Asianet Suvarna News Asianet Suvarna News

Malashri Birthday: 'ಮುತ್ತಿನಂಥ ಹೆಂಡ್ತಿ..' ಸಿನಿಮಾದಿಂದ ಮಾಲಾಶ್ರೀಗೆ ಸಿಕ್ಕಿದ್ದರು ಚಿನ್ನದಂಥ ಗಂಡ!

malashri and Ramu ಕನಸಿನ ರಾಣಿ ಮಾಲಾಶ್ರೀ ಶನಿವಾರ ತಮ್ಮ 51ನೇ ವರ್ಷದ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ. ರಾಜ್ಯಾದ್ಯಂತ ಅವರಿಗೆ ಅಭಿಮಾನಿಗಳು ಜನ್ಮದಿನದ ಶುಭಾಷಯ ಕೋರುತ್ತಿದ್ದಾರೆ.

malashri birthday How Dream Queen Find Husband Ramu san
Author
First Published Aug 10, 2024, 10:06 PM IST | Last Updated Aug 10, 2024, 10:34 PM IST


ಇಂದು ಕನಸಿನ ರಾಣಿ ಮಾಲಾಶ್ರೀ ಅವರ ಜನ್ಮದಿನ. ಚೆನ್ನೈನಲ್ಲಿ ಜನ್ಮ ಕಂಡರೂ ಮಾಲಾಶ್ರಿ ಬದುಕಿನ ಬಹುದೊಡ್ಡ ಯಶಸ್ಸು ಕಂಡಿದ್ದು ಕನ್ನಡ ಸಿನಿಮಾರಂಗದಲ್ಲಿ. ಮೂರು ದಶಕಗಳ ಕಾಲ ಕನ್ನಸ ಸಿನಿಮಾದ ಅನಭಿಷಿಕ್ತ ರಾಣಿಯಂತೆ ಮೆರೆದಿದ್ದ ಮಾಲಾಶ್ರೀ 70ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. 90ರ ದಶಕದಲ್ಲಿ ಇವರು ನಟಿಸಿದ್ದ ಎಲ್ಲಾ ಪಾತ್ರಗಳೂ ಸೂಪರ್‌ ಹಿಟ್‌. 1979ರಲ್ಲಿ ತಮಿಳು ಚಿತ್ರ ಇಮಾಯಂನಲ್ಲಿ ಬಾಲನಟಿಯಾಗಿ ಚಿತ್ರರಂಗಕ್ಕೆ ಲಗ್ಗೆ ಇಟ್ಟಿದ್ದ ಮಾಲಾಶ್ರೀ ಇಂದು ತಮ್ಮ ಪುತ್ರಿ ಆರಾಧನಾ ರಾಮ್‌ ಅವರನ್ನು ಸಿನಿಮಾ ಹೀರೋಯಿನ್‌ ಆಗಿ ಮಾಡುವ ಪ್ರಯತ್ನದಲ್ಲಿದ್ದಾರೆ. ಆರಾಧನಾ ರಾಮ್‌ ನಟಿಸಿದ್ದ ಚೊಚ್ಚಲ ಚಿತ್ರ ಕಾಟೇರ ದೊಡ್ಡ ಮಟ್ಟದ ಯಶಸ್ಸು ಕಂಡಿದೆ. ಅದರೊಂದಿಗೆ ಚಿತ್ರರಂಗ ಹಾಗೂ ಮಾಡೆಲಿಂಗ್‌ ಜಗತ್ತಿನಲ್ಲಿ ಇನ್ನಷ್ಟು ಅವಕಾಶ ಹುಡುಕಿ ಹೊರಟಿದ್ದಾರೆ. ಇದರ ನಡುವೆ 51ನೇ ವರ್ಷದ ಜನ್ಮದಿನ ಆಚರಿಸಿಕೊಂಡ ಮಾಲಾಶ್ರೀ ಅವರಿಗೆ ರಾಜ್ಯಾದ್ಯಂತ ಅವರ ಅಭಿಮಾನಿಗಳು ಶುಭ ಕೋರಿ ಸಂಭ್ರಮಿಸಿದ್ದಾರೆ.

ಪತಿ ರಾಮು ಅವರ ನಿಧನದ ಬಳಿಕ ಮಾಲಾಶ್ರೀ ಅವರು ಆಚರಣೆ ಮಾಡಿಕೊಳ್ಳುತ್ತಿರುವ ಮೂರನೇ ಜನ್ಮದಿನ ಇದು. ಶನಿವಾರ ಮಗಳೊಂದಿಗೆ ತಮ್ಮ ಫೇಮಸ್‌ ಹಾಡು, 'ಒಳಗೆ ಸೇರಿದರೆ ಗುಂಡು, ಹುಡುಗಿ ಆಗುವಳು ಗಂಡು..' ಹಾಡಿಗೆ ನೃತ್ಯ ಮಾಡಿ ನಲಿದಿದ್ದಾರೆ. ಇದಕ್ಕೆ ಸಾಕಷ್ಟು ಕಾಮೆಂಟ್‌ಗಳು ಬಂದಿವೆ. ಒಂದು ಕಾಲದಲ್ಲಿ ಕನಸಿನ ರಾಣಿಯಾಗಿ ಸಿನಿಮಾ ರಂಗವನ್ನು ಆಳಿದ್ದ ಮಾಲಾಶ್ರೀ ಬಾಳಿನಲ್ಲಿ ರಾಮು ಬಂದಿದ್ದು 1997ರಲ್ಲಿ. 2021ರಲ್ಲಿ ಕೋವಿಡ್‌ ಕುರಿತಾದ ಕಾಂಪ್ಲಿಕೇಶನ್‌ಗಳಿಂದ ರಾಮು ನಿಧನರಾದಾಗ ಮಾಲಾಶ್ರೀ ಬಾಳಿನಲ್ಲಿ ಬರಸಿಡಿಲು ಬಂದೆರಗಿತ್ತು.

ಮಾಲಾಶ್ರೀ ಹಾಗೂ ರಾಮು ಅವರ ಲವ್‌ ಸ್ಟೋರಿ ಆರಂಭವಾಗಿದ್ದು ಹೇಗೆ ಅನ್ನೂ ಕುತೂಹಲ ಎಲ್ಲರಲ್ಲೂ ಇದೆ. ನಂಜುಂಡಿ ಕಲ್ಯಾಣ ಸಿನಿಮಾದ ಮೂಲಕ ಮಾಲಾಶ್ರೀ ಕನ್ನಡ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ್ದರು. 1990ರ ದಶಕದ ಹೊತ್ತಿಗೆ ಇವರು ಕನ್ನಡದ ಬಹುಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದರು. ಇವರು ನಟಿಸಿದ್ದ ಸಾಲು ಸಾಲು ಚಿತ್ರಗಳು ಸೂಪರ್‌ ಹಿಟ್‌ ಆಗಿದ್ದವು. ಆ ಸಮಯದಲ್ಲಿ  ಮಾಲಾಶ್ರೀ ಹಾಗೂ ಚಾಕ್‌ಲೇಟ್‌ ಹೀರೋ ಆಗಿ ಗಮನಸೆಳೆದಿದ್ದ ಸುನಿಲ್‌ ನಡುವೆ ಪ್ರೀತಿ ಶುರುವಾಗಿತ್ತು. ಇನ್ನೇನು ಮದುವೆಯಾಗಬೇಕು ಎನ್ನುವ ಹಂತದಲ್ಲಿ ಅವರ ಜೀವನದಲ್ಲಿ ಮಹಾ ದುರಂತ ಎದುರಾಗಿತ್ತು. 1994ರಲ್ಲಿ ಸುನೀಲ್‌ ಹಾಗೂ ಮಾಲಾಶ್ರೀ ಒಂದೇ ಕಾರ್‌ನಲ್ಲಿ ಪ್ರಯಾಣ ಮಾಡುವ ಭೀಕರ ಅಫಘಾತದಲ್ಲಿ ಸುನೀಲ್‌ ಸಾವು ಕಂಡಿದ್ದರು. ಆದರೆ, ಮಾಲಾಶ್ರೀ ಅವರಿಗೆ ಆಯಸ್ಸಿತ್ತು. ಸಣ್ಣಪುಟ್ಟ ಗಾಯಗಳೊಂದಿಗೆ ಮಾಲಾಶ್ರೀ ಬದುಕುಳಿದರು. 

ಆದರೆ, ಮಾಲಾಶ್ರೀ ಅವರಿಗೆ ಈ ಅಪಘಾತ ಹಾಗೂ ಸುನೀಲ್‌ ಸಾವು ಎಷ್ಟು ಕಾಡಿತ್ತೆಂದರೆ ಅವರು ಡಿಪ್ರೆಶನ್‌ಗೆ ಹೋಗಿಬಿಟ್ಟಿದ್ದರು. ಯಾವುದರಲ್ಲೂ ಅವರಿಗೆ ಉತ್ಸಾಹವೇ ಇರುತ್ತಿರಲಿಲ್ಲ. ಮಾಲಾಶ್ರೀಗೆ ಮೊದಲಿಗೆ ಇದ್ದಂಥ ಚಾರ್ಮ್‌ ಕಡಿಮೆಯಾಗುತ್ತಿದ್ದಂತೆ ಸಿನಿಮಾಗಳು ಕೂಡ ಕಡಿಮೆಯಾಗಲು ಆರಂಭಿಸಿದವು.  ಈ ಹಂತದಲ್ಲಿ ಅವರು ಸಾಂಸಾರಿಕ ಸಿನಿಮಾಗಳಲ್ಲಿ, ಗೃಹಿಣಿ ಪಾತ್ರಗಳಲ್ಲಿ ನಟಿಸಲು ಆರಂಭ ಮಾಡಿದ್ದರು.  ಮಾಲಾಶ್ರೀ ಅವರಿಗಾಗಿಯೇ ಮುತ್ತಿನಂಥ ಹೆಂಡ್ತಿ ಸಿನಿಮಾವನ್ನು ನಿರ್ಮಾಪಕ ರಾಮು ನಿರ್ಮಾಣ ಮಾಡಿದ್ದರು. ಬದುಕಿನಲ್ಲಿ ತುಂಬಾ ಡಿಪ್ರೆಶನ್‌ಗೆ ಇಳಿದಿದ್ದ ಮಾಲಾಶ್ರೀ ಅವರಿಗೆ ರಾಮು ಅವರ ಸಖ್ಯ ಸಮಾಧಾನ ತಂದಿತು. ಇನ್ನೊಂದೆಡೆ ರಾಮು ಕೂಡ ಅವರಿಗೆ ಸಿನಿಮಾಗಳಲ್ಲಿ ನಟನೆ ಮುಂದುವರಿಸುವಂತೆ ಧೈರ್ಯ ತುಂಬಿದರು.

ಮಾಲಾಶ್ರೀ-ರವಿಚಂದ್ರನ್ ಮಧ್ಯೆ 'ರಾಮಾಚಾರಿ' ವೇಳೆ ಯಾಕೆ ಸಮಸ್ಯೆ ಆಗಿತ್ತು, ಪರಿಹಾರ ಹೇಗಾಯ್ತು..?

ಹೀಗಿರುವಾಗ ಒಂದು ಮಾಲಾಶ್ರೀ ಅವರಲ್ಲಿ ನೇರವಾಗಿಯೇ ರಾಮು ಮದುವೆಯ ಬಗ್ಗೆ ಪ್ರಸ್ತಾಪ ಮಾಡಿದ್ದರು. ಆದರೆ, ಬದುಕಿನಲ್ಲಿ ಅದಾಗಳೇ ದೊಡ್ಡ ಆಘಾತ ಎದುರಿಸಿದ್ದ ಮಾಲಾಶ್ರೀ ತಕ್ಷಣವೇ ಈ ಪ್ರಸ್ತಾಪಕ್ಕೆ ಓಕೆ ಎನ್ನಲಿಲ್ಲ. ಕೆಲ ಸಮಯ ತೆಗೆದುಕೊಂಡು ಬಳಿಕ ರಾಮು ಪ್ರೀತಿಗೆ ಒಪ್ಪಿಗೆ ನೀಡಿ 1997ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮಾಲಾಶ್ರೀ ಅವರಿಗೆ ಈಗ ಇಬ್ಬರು ಮಕ್ಕಳು ಆರಾಧನಾ ರಾಮ್‌ ಅಲ್ಲದೆ, ಆರ್ಯನ್‌ ಹೆಸರಿನ ಪುತ್ರನೂ ಇದ್ದಾನೆ. ಅನೋನ್ಯವಾಗಿ ಸಂಸಾರ ಮಾಡಿದ್ದ ಈ ಜೋಡಿ 2021ರಲ್ಲಿ ರಾಮು ನಿಧನದೊಂದಿಗೆ ಬೇರೆಯಾಯಿತು.

ಮಾಲಾಶ್ರೀ-ಶ್ರುತಿ ಮತ್ತೊಬ್ಬರೊಂದಿಗೆ ಡಾನ್ಸ್, ಆ ನಟಿಗೆ ಒಬ್ಬರು ರಿಯಲ್ ಅಮ್ಮ ಇನ್ನೊಬ್ಬರು ಅಮ್ಮನ ಫ್ರೆಂಡ್!

Latest Videos
Follow Us:
Download App:
  • android
  • ios