Asianet Suvarna News Asianet Suvarna News

ರಾಮಮಂದಿರ ಉದ್ಘಾಟನೆಯಂದೆ ನಡೆಯುತ್ತೆ ನಾಮಕರಣ: ಧ್ರುವ ಸರ್ಜಾ ಮಕ್ಕಳಿಗೆ ಇಡೋ ಹೆಸರೇನು ಗೊತ್ತಾ?

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೂ ಆಂಜನೇಯನಿಗೂ ಬಿಡಿಸಲಾಗದ ನಂಟು. ಧ್ರುವನ ಮನೆ ಮನದ ದೇವ್ರು ಆಂಜನೇಯ.. ಹನುಮ ಭಕ್ತನಾಗಿರೋ ಧ್ರುವ ಎಲ್ಲೇ ಹೋದ್ರು ಜೈ ಆಂಜನೇಯ ಅಂತ ಹೇಳದೇ ಮಾತು ಮುಗಿಸೋಲ್ಲ.. ಅವರ ಸಿನಿಮಾದಲ್ಲೂ ಆಂಜನೇಯನ ಚಿಕ್ಕದೊಂದು ಸೀನ್ ಇದ್ದೇ ಇರುತ್ತೆ. 

Naming will take place at the inauguration of Ram Mandir Do you know the name of Dhruva Sarjas children gvd
Author
First Published Jan 11, 2024, 8:03 PM IST | Last Updated Jan 11, 2024, 8:03 PM IST

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೂ ಆಂಜನೇಯನಿಗೂ ಬಿಡಿಸಲಾಗದ ನಂಟು. ಧ್ರುವನ ಮನೆ ಮನದ ದೇವ್ರು ಆಂಜನೇಯ.. ಹನುಮ ಭಕ್ತನಾಗಿರೋ ಧ್ರುವ ಎಲ್ಲೇ ಹೋದ್ರು ಜೈ ಆಂಜನೇಯ ಅಂತ ಹೇಳದೇ ಮಾತು ಮುಗಿಸೋಲ್ಲ.. ಅವರ ಸಿನಿಮಾದಲ್ಲೂ ಆಂಜನೇಯನ ಚಿಕ್ಕದೊಂದು ಸೀನ್ ಇದ್ದೇ ಇರುತ್ತೆ. ನಟ ಧ್ರುವ ಸರ್ಜಾ ಆಂಜನೇಯನ ಪರಮ ಭಕ್ತ. ಆಂಜನೇಯ ಶ್ರೀರಾಮನ ಪರಮ ಭಕ್ತ. ಅಯೋಧ್ಯೆಯಲ್ಲಿ ಇದೇ ಜನವರಿ 22ಕ್ಕೆ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಆಗಲಿದೆ. ಈ ಕ್ಷಣಕ್ಕಾಗಿ ಇಡೀ ದೇಶವೇ ಕಾತುರದಿಂದ ಕಾಯುತ್ತಿದೆ. 

ಆ ದಿನದಂದು ಅಯೋಧ್ಯೆಯಲ್ಲಿ ರಾಮನ ಹಬ್ಬ ನಡೆಯುತ್ತಿದ್ರೆ, ಇತ್ತ ಕಡೆ ಹನುಮ ಭಕ್ತ ಧ್ರುವ ಸರ್ಜಾ ಮನೆಯಲ್ಲೂ ದೊಡ್ಡ ಸಂಭ್ರಮವೊಂದು ಆಗಲಿದೆ. ಧ್ರುವ ಸರ್ಜಾ ಹಾಗು ಪತ್ನಿ ಪ್ರೇರಣಾ ಎರಡು ಮಕ್ಕಳ ಪೋಷಕರು. ಧ್ರುವಗೆ ಒಂದು ಹೆಣ್ಣು ಒಂದು ಗಂಡು ಮಗುವಿದೆ. 2022ರ ಅಕ್ಟೋಬರ್ 2ನೇ ತಾರೀಖು ಧ್ರುವ ಸರ್ಜಾ ಹಾಗೂ ಪ್ರೇರಣಾ ದಂಪತಿಗೆ ಹೆಣ್ಣು ಮಗು ಜನಿಸಿತ್ತು. ಅಷ್ಟೆ ಅಲ್ಲ ಕಳೆದ ವರ್ಷ 2024ರ ಸೆಂಪ್ಟೆಂಬರ್ನಲ್ಲಿ ಧ್ರುವ ದಂಪತಿಗೆ ಗಂಡು ಮಗು ಜನಿಸಿತ್ತು. 

ಆದ್ರೆ ಈ ಇಬ್ಬರು ಮಕ್ಕಳಿಗೆ ಇನ್ನೂ ನಾಮಕರಣ ಮಾಡಿಲ್ಲ. ಮಕ್ಕಳ ನಾಮಕರಣಕ್ಕೆ ರೈಟ್ ಟೈಂಗಾಗಿ ಧ್ರುವ ಕಾಯ್ತಾ ಇದ್ರು. ಆ ಟೈಂ ಈಗ ಕೂಡ ಬಂದಿದೆ. ಮುದ್ದು ಮಕ್ಕಳ ನಾಮಕರಣಕ್ಕೆ ಧ್ರುವ ಫ್ಯಾಮಿಲಿ ಪ್ಲಾನ್ ಮಾಡಿದ್ದಾರೆ. ಜನವರಿ 22ಕ್ಕೆ ಅಯೋಧ್ಯದಲ್ಲಿ ರಾಮ ಮಂದಿರ ಉದ್ಘಾಟನೆ ಆಗ್ತಿದೆ. ಆ ದಿನ ಇಡೀ ದೇಶವೇ ಸಂಭ್ರಮದಲ್ಲಿರುತ್ತೆ. ಈ ಕಡೆ ರಾಮನ ಭಕ್ತ ಆಂಜನೇಯನ ಆರಾಧಕ ಧ್ರುವ ಸರ್ಜಾ ಮಕ್ಕಳಿಗೆ ನಾಮಕರಣ ಮಾಡುತ್ತಿದ್ದಾರೆ. ರಾಮ ಮಂದಿರ ಉದ್ಘಾನಟೆ ದಿನವೇ ಮಕ್ಕಳಿಗೆ ಹೆಸರಿಡುತ್ತಿದ್ದಾರೆ ಧ್ರುವ ಸರ್ಜಾ. 

ಹಸಿರು ಸೀರೆಯಲ್ಲಿ ಕ್ಯೂಟ್ ಪೋಸ್ ಕೊಟ್ಟ ಶ್ರೀಲೀಲಾ: ಕರ್ನಾಟಕದ ಸಂಪ್ರದಾಯಸ್ತ ಹೆಣ್ಣು ಎಂದ ಫ್ಯಾನ್ಸ್‌!

ಧ್ರುವ ಸರ್ಜಾ ಮಕ್ಕಳ ಹೆಸರೇನು ಅಂತ ಅವರ ಅಭಿಮಾನಿಗಳು ಹುಡುಕುತ್ತಿದ್ರು. ಈಗ ಮಕ್ಕಳ ಹೆಸರನ್ನ ರಿವೀಲ್ ಮಾಡ್ತಿದ್ದಾರೆ ಧ್ರುವ. ರಾಮ ಮಂದಿರದ ದಿನವೇ ಮಕ್ಕಳ ನಾಮಕರಣ ಮಾಡುತ್ತಿರೋ ಧ್ರುವ ಮಕ್ಕಳಿಗೆ ರಾಮಾಯಣದಲ್ಲಿ ಬರೋ ಎರಡು ಪವರ್ ಫುಲ್ ಹೆಸರನ್ನೇ ಇಡುತ್ತಿದ್ದಾರಂತೆ. ಬೆಂಗಳೂರಿನ ಖಾಸಗಿ ಹೋಟೆಲ್ ಅಥವ ಚಿರು ಸರ್ಜಾ ಸಮಾಧಿ ಇರೋ ನೆಲಗುಳಿಯಲ್ಲಿ ಮಕ್ಕಳ ನೇಮಿಂಗ್ ಸೆರ್ಮನಿ ಕಾರ್ಯಕ್ರಮ ನಡೆಯಲಿದೆಯಂತೆ. ಈ ಮೂಲಕ ರಾಮ ಮಂದಿರ ಉದ್ಘಾನಟೆ ಆಗೋ ಐತಿಹಾಸಿಕ ದಿನದಂದೇ ಧ್ರುವ ಸರ್ಜಾ ಮಕ್ಕಳ ನಾಮಕರಣ ನಡೆಯಲಿದೆ. 

Latest Videos
Follow Us:
Download App:
  • android
  • ios