'ಮೊದಲಾಸಲ', 'ಶೈಲೂ', 'ರಾಗ' ಮುಂತಾದ ಕನ್ನಡ ಚಿತ್ರಗಳಲ್ಲಿ ನಟಿಸಿರುವ ನಟಿ ಭಾಮಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಪುಟ್ಟ ಮಹಾಲಕ್ಷ್ಮಿ ಆಗಮನದ ಬಗ್ಗೆ ತಿಳಿಯುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ.

ಗಂಡು ಮಗುವಿಗೆ ಜನ್ಮ ನೀಡಿದ 'ಅಶ್ವಿನಿ ನಕ್ಷತ್ರ' ನಟಿ ಮಯೂರಿ! 

ನಟಿ ಭಾಮಾ ತಮ್ಮ ಪ್ರೆಗ್ನೆಂಸಿ ವಿಚಾರವನ್ನು ತುಂಬಾನೇ ಸೀಕ್ರೆಟ್‌ ಆಗಿಟ್ಟಿದ್ದರು. ಸೋಷಿಯಲ್ ಮೀಡಿಯಾದಿಂದ ದೂರವೇ ಉಳಿದಿರುವ ಭಾಮಾ ಎಲ್ಲಿಯೋ ಈ ಬಗ್ಗೆ ಮಾಹಿತಿ ಹಂಚಿಕೊಂಡಿರಲಿಲ್ಲ ಹಾಗೂ ಯಾವುದೇ ರೀತಿ ಫೋಟೋ ಶೂಟ್ ಮಾಡಿಸಿಕೊಂಡ ಸುಳಿವೂ ನೀಡಿರಲಿಲ್ಲ. ಇದೀಗ ಮಗುವಾದ ವಿಚಾರದ ಬಗ್ಗೆಯೂ ಕುಟುಂಬವೇ ಸ್ಪಷ್ಟನೆ ನೀಡಬೇಕಿದೆ. ಆದರಿದು ಬಹುತೇಕ ಖಚಿತ ಎಂದು ಕೆಲವು ಮೂಲಗಳಿಂದ ತಿಳಿದು ಬಂದಿದೆ. 

ಜನವರಿ 30 ,2020ರಲ್ಲಿ ಭಾಮಾ ಹಾಗೂ ಅರ್ಜುನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ತಮ್ಮ ವೈವಾಹಿಕ ಜೀವನದ ಬಗ್ಗೆ ಪ್ರೈವೇಟ್‌ ಆಗಿಟ್ಟರು. ದುಬೈನಲ್ಲಿ ಉದ್ಯಮಿ ಆಗಿರುವ ಅರ್ಜುನ್, ಭಾಮಾ ಸಹೋದರನ ಸ್ನೇಹಿತ. ಕಳೆದ ವರ್ಷ ಕೊರೋನಾ ವೈರಸ್ ವಕ್ಕರಿಸುವ ಕೆಲವು ದಿನಗಳ ಮುನ್ನ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತು. ಮೂರು ದಿನಗಳ ಕಾಲ ಅದ್ಧೂರಿಯಾಗಿ ನಡೆದ ಮದುವೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಟೋಗಳು ಹರಿದಾಡಿದ್ದವು. ಈಗ ಮಗುವಾಗಿರುವ ಸುದ್ದಿಯೂ ಅದೇ ರೀತಿ ಸಾಮಾಜಿಕ ಜಾಲತಾಣದಲ್ಲಿ ತೇಲಾಜುತ್ತಿದೆ. ತಾಯಿ ಹಾಗೂ ಮಗು ಆರೋಗ್ಯವಾಗಿರಲಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.