Asianet Suvarna News Asianet Suvarna News

ಎಲ್ಲರೂ ರಾಜ್ ಕುಮಾರ್ ಆಗಲು ಸಾಧ್ಯವಿಲ್ಲ: ದರ್ಶನ್ ವಿಷಯದಲ್ಲಿ ಕೋಪ ಸ್ವಲ್ಪ ಮಿತಿ ಮೀರಿತು ಎಂದ ಗುರುಕಿರಣ್!

ಜನರಿಗೆ ಒಳ್ಳೇದು ಬೇಡ ಕೆಟ್ಟದ್ದು ಬೇಕು. ದರ್ಶನ್ ಕೇಸಲ್ಲೂ ಅಷ್ಟೇ ವೀವ್ಸ್ ಸಿಗುತ್ತೆ ಪ್ರಚಾರ ಸಿಗುತ್ತೆ. ಜೈಲಿಗೆ ಎಲ್ಲರನ್ನು ಭೇಟಿಯಾಗಲು ಹೋಗ್ತಾರೆ. ಆದರೆ ದರ್ಶನ್ ಮಾತ್ರ ತೋರಿಸ್ತಾರೆ ಅಷ್ಟೇ ಎಂದು ಸಂಗೀತ ನಿರ್ದೇಶಕ ಡಾ. ಗುರುಕಿರಣ್ ಹೇಳಿದರು.
 

music director gurukiran react on darshans renukaswamy murder case at mangaluru gvd
Author
First Published Sep 20, 2024, 4:47 PM IST | Last Updated Sep 20, 2024, 4:47 PM IST

ಮಂಗಳೂರು (ಸೆ.20): ರೇಣುಕಾಸ್ವಾಮಿ ಕೊಲೆ ಪ್ರಕರಣ ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿ ಆಗಿದೆ. ಸಿನಿಮಾಕ್ಕೂ ಅದಕ್ಕೂ ಸಂಬಂಧ ಇಲ್ಲ, ಸಿನಿಮಾ ನಟ ಆಗಿದಕ್ಕೆ‌ ಅದು‌ ಮಾಡಿದಲ್ಲ, ವೈಯಕ್ತಿಕ ವಿಚಾರಕ್ಕೆ ಅವರು ರಿಯಾಕ್ಟ್ ಮಾಡಿರೋದು ಎಂದು ದರ್ಶನ್ ಆ್ಯಂಡ್ ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಗೀತ ನಿರ್ದೇಶಕ ಡಾ. ಗುರುಕಿರಣ್ ಹೇಳಿದರು. ರಾಜ್ ಕುಮಾರ್ ಒಂದು ಪ್ರಿನ್ಸಿಪಲ್ ಸೆಟ್ ಮಾಡಿದ್ದರು. ಇವತ್ತಿಗೂ ಎಲ್ಲರೂ ರಾಜ್ ಕುಮಾರ್ ಅವರಿಗೆ ಗೌರವ ಕೊಡ್ತಾರೆ. ಎಲ್ಲರೂ ರಾಜ್ ಕುಮಾರ್ ಆಗೋದಕ್ಕೆ ಆಗಲ್ಲ. ದರ್ಶನ್ ವಿಷಯದಲ್ಲಿ ಕೋಪ ಸ್ವಲ್ಪ ಮಿತಿ ಮೀರಿತು ಎಂದು ಅನಿಸುತ್ತೆ ಎಂದು ತಿಳಿಸಿದರು.

ಜನರಿಗೆ ಒಳ್ಳೇದು ಬೇಡ ಕೆಟ್ಟದ್ದು ಬೇಕು. ದರ್ಶನ್ ಕೇಸಲ್ಲೂ ಅಷ್ಟೇ ವೀವ್ಸ್ ಸಿಗುತ್ತೆ ಪ್ರಚಾರ ಸಿಗುತ್ತೆ. ಜೈಲಿಗೆ ಎಲ್ಲರನ್ನು ಭೇಟಿಯಾಗಲು ಹೋಗ್ತಾರೆ. ಆದರೆ ದರ್ಶನ್ ಮಾತ್ರ ತೋರಿಸ್ತಾರೆ ಅಷ್ಟೇ. ಘಟನೆ ಸಂದರ್ಭ ಅಲ್ಲಿ ಏನು ನಡೆದಿದೆ ಎಂದು ಗೊತ್ತಿಲ್ಲ. ಕಾನೂನು, ತನಿಖೆ ಮೂಲಕ‌ ಸತ್ಯ ಹೊರ ಬರುತ್ತೆ. ಪೊಲೀಸರು ಸೆಲೆಬ್ರಿಟಿ ಎಂದು ನೋಡದೆ ಉತ್ತಮ ಕೆಲಸ ಮಾಡಿದ್ದಾರೆ. ದರ್ಶನ್ ಹೊರಗಡೆ ಬಂದ್ರೆ ನಮಗೂ ಖುಷಿ. ತಪ್ಪಿತಸ್ಥ ಅಂತಾ ಆದ್ರೆ ಈ ಮಣ್ಣಿನ ಕಾನೂನಿಗೆ ಗೌರವಿಸಬೇಕು ಎಂದರು ಗುರುಕಿರಣ್.

ಲಂಗೋಟಿಯೇ ಹೀರೋ ಆಗಿರುವ ಚಿತ್ರ ಲಂಗೋಟಿ ಮ್ಯಾನ್‌: ನಿರ್ದೇಶಕಿ ಸಂಜೋತ ಭಂಡಾರಿ

ಹುಡುಗಿಯರ ಶೋಷಣೆ ಚಿತ್ರರಂಗದಲ್ಲಿ ಮಾತ್ರ ನಡೆಯುತ್ತಿದೆಯಾ?: ಸಿನಿಮಾ ರಂಗದಲ್ಲಿ ಹೆಣ್ಣುಮಕ್ಕಳ ಶೋಷಣೆಯನ್ನು ತಡೆಯಲು ಕೇರಳ ಮಾದರಿ ಕಮಿಟಿ ರಚಿಸಲು ಆಗ್ರಹ ವಿಚಾರವಾಗಿ ಮಾತನಾಡಿದ ಅವರು, ಹುಡುಗಿಯರ ಶೋಷಣೆ ಚಿತ್ರರಂಗದಲ್ಲಿ ಮಾತ್ರ ನಡೆಯುತ್ತಿದೆಯಾ..? ಕಾಲೇಜ್, ಪ್ರೆಸ್, ಫ್ಯಾಕ್ಟರಿ, ಆಫೀಸ್ ಎಲ್ಲಾ ಕಡೆಯಲ್ಲೂ ನಡೆಯುತ್ತಿದೆ. ಸಿನಿಮಾದಲ್ಲಿ ಮಾತ್ರ ಎಂದು ತೋರಿಸೋದು ಕಷ್ಟ, ಬೇರೆ ಫೀಲ್ಡ್ ಗಳಲ್ಲಿ ಟಚ್ ಮಾಡಬೇಕೆಂದು ಇಲ್ಲ, ಆದ್ರೆ ಸಿನಿಮಾದಲ್ಲಿ ಹಾಗೆ ಆಗಲ್ಲ, ಸಿನಿಮಾದಲ್ಲಿ ಕಲಾವಿದರು‌ ಅಂತಾ ಬಂದಾಗ ಪ್ರತಿಕ್ರಿಯಿಸಬೇಕಾಗುತ್ತೆ. ಇಷ್ಟು ವರ್ಷದಿಂದ ಇದು ನಡೆಯುತ್ತಿದೆ. ಇದಕ್ಕೊಂದು ಕಮಿಟಿ ಅಂತಾ ಮಾಡಿದಾಗ ಇನ್ನಷ್ಟು ತೊಂದ್ರೆ ಆಗುತ್ತೆ ಎಂದರು.

ಈಗಾಗಲೇ ಸಿನಿಮಾ ರಂಗದಲ್ಲಿ ಸಾಕಷ್ಟು ನಿಯಮ ಹೇರಲಾಗಿದೆ. ಇದಕ್ಕೊಂದು ನೇಮಕ ಮಾಡಿದ ಮಹಿಳೆ ಸಿನಿಮಾ ಶೂಟಿಂಗ್ ಸ್ಥಳದಲ್ಲಿ ಬಂದು ಕೂರ್ತಾರೆ. ಇದಕ್ಕೆ ನಿರ್ಮಾಪಕನೆ ಹಣ ಕೊಡಬೇಕು. ಆಗಲ್ಲ ಎಂಬ ಗ್ಯಾರಂಟಿ ಯಾರು ಕೊಡ್ತಾರೆ. ಇದರಲ್ಲಿ ಮೂರು ಬಿಟ್ಟವರು ಕೆಲವರು ಇರ್ತಾರೆ, ಬ್ಲ್ಯಾಕ್ ಮೇಲ್ ಮಾಡೋದಕ್ಕೆ ಶುರು ಮಾಡಿದ್ರೆ, ಪ್ರತಿಯೊಂದು ಕಾನೂನಿನಲ್ಲಿ‌ ಎಷ್ಟೊಂದು ಲೋಪದೋಷ ಇಲ್ಲ, ದೌರ್ಜನ್ಯ, ಅತ್ಯಾಚಾರಕ್ಕೆ ಯತ್ನ, ಪೋಕ್ಸೋ ಇವುಗಳಲ್ಲಿ 30% ಸುಳ್ಳು ಪ್ರಕರಣಗಳಿರುತ್ತೆ, ಮೊದಲೇ ಸಿನಿಮಾರಂಗದಲ್ಲಿ ಸಾಕಷ್ಟು ತೊಂದರೆಗಳಿವೆ, ಮತ್ತೆ ಇನ್ನೊಂದು ಯಾರು ಬಂದು ಕೂರ್ತಾರೆ ಅಂದ್ರೆ, ಅಲ್ಲೂ ಭ್ರಷ್ಟಾಚಾರ ಪ್ರಾರಂಭ ಆಗುತ್ತೆ.

ಹಾರರ್‌ ಅಂದ್ರೆ ಭಯ, ಗಂಡನ ಪಕ್ಕ ಕೂತು 'ಹಗ್ಗ' ಸಿನಿಮಾ ನೋಡಿದೆ: ಅನು ಪ್ರಭಾಕರ್‌

ತೊಂದ್ರೆ ಅಂತಾ ಹೇಳ್ತಾರೆ ಆದ್ರೆ ಅದನ್ನು ನಿರೂಪಿಸಬೇಕು. ಅದಕ್ಕಾಗಿ ಕೋರ್ಟ್ ಸೇರಿದಂತೆ ರೆಗ್ಯುಲರ್ ಆದ ಸಿಸ್ಟಂ ಇದೆ, ಪ್ರತಿಯೊಂದಕ್ಕೂ ಕಮಿಟಿ ಮಾಡಿದ್ರೆ ಕೆಲಸ ಮಾಡೋಕ್ಕೆ ಆಗಲ್ಲ. ಅಲ್ಲಿಂದ ಸಮಸ್ಯೆಗಳು ಶುರುವಾಗುತ್ತೆ. ಜನ ಪೂರ್ತಿ ಸಿನಿಮಾ ರಂಗವನ್ನು ಡೌಟ್ ನಲ್ಲಿ‌ ನೋಡೊದಕ್ಕೆ ಶುರು ಮಾಡ್ತಾರೆ. ಹೊರಗಡೆ ಒಂದು ಸರ್ಕಲ್ ಇದೆ, ಅವರು ಯಾರು ಪಿಚ್ಚರ್ ಮಾಡಲ್ಲ. ಅವರು ಈ ರೀತಿ ಫ್ರಾಡ್ ಮಾಡ್ತಾ ಇದ್ದಾರೆ. ಕೆಲಸ ಇದ್ದವರು ಯಾರೂ ಇಂತಹ ಒತ್ತಾಯ ಮಾಡಲ್ಲ. ಪಬ್ಲಿಸಿಟಿಗೆ ಬೇಕಾಗಿ ಈ ರೀತಿ ಮಾಡುತ್ತಾರೆ. ಲೀಡರ್ ಆಗಬೇಕೆಂದು ಈ ರೀತಿ ಮಾಡ್ತಾರೆ ಎಂದು ಗುರುಕಿರಣ್ ಹೇಳಿದರು.

Latest Videos
Follow Us:
Download App:
  • android
  • ios