Asianet Suvarna News Asianet Suvarna News

ಕರುನಾಡ ಯಜಮಾನ ವಿಷ್ಣುವರ್ಧನ್‌ ಪುಸ್ತಕ ಬಿಡುಗಡೆ ಮಾಡಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌

ಡಾ.ವಿಷ್ಣುಸೇನಾ ಸಮಿತಿಯು ಕರುನಾಡ ಯಜಮಾನ ಡಾ.ವಿಷ್ಣುವರ್ಧನ್‌ ಪುಸ್ತಕವನ್ನು ಪ್ರಕಟಿಸಿದ್ದಾರೆ. ಸಚಿವ ಬಿ.ಸಿ. ನಾಗೇಶ್ ಬಿಡುಗಡೆ ಮಾಡಿದ್ದಾರೆ. 

Minister BC Nagesh release Dr Vishnuvardhan book by Vishnu Sena Committee vcs
Author
Bangalore, First Published Sep 16, 2021, 10:10 AM IST
  • Facebook
  • Twitter
  • Whatsapp

ಡಾ. ವಿಷ್ಣುವರ್ಧನ್‌ ಅವರ 71ನೇ ಜನ್ಮದಿನದ ಅಂಗವಾಗಿ ಡಾ.ವಿಷ್ಣುಸೇನಾ ಸಮಿತಿಯು ಕರುನಾಡ ಯಜಮಾನ ಡಾ.ವಿಷ್ಣುವರ್ಧನ್‌ ಎಂಬ ಪುಸ್ತಕವನ್ನು ಪ್ರಕಟಿಸಿದೆ. ಈ ಕೃತಿಯನ್ನು ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಬಿಡುಗಡೆ ಮಾಡಿದ್ದಾರೆ.

ಡಾ.ಶರಣು ಹುಲ್ಲೂರು ಬರೆದ ಈ ಕಿರುಹೊತ್ತಿಗೆಯನ್ನು ಶಾಲಾ ಮಕ್ಕಳಿಗೆ ಉಚಿತವಾಗಿ ವಿತರಿಸುವ ದೃಷ್ಟಿಯಿಂದ ಪ್ರಕಟಿಸಲಾಗಿದೆ. ಕನಿಷ್ಠ ಒಂದು ಲಕ್ಷ ಮಕ್ಕಳಿಗೆ ಈ ಪುಸ್ತಕ ವಿತರಿಸುವ ಗುರಿಯನ್ನು ವಿಷ್ಣು ಸೇನಾ ಸಮಿತಿ ಹೊಂದಿದೆ. ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಡಾ.ವಿಷ್ಣು ಅವರ ಬದುಕು ಸಾಧನೆಗಳನ್ನು ಪಠ್ಯದಲ್ಲಿ ಸೇರಿಸಲು ಶಿಕ್ಷಣ ಸಚಿವರಿಗೆ ಡಾ.ವಿಷ್ಣು ಸೇನಾ ಸಮಿತಿ ಮನವಿ ಮಾಡಿದೆ. ಇದಕ್ಕೆ ಸ್ಪಂದಿಸಿದ ಸಚಿವರು ಪಠ್ಯಪುಸ್ತಕ ಸಮಿತಿಗೆ ಮನವಿ ಶಿಫಾರಸ್ಸು ಮಾಡುವುದಾಗಿ ತಿಳಿಸಿದ್ದಾರೆ.

ವಿಷ್ಣುವರ್ಧನ್ ಭೇಟಿ ಮರೆಯಲಾರೆ: ಸತ್ಯನಾರಾಯಣ ಎಚ್ ಎಸ್

ಈ ಸಂದರ್ಭದಲ್ಲಿ ಲೇಖಕರಾದ ಡಾ. ಶರಣು ಹುಲ್ಲೂರು, ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ, ಎಬಿವಿಪಿ ಮುಖಂಡ ಗುರುನಾಥ ರಾಜಗೀರ ಹಾಜರಿದ್ದರು.

 

Follow Us:
Download App:
  • android
  • ios