ಜನರ ಸೇವೆಯಲ್ಲಿ ತೊಡಗಿರುವ ನಟ ಪ್ರಥಮ್‌ಗೆ ಬೆಂಬಲ ಕೊಟ್ಟ ಅಬಕಾರಿ ಸಚಿವರು. ಸದಾ ಜನರ ಸೇವೆಗೆ ಪ್ರಥಮ್ ಮುಂದು. 

ಲಾಕ್‌ಡೌನ್‌ ಆರಂಭದಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ನಟ ಪ್ರಥಮ್‌ಗೆ ರಾಜಕಾರಣಿಗಳು ಹಾಗೂ ಕನ್ನಡ ಚಿತ್ರರಂಗದ ಕಲಾವಿದರು ಬೆಂಬಲ ನೀಡುತ್ತಲೇ ಬಂದಿದ್ದಾರೆ. ಕೆಲವರು ಪ್ರಥಮ್ ಕೆಲಸ ಮೆಚ್ಚಿಕೊಳ್ಳದಿದ್ದರೂ ಅವರು ಮಾಡಿದ ಮಾನವೀಯ ಕಾರ್ಯಗಳು ಹೀಗಿವೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪ್ರಥಮ್ ಮಾತು:

'ನನ್ನ ಸಂಪರ್ಕದಲ್ಲಿರುವವರನ್ನು ಈವರೆಗೂ ವೈಯಕ್ತಿಕ ವಿಚಾರಕ್ಕೆಂದು ಬಳಿಸಿಕೊಂಡಿದ್ದೇ ಇಲ್ಲ. ನಾನು ಹೇಳಿದ್ದೆ ಅಲ್ವಾ? ಶೀಘ್ರದಲ್ಲೇ ಲೀಡರ್‌ ಒಬ್ಬರು ರೇಷನ್ ಕಿಟ್ ಕಳಿಸ್ತಾರೆ ಅಂತ. ಅಬಕಾರಿ ಸಚಿವರಾದ ಕೆ.ಗೋಪಾಲಯ್ಯ ಸರ್ ನಮ್ಮ ತಂಡದ ಕಾರ್ಯ ಮೆಚ್ಚಿ ಅತ್ಯುತ್ತಮ ಗುಣಮಟ್ಟದ ಒಂದು ಗಾಡಿ ತುಂಬಾ ರೇಷನ್‌ ಕಿಟ್‌ಗಳನ್ನು ಹಾಗೂ ನನ್ನ ಮನವಿ ಮೇರೆಗೆ ಅಕ್ಕಿ ಚೀಲ ಕಳುಹಿಸಿದ್ದಾರೆ. ಸ್ವಲ್ಪ ಇಲ್ಲಿನ ಕಾರ್ಮಿಕರಿಗೆ ಕೊಟ್ಟು ಉಳಿದದ್ದನ್ನು ಬೆಂಗಳೂರಿನ ಹೊರಗೆ ಉತ್ತರ ಕರ್ನಾಟಕದ ಕಡೆ ಯಾವುದೋ ಒಂದು ಹಳ್ಳಿಯಲ್ಲಿ, ಟ್ರಸ್ಟ್‌ನಡಿ ಬಹಳಷ್ಟು ವಯೋವೃದ್ಧರಿದ್ದಾರೆ. ಅಲ್ಲಿಗೆ ತಲುಪಿಸೋ ವ್ಯವಸ್ಥೆ ಆಗುತ್ತಿದೆ' ಎಂದಿದ್ದಾರೆ ಪ್ರಥಮ್.

ನಟ ಪ್ರಥಮ್ ಕಾರ್ಯ ಮೆಚ್ಚಿ 130 ಮೂಟೆ ಅಗತ್ಯ ವಸ್ತು ಕಳುಹಿಸಿದ MLA ಸಿ.ಎಸ್ ಪುಟ್ಟರಾಜು!

'ಯಾವ ಊರು? ಜಿಲ್ಲೆ? ಎಲ್ಲಾ ಬೇಡ ಬಿಡಿ. ಆಮೇಲೆ ನಮಗೆ ಕಳಿಸಿ ಅಂತ ಮತ್ತೆ ಕೇಳ್ತೀರಾ, ಪುಣ್ಯಾತ್ಮರು ಕಳುಹಿಸಿದ್ದಾರೆರೆ. ಹಸಿದವರು ಊಟ ಮಾಡಲಿ ಬಿಡಿ. ಧನ್ಯವಾದ ಸಚಿವರಾದ ಗೋಪಾಲಯ್ಯ ಸರ್‌ಗೆ. ನಮ್ಮ ಕೆಲಸ ಮೆಚ್ಚಿ ಕಳುಹಿಸಿದ್ದಕ್ಕೆ. ನಿಮ್ಮ ದುಡ್ಡಲ್ಲಿ ಕಳಿಸಿದ್ದೀರಾ, ನಾನೇ ಮಾಡಿರೋದು ಅಂತ ಬಿಲ್ಡಪ್ ಎಲ್ಲಾ ತಗೊಳ್ಳಲ್ಲ ನಾನು. ಅಂದಹಾಗೆ ನನ್ನದೇನೂ ಹೂಡಿಕೆ ಇದ್ರಲ್ಲಿ ಇಲ್ಲ. Just ನನ್ನ Contacts ಬಳಸಿ ಅಗತ್ಯವಿರುವವರಿಗೆ ತಲುಪಿಸೋ ಕೆಲಸ ಮಾಡಿದ್ದೀನಿ ಅಷ್ಟೇ. ಸಾಧ್ಯವಾದ್ರೆ ಶುದ್ಧ ಮನಸ್ಸಿನಿಂದ ಹರಸಿ.

(ಹಾ...ಹಾಗೇಯೇ ಹರಸುವಾಗ ನಿಮ್ಮ ಅತೀ ಬುದ್ಧಿವಂತಿಕೆ, ವ್ಯಂಗ್ಯ, ತಲೆಹರೆಟೆ, ತಿಕ್ಕಲುತನದಿಂದ ಕೂಡಿದ ಕಾಮೆಂಟ್ಸ್ ದೂರಕ್ಕಿಟ್ಟು ಸ್ವಚ್ಛ ಮನಸ್ಸಿನಿಂದ ಹರಸಿ)' ಎಂದು ಬರೆದುಕೊಂಡಿದ್ದಾರೆ.