ʼನವರಸನಾಯಕʼ ಜಗ್ಗೇಶ್ ಅವರು ಮಹಾಕುಂಭಮೇಳದಲ್ಲಿ ಭಾಗಿಯಾಗಿದ್ದು, ಮುಂಬರುವ ಪೀಳಿಗೆಗಳ ಬಗ್ಗೆ ಆತಂಕ ಹೊರಹಾಕಿದ್ದಾರೆ. ಈ ಬಗ್ಗೆ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ.
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭಮೇಳ ನಡೆಯುತ್ತಿದೆ. ಫೆಬ್ರವರಿ 26ಕ್ಕೆ ಇದು ಮುಕ್ತಾಯವಾಗಲಿದೆ. ಕುಂಭಮೇಳದಲ್ಲಿ ಭಾಗಿಯಾದ ನಟ, ರಾಜಕಾರಣಿ ಅವರು ಈ ಬಗ್ಗೆ ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ.
ನಟ ಜಗ್ಗೇಶ್ ಪೋಸ್ಟ್ ಏನು?
ಕಳೆದಬಾರಿ 1880ರಲ್ಲಿ ನಡೆದದ್ದು ಈ ಮಹಾಕುಂಭಮೇಳ. ನನ್ನ ತಾತನ ಜನನ ಆದದ್ದು 1896 ಅಂದರೆ ನಮ್ಮ ತಾತ ಹುಟ್ಟುವ 16ವರ್ಷದ ಹಿಂದೆ..! ನಮ್ಮ ತಾತನಿಂದ ನನ್ನ ಮೊಮ್ಮಗ ಅರ್ಜುನ 5ನೇ ತಲೆಮಾರಿಗೆ ಬಂದಿದೆ..! ಮುಂದಿನ ಬಾರಿ ಈ ಮಹಾಕುಂಭ ಬರೋದು 2170 ಇಸವಿಯಲ್ಲಿ!
ಅಂದರೆ ನಮ್ಮ ಮುಂದಿನ 5 ತಲೆಮಾರಿನ ಬದುಕು ಇಲ್ಲವಾಗಿರುತ್ತದೆ! ನಾನು, ನನ್ನದು, ನನ್ನ ಹಣ, ನನ್ನ ಮನೆ, ನನ್ನ ಹೆಂಡತಿ, ನನ್ನ ಮಕ್ಕಳು, ನನ್ನ ಪರಿವಾರ ಎನ್ನುವ ಕಥೆ ಏನಾಗಿರುತ್ತದೆಯೋ ದೇವರೆ ಬಲ್ಲ! ಕಡೆಯಪಕ್ಷ ನಮ್ಮ ಚಿತ್ರಪಟವು ಗೋಡೆಯಿಂದ ಮರೆಯಾಗಿ ಹಟ್ಟಸೇರುತ್ತೆ ಇಲ್ಲ ಕಸದ ಜೊತೆ ಲೀನ!
'ನನ್ನ ಪ್ರೀತಿಯ ರಾಮು' ಬೇರೆ ನಟರು ರಿಜೆಕ್ಟ್ ಮಾಡಿದ್ಯಾಕೆ? ದರ್ಶನ್ ಸೂಚಿಸಿದ್ದು ಪುನೀತ್ ಮ್ಯಾನೇಜರ್!
ನಾವು ದುಡಿದದ್ದು ಮುಂದಿನವರು ಉಳಿಸಿಕೊಂಡಿದ್ದರೆ ಅಲ್ಪಸ್ವಲ್ಪ ಹರಟೆಯಲ್ಲಿ ನಮ್ಮ ಹೆಸರು ಬಂದುಹೋಗಬಹುದು! ಆದರೆ ಯಾರು ಹೋದರೂ ಕೂಡ ಒಬ್ಬರ ನೆನಪಲ್ಲಿ ಉಳಿದೆ ಇರುತ್ತಾರೆ. ಅವರೆ ಶಾರದಾಸುತರು ಅಂದರೆ ಗಾಯಕರು, ನಟರು ನಟಿಯರು ಸಂಗೀತ ವಿದ್ವಾಂಸರು, ಲೇಖಕರು. ಅಲ್ಲಿಗೆ ಯಾವ ಪುರುಷಾರ್ಥಕ್ಕೆ ಮನುಷ್ಯರು ನಾವು ನಾವೆ, ನಮ್ಮದೆ, ನಂದೆ, ನಾನಿಲ್ಲದೆ, ಎಂಬ ಅಜ್ಞಾನ ಬೇರೂರಿದೆ ಒಳಗೆ. ಈ ಮಹಾಕುಂಭಕ್ಕೆ ಆಧ್ಯಾತ್ಮಿಕ ಸಾಧನೆಗೆ ಹೋದವರಿಗೆ ನಾನು ಮೇಲೆ ಹೇಳಿದ್ದ ಎಲ್ಲಾ ಮಾತುಗಳು ಮಾನಸದಲ್ಲಿ ಮಜ್ಜನವಾಗಿ ನನ್ನ ದೇಹವಲ್ಲ ಮುಂದೆ ಮಣ್ಣು ಎಂಬ ಅರಿವು ಮನದ ಆಳಕ್ಕೆ ಹೋಗಿ ಮನನವಾಗಿ ಮೌನವಾಗಿ ಅಹಂಕಾರ ಅಡಗಿ ಶಾಂತವಾಗುತ್ತದೆ ಮನಸ್ಸು. ನಾನು ಹೋದೆ ನೋಡಿದೆ ಬಂದೆ ಎನ್ನುವವರಿಗೆ ಅವರ ಬದುಕಿನ ಮತ್ತೊಂದು ಪ್ರವಾಸ ಅನ್ನಿಸುತ್ತದೆ.
ನಾನು ಭಾವುಕನಾದೆ, ನನ್ನ ವಂಶದ ಎಲ್ಲಾ ಹಿರಿಯರ ನೆನೆದೆ, ಮುಂದಿನ ಪೀಳಿಗೆಯ ಮಕ್ಕಳಿಗೆ ಶುಭಕೋರಿದೆ. ನನಗನ್ನಿಸಿದ್ದು ದೇವರ ಕೃಪೆಯಿಲ್ಲದೆ ನಮ್ಮ ಬದುಕಿನ ಆಟ ಯಾವುದು ನಡೆಯದು. ಇನ್ನು ಸಮಯವಿದೆ ಹೋಗುವವರು ಹೋಗಿಬನ್ನಿ, ಮತ್ತೆ ನೋಡಲಾಗದು ಈ ಮಹಾಕುಂಭ. ಸರ್ವೇಜನಾಃಸುಖಿನೋಭವಂತು.
ಅಣ್ಣಾವ್ರು ಮನೆಲ್ಲಿ 'ತತ್ತಯ್ಯಾ' ಅಂತಿದ್ರು..; ಅದ್ನ ಅಪ್ಪು ಬಾಯಲ್ಲಿ ಕೇಳಿ, ಎಂಥಾ ಸೊಗಸು!
ಕುಂಭಮೇಳ ಎಂದರೇನು?
ಪ್ರತಿ 3 ವರ್ಷಗಳಿಗೊಮ್ಮೆ ಹರಿದ್ವಾರ, ಉಜ್ಜಯನಿ, ಪ್ರಯಾಗರಾಜ್, ನಾಸಿಕ್‌ನಲ್ಲಿ ನಡೆಯುವ ಜಾತ್ರೆಯನ್ನು ಕುಂಭ ಅಂತ ಹೇಳುವರು. ಪ್ರತಿ 6 ವರ್ಷಗಳಿಗೊಮ್ಮೆ ಹರಿದ್ವಾರ, ಪ್ರಯಾಗ್‌ರಾಜ್‌ನಲ್ಲಿ ನಡೆಯುವ ಕುಂಭವನ್ನು ಅರ್ಧ ಕುಂಭ ಅಂತ ಕರೆಯುವರು. ಪ್ರತಿ 12 ವರ್ಷಗಳಿಗೊಮ್ಮೆ ಪ್ರಯಾಗರಾಜ್‌ಲ್ಲಿ ನಡೆಯುವ ಕುಂಭವನ್ನು ಪೂರ್ಣ ಕುಂಭಮೇಳ ಎನ್ನುವರು. 144 ವರ್ಷಗಳಿಗೊಮ್ಮೆ ಪ್ರಯಾಗರಾಜ್‌ನಲ್ಲಿ ನಡೆಯುವ ಕುಂಭಮೇಳವನ್ನು ಮಹಾಕುಂಭಮೇಳ ಎಂದು ಕರೆಯುವರು. ಈ ಮೇಳದಲ್ಲಿ ವ್ಯಕ್ತಿಯು ಗಂಗಾ ಇನ್ನಿತರ ಪವಿತ್ರ ನದಿಗಳಲ್ಲಿ ಸ್ನಾನ ಮಾಡಿದರೆ, ಆ ವ್ಯಕ್ತಿ ಮೋಕ್ಷಕ್ಕೆ ಹೋಗುತ್ತಾನೆ ಎನ್ನಲಾಗಿದೆ.
