್ತಿಲ್ಲ ಸಿನಿಮಾ ಸೋತರು ಪರ್ವಾಗಿಲ್ಲ ಇನ್ನೂ ಮೂರು ಸಿನಿಮಾ ಮಾಡೋಣ ನಾವು ಸ್ಯಾಲರಿಡ್‌ ಇದ್ದೀವಿ ಇದರಿಂದ ಬಂದ ಹಣವನ್ನು ಕೂಡಿಟ್ಟುಕೊಳ್ಳುತ್ತೀವಿ ಎಂದು ಹೇಳಿದ ಮಾತುಗಳು ನನಗೆ ಇಷ್ಟ ಆಯ್ತು. ಎಷ್ಟು ಜನ ಈ ರೀತಿ ಮಾತನಾಡುತ್ತಾರೆ ಯೋಚನೆ ಮಾಡುತ್ತಾರೆ' ಎಂದಿದ್ದಾರೆ ಅರ್ಚನಾ. 

ಇಂದ್ರಜಿತ್ ಲಂಕೇಶ್ ಪುತ್ರ ಸಮರಜಿತ್‌ ಜೊತೆ ಬಿಗ್ ಬಾಸ್ ಸಾನ್ಯ ಅಯ್ಯರ್

ಈ ವಿಡಿಯೋ ವೈರಲ್ ಆಗಲು ಕಾರಣ ಇಷ್ಟೆ...ಸಾಮಾನ್ಯವಾಗಿ ನಾಯಕ-ನಾಯಕಿ ಸಿನಿಮಾ ರಿಲೀಸ್ ಸಮಯದಲ್ಲಿ ತುಂಬಾ ಹೊಂದಾಣಿಕೆಯಲ್ಲಿ ಮಾತನಾಡುತ್ತಾರೆ ಜೊತೆಯಾಗಿ ಸಿನಿಮಾ ಯಶಸ್ಸು ಕಾಣುತ್ತಾರೆ ಆದರೆ ಅರ್ಚನಾ ಮತ್ತು ನವೀನ್ ನಡುವೆ ಕೋಲ್ಡ್‌ ವಾರ್‌ ಇದೆ ಎಂದು ಈಗ ಎದ್ದು ಕಾಣುತ್ತಿದೆ. ಅವರಿಬ್ಬರು ಮಾತನಾಡುವುದೇ ಹಾಗಾ ಅಥವಾ ಏನಾದರೂ ಸಮಸ್ಯೆ ಇದ್ಯಾ ಎಂದು ಪ್ರಶ್ನೆ ಅಭಿಮಾನಿಗಳದ್ದು.