ಮಹಾಲಿಂಗ ಭಾಗವತರ್ ನನ್ನ ಪತಿಯಲ್ಲ, ಗಾಡ್ ಫಾದರ್ ಅಷ್ಟೇ; ಆಪ್ತರ ಬಳಿ ಹೇಳಿದ್ರಂತೆ ನಟಿ ಲೀಲಾವತಿ!
'ನಾನು ನನ್ನ ಹಾಗೂ ನನ್ನ ಮಗನ ವೈಯಕ್ತಿಕ ಸಂಗತಿಗಳ ಬಗ್ಗೆ ಮಾಧ್ಯಮದೆದುರು ಅಥವಾ ಹೊರಗೆ ಬಹಿರಂಗವಾಗಿ ಹೆಚ್ಚೇನೂ ಹೇಳುವುದಿಲ್ಲ. ಕಾರಣ, ನಾನೇನೋ ಹೇಳಿದರೆ ಅದನ್ನು ಕೆಲವರು ಸರಿಯಾಗಿ ಅರ್ಥ ಮಾಡಿಕೊಳ್ಳುವ ಬದಲು ಅಪಾರ್ಥ ಮಾಡಿಕೊಂಡು ಅದಕ್ಕೆ ರೆಕ್ಕೆಪುಕ್ಕ ಸೇರಿಸಿ..
ಕನ್ನಡದ ಹಿರಿಯ ನಟಿ ಲೀಲಾವತಿ (Leelavathi) ಮದುವೆ ಬಗ್ಗೆ ಹಲವು ಊಹಾಪೋಹಗಳು ಹರಿದಾಡುತ್ತಲೇ ಇವೆ. ನಟಿ ಲೀಲಾವತಿ ಈಗ ನಮ್ಮೊಂದಿಗಿಲ್ಲ, ಆದರೆ, ಅವರ ಮಗ ವಿನೋದ್ ರಾಜ್ ಹಾಗು ಅವರ ಹೆಂಡತಿ ಅನು ಬಿ, ಮೊಮ್ಮಗ ಯುವರಾಜ್ ವಿ ಇದ್ದಾರೆ. ಲೀಲಾವತಿ ನಾಟಕ ಹಾಗೂ ಸಿನಿಮಾಗಳಲ್ಲಿ ನಟಿಸಿದವರು. 60-70ರ ದಶಕದಲ್ಲಿ ನಟಿ ಲೀಲಾವತಿ ಸ್ಟಾರ್ ನಟಿಯಾಗಿ ಮೆರೆದವರು.
ಬರೋಬ್ಬರಿ 700 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ 86 ವರ್ಷಗಳ ತುಂಬು ಜೀವನ ನಡೆಸಿ 8 ಡಿಚೆಂಬರ್ 2023ರಂದು ನೆಲಮಂಗಲದ ತಮ್ಮ ಸ್ವಗ್ರಾಮದಲ್ಲಿ ನಿಧನರಾದರು. ನಟಿ ಲೀಲಾವತಿ ಡಾ ರಾಜ್‌ಕುಮಾರ್ ಸೇರಿದಂತೆ ಅಂದಿನ ಕಾಲದ ಎಲ್ಲ ಸ್ಟಾರ್ ನಟರೊಂದಿಗೂ ನಟಿಸಿ ಸೈ ಎನಿಸಿಕೊಂಡವರು. ಕನ್ನಡ ಸಿನಿಮಾಗಳು ಮಾತ್ರವಲ್ಲದೇ ತಮಿಳು, ತುಳು, ಮಲಯಾಳಂ, ತೆಲುಗು ಹಾಗು ಹಿಂದಿ ಚಿತ್ರಗಳಲ್ಲಿ ನಟಿಸಿ ಪಂಚಭಾಷಾ ತಾರೆ ಎನಿಸಿಕೊಂಡವರು. \
ಹಿಂದಿ ಭಾಷಿಗರಿಗೆ ಯಾಕೆ 'ಥ್ಯಾಂಕ್ಸ್' ಹೇಳಿದ್ರು ತೆಲುಗು ನಟ ರಾಮ್ ಚರಣ್; ಸೌತ್ ಸಿನಿಮಂದಿ ಏನಂದ್ರು?
ಶ್ರೇಷ್ಠನಟಿ ನ್ಯಾಷನಲ್ ಅವಾರ್ಡ್ ಸೇರಿದಂತೆ ಅವರಿಗೆ ಬಹಳಷ್ಟು ಪ್ರಶಸ್ತಿ-ಪುರಸ್ಕಾರಗಳು ಅವರಿಗೆ ಸಂದಿವೆ. ಲೀಲಾವತಿಯವರು ನಾಯಕಿಯಾಗಿ, ಮಗಳು, ಸೊಸೆ, ಅತ್ತಿಗೆ, ಅತ್ತೆ ಹಾಗೂ ಅಜ್ಜಿಯಾಗಿ ಕೂಡ ಮನೋಜ್ಞವಾಗಿ ನಟಿಸಿ ಅದ್ಭುತ ಕಲಾವಿದೆ ಎಂದು ಕರೆಸಿಕೊಂಡಿದ್ದಾರೆ. ಇಂಥ ಮಹಾನ್ ನಟಿ, ಕಲಾವಿದೆ ಲೀಲಾವತಿ ಅವರ ಮದುವೆ, ಸಂಸಾರದ ಬಗ್ಗೆ ಹಲವು ಗಾಸಿಪ್‌ಗಳು ಹರಿದಾಡಿವೆ. ಮಹಾಲಿಂಗ ಭಾಗವತರ್ (Mahalinga Bhagavathar)ಲೀಲಾವತಿಯವರ ಗಂಡ ಅಂತ ಹಲವರು ವಾದ ಮಾಡ್ತಾರೆ. ಅದ್ರೆ ಲೀಲಾವತಿಯವ ಆತ್ಮೀಯರು ಹೇಳುವುದೇ ಬೇರೆ.
ನಾನು ಕೊಡಲು ಬಯಸುವ ವ್ಯಕ್ತಿ ಎಂದ್ರು ದೀಪಿಕಾ ಪಡುಕೋಣೆ; ಅರೆ, ಏನು ಕೊಡ್ತಾರಂತೆ ಅಂತಿದೀರಾ?
ಸ್ವತಃ ಲೀಲಾವತಿಯವರೇ ಒಮ್ಮೆ ಹೇಳಿದ್ರಂತೆ, 'ಅವ್ರು ನನ್ ಗಾಡ್ ಫಾದರ್ ಅಷ್ಟೇ. ಸುಬ್ಬಯ್ಯ ನಾಯ್ಡು ಕಂಪನಿಯಲ್ಲಿ ಇಬ್ರೂ ಜೊತೆಯಲ್ಲಿ ಕೆಲಸ ಮಾಡ್ತಾ ಇದ್ವಿ. ನನ್ನನ್ನು ರಂಗಭೂಮಿಗೆ ಪರಿಚಯ ಮಾಡಿಸಿದ್ದೂ ಅವರೇ. ಅವರಿಗೆ ಆಗ್ಲೇ ಎರಡು ಮದ್ವೆ ಆಗಿತ್ತು. ನಾನು ದಕ್ಷಿಣ ಕನ್ನಡ ಬೆಳ್ತಂಗಡಿಯವ್ಳು. ಅವ್ರಿಗೂ ತುಳು ಭಾಷೆ ಬರ್ತಾ ಇತ್ತು. ಹಾಗಾಗಿ ಇಬ್ರೂ ಆತ್ಮೀಯತೆ ಬೆಳೆಸಿಕೊಂಡ್ವಿ, ತುಳು ಬಾಷೆ ಮಾತಾನಾಡ್ಲಿಕ್ಕೋಸ್ಕರ ಅಷ್ಟೇ. ಆದ್ರೆ ಕೆಲವೊಬ್ರು ಈ ಸ್ನೇಹವನ್ನೇ ಕೆಟ್ಟ ಸಂಬಂಧದ ಹಣೆಪಟ್ಟಿ ಕಟ್ಟಿಬಿಟ್ರು' ಅಂತ.
ಮತ್ತೆ ಒಂದಾಯ್ತು 'ರಂಗಸ್ಥಳಂ' ಜೋಡಿ, ಬರಲಿದೆ ರಾಮ್ ಚರಣ್-ಸುಕುಮಾರ್ ಸಂಗಮದ ಮತ್ತೊಂದು ಸಿನಿಮಾ!
ಮತ್ತೊಮ್ಮೆ ಮಾತನಾಡುತ್ತ ನಟಿ ಲೀಲಾವತಿ 'ನಾನು ನನ್ನ ಹಾಗೂ ನನ್ನ ಮಗನ ವೈಯಕ್ತಿಕ ಸಂಗತಿಗಳ ಬಗ್ಗೆ ಮಾಧ್ಯಮದೆದುರು ಅಥವಾ ಹೊರಗೆ ಬಹಿರಂಗವಾಗಿ ಹೆಚ್ಚೇನೂ ಹೇಳುವುದಿಲ್ಲ. ಕಾರಣ, ನಾನೇನೋ ಹೇಳಿದರೆ ಅದನ್ನು ಕೆಲವರು ಸರಿಯಾಗಿ ಅರ್ಥ ಮಾಡಿಕೊಳ್ಳುವ ಬದಲು ಅಪಾರ್ಥ ಮಾಡಿಕೊಂಡು ಅದಕ್ಕೆ ರೆಕ್ಕೆಪುಕ್ಕ ಸೇರಿಸಿ ಅದನ್ನು ಇನ್ನೇನೋ ಮಾಡಿ ಸುಳ್ಳು ಸುದ್ದಿ ಹಬ್ಬಿಸಿ, ನನಗೂ ನನ್ನ ಮಗನಿಗೂ ಕೆಟ್ಟ ಹೆಸರು ತಂದುಬಿಡುತ್ತಾರೆ. ನಮಗೆ ಸಂಬಂಧವೇ ಇಲ್ಲದ ಜನರೊಟ್ಟಿಗೆಲ್ಲ ಸಂಬಂಧ ಕಲ್ಪಿಸಿ ಮಾತನಾಡುತ್ತಾರೆ. ಅದಕ್ಕೇ, ನನ್ನ ಬಗ್ಗೆ ಹರಡುವ ಯಾವುದೇ ಸುಳ್ಳು ಸುದ್ದಿಗಳಿಗೆ ನಾನು ಸ್ಪಷ್ಟನೆ ಕೊಡಲು ಹೋಗುವುದಿಲ್ಲ' ಎಂದಿದ್ದರು ನಟಿ ಲೀಲಾವತಿ.