Asianet Suvarna News Asianet Suvarna News

ನಟರಿಗೆ ಹೆಣ್ಣು ಮಗುವಾದ್ರೆ ಸೂಪರ್ ಸ್ಟಾರ್ ಆಗ್ತಾರಂತೆ, ಇದಕ್ಕೆ ಯಶ್, ರಿಷಬ್ ಸಾಕ್ಷಿ!

ಸದ್ಯಕ್ಕೆ ಸ್ಯಾಂಡಲ್‌ವುಡ್‌ನಲ್ಲಿ ಹೊಸತೊಂದು ನಂಬಿಕೆ ಹುಟ್ಟಿಕೊಂಡಿದೆ. ನಟರಿಗೆ ಹೆಣ್ಣು ಮಗುವಾದರೆ ಅವರು ರಾತ್ರಿ ಕಳೆದು ಬೆಳಗಾಗೋದ್ರೊಳಗೆ ಸೂಪರ್ ಸ್ಟಾರ್ ಗಳಾಗ್ತಾರೆ ಅನ್ನೋ ನಂಬಿಕೆ. ಅದಕ್ಕೆ ಯಶ್, ರಿಷಬ್ ರಂಥಾ ನಟರ ಲೈಫು ಮುಖ್ಯ ಕಾರಣ.

Luck follows stars after girl child born
Author
First Published Nov 13, 2022, 1:30 PM IST

ಸ್ಯಾಂಡಲ್‌ವುಡ್‌ನಲ್ಲಿ ಇತ್ತೀಚೆಗೆ ಒಂದು ಹೊಸ ನಂಬಿಕೆ ಶುರುವಾಗಿದೆ. ಆ ನಂಬಿಕೆಯಿಂದಾಗಿ ಇದೀಗ ಸ್ಯಾಂಡಲ್‌ವುಡ್‌ನ ಅನೇಕ ವಿವಾಹಿತ ನಟರು ತಮಗೆ ಮಗಳು ಹುಟ್ಟಲಿ ಅಂತ ಹಂಬಲಿಸುತ್ತಿದ್ದಾರೆ. ಹೆಣ್ಣು ಮಗು ಹುಟ್ಟಿದರೆ ಅದೃಷ್ಟ ಬಂದ ಹಾಗೆ. ತಮ್ಮ ಲಕ್ಕೇ ಬದಲಾಗುತ್ತೆ. ರಾತ್ರಿ ಕಳೆದು ಬೆಳಗಾಗೋದ್ರೊಳಗೆ ತಾವು ಸೂಪರ್‌ಸ್ಟಾರ್‌ಗಳಾಗ್ತೀವಿ ಅನ್ನೋ ನಂಬಿಕೆ ಒಂದು ಬೆಳೆಯುತ್ತಿದೆ. ಈ ನಂಬಿಕೆಗೆ ಸಾಕ್ಷಿ ಅನ್ನೋ ಹಾಗೆ ಅನೇಕ ನಟರು ಸಿಕ್ತಾರೆ. ಇದು ನಿಜವೋ ಸುಳ್ಳೋ ಅನ್ನೋ ಬಗ್ಗೆ ಯಾರೂ ವಿಮರ್ಶೆ ಮಾಡಲು ಮುಂದಾಗುವುದಿಲ್ಲ. ಏಕೆಂದರೆ ಕೆಲವು ನಂಬಿಕೆಗಳು ಹಾಗೇ, ಅವುಗಳಿಗೆ ತಾರ್ಕಿಕ ಉತ್ತರ ಅಂತ ಸಿಗೋದಿಲ್ಲ. ಆದರೆ ಅದನ್ನು ನಿಜವಾಗಿಸೋ ಅನೇಕ ಘಟನೆಗಳು ನಡೆಯುತ್ತಿರುತ್ತವೆ. ಸ್ಯಾಂಡಲ್‌ವುಡ್‌ನಲ್ಲಿ ಹಲವರು ಇಂಥಾ ನಂಬಿಕೆಗಳನ್ನು, ಶಕುನಗಳನ್ನು ಪ್ರಶ್ನೆ ಮಾಡದೇ ನಂಬುತ್ತಾರೆ. ಏಕೆಂದರೆ ಸಿನಿಮಾ ರಂಗದಲ್ಲಿ ಮಿಂಚುವುದಕ್ಕೆ ಟ್ಯಾಲೆಂಟ್, ಮೇಕಿಂಗ್ ಜೊತೆಗೆ ಅದೃಷ್ಟನೂ ಬಹಳ ಮುಖ್ಯ ಅನ್ನೋದು ಹಲವರ ನಂಬಿಕೆ.

ಸೂಪರ್ ಸ್ಟಾರ್ ಆದ್ರು ಯಶ್‌

ಸದ್ಯಕ್ಕೀಗ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವವರು ಕನ್ನಡದ ಇಬ್ಬರು ನಟರು. ಒಬ್ಬರು ಯಶ್. ಕೆಜಿಎಫ್ ಸಿನಿಮಾ ಅವರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಫ್ಯಾನ್ ಫಾಲೋವಿಂಗ್‌ ಅನ್ನೇ ಸೃಷ್ಟಿ ಮಾಡಿತು. ಯಶ್ ರಿಯಲ್ ಲೈಫ್ ತಗೊಂಡರೆ ಒಂದು ಹಂತದವರೆಗಿನ ಅವರ ಲೈಫು ರೋಲರ್ ಕೋಸ್ಟರ್ ರೈಡ್‌ನ ಹಾಗಿತ್ತು. ಕುಟುಂಬದ ಜವಾಬ್ದಾರಿ ಹೆಗಲೇರಿದ ಕಾರಣ ಸೆಕೆಂಡ್ ಪಿಯುಸಿಗೆ ಶಿಕ್ಷಣ ಮುಗಿಸಿ ಪ್ರಾವಿಜನ್ ಸ್ಟೋರ್ ನಡೆಸುತ್ತಿದ್ದ ಇವರಿಗೆ ಭಾಗ್ಯದ ಬಾಗಿಲು ತೆರೆದದ್ದು ಇವರ ಬದುಕಲ್ಲಿ ರಾಧಿಕಾ ಎಂಬ ಹೆಣ್ಣುಮಗಳು ಬಂದಾಗ ಅಂತ ಲೆಕ್ಕಾಚಾರ ಹಾಕೋರಿದ್ದಾರೆ.

Kantara ಹಾಡಿನ ವಿವಾದ; ಯೂಟ್ಯೂಬ್​, ಮ್ಯೂಸಿಕ್ ಆ್ಯಪ್​ಗಳಿಂದ 'ವರಾಹ ರೂಪಂ..' ಹಾಡು ಡಿಲೀಟ್

ನಂದಗೋಕುಲ ಸೀರಿಯಲ್ ಬಳಿಕ ರಾಧಿಕ ಮತ್ತು ಯಶ್ 'ಮೊಗ್ಗಿನ ಮನಸ್ಸು' ಸಿನಿಮಾದಲ್ಲಿ ಪ್ರೇಮಿಗಳಾಗಿ ಕಾಣಿಸಿಕೊಂಡರು. ಆಗ ಇವರ ಪ್ರೇಮವೂ ಕುಡಿಯೊಡೆಯುತ್ತಿತ್ತು. ಇವರಿಬ್ಬರ ಜೋಡಿಯ ಮಿಸ್ಟರ್ ಆಂಡ್ ಮಿಸ್ಸೆಸ್ ರಾಮಾಚಾರಿ ಸಿನಿಮಾವಂತೂ ಸೂಪರ್ ಡೂಪರ್ ಹಿಟ್ ಆಯ್ತು. ರಿಯಲ್ ಲೈಫ್‌ನಲ್ಲೂ ಒಂದಾದ ಈ ಜೋಡಿಗೆ ಐರಾ ಅನ್ನೋ ಮಗಳು ಹುಟ್ಟಿದಳು. ಯಶ್ ಗೆ ಮಗಳು ಹುಟ್ಟಿದ್ದೇ ಅದೃಷ್ಟ ಒದ್ದುಕೊಂಡು ಬಂತು ಅಂತಾರಲ್ಲ, ಹಾಗಾಯ್ತು. ಅವರ 'ಕೆಜಿಎಫ್, ಕೆಜಿಎಫ್ ೨' ಸಿನಿಮಾ ಯಾವ ಲೆವೆಲ್‌ನಲ್ಲಿ ಬ್ಲಾಕ್ ಬಸ್ಟರ್ ಹಿಟ್ ಆಯ್ತು ಅನ್ನೋದನ್ನು ಚಿಕ್ಕ ಮಗುವೂ ಹೇಳುತ್ತೆ.

ಮಗಳು ಹುಟ್ಟಿದ ಮೇಲೆ ರಿಷಬ್‌ಗೆ ಒಲಿದ ಅದೃಷ್ಟ

'ಕಾಂತಾರ' ಸಿನಿಮಾ ಬರೋವರೆಗೂ ರಿಷಬ್ ಶೆಟ್ಟಿ ಅವರಿಗೆ ಅಂಥಾ ಹೆಸರಿರಲಿಲ್ಲ. ಅವರೊಬ್ಬ ಸಕ್ಸಸ್ ಫುಲ್ (Sucsessful) ಡೈರೆಕ್ಟರ್ ಅಂತಷ್ಟೇ ಅನಿಸಿಕೊಂಡಿದ್ದರು. 'ಕಿರಿಕ್ ಪಾರ್ಟಿ', 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಮೊದಲಾದ ಇವರ ನಿರ್ದೇಶನದ ಸಿನಿಮಾಗಳು ಸೂಪರ್ ಹಿಟ್(Super hit) ಆಗಿದ್ದವು. 'ಕಾಂತಾರ' ಸಿನಿಮಾ ಕೆಲಸಗಳು ನಡೆಯುತ್ತಿರುವಾಗ ಅವರ ಪತ್ನಿ ಪ್ರಗತಿ ಶೆಟ್ಟಿ ಆರು ತಿಂಗಳ ಗರ್ಭಿಣಿ. ಮಗಳು ಹುಟ್ಟಿದ ಮೇಲೆ ಸಿನಿಮಾ ರಿಲೀಸ್(Release) ಆಯ್ತು. ರಾತ್ರಿ ಬೆಳಗಾಗೋದ್ರೊಳಗೆ ಸೂಪರ್ ಡೂಪರ್ ಹಿಟ್ ಆಯ್ತು. ಹದಿನಾರು ಕೋಟಿ ರು. ಬಜೆಟ್ ನ ಸಿನಿಮಾ ಹತ್ತಿರತ್ತಿರ ನಾಲ್ಕು ನೂರು ಕೋಟಿ ಗಳಿಕೆ ಮಾಡಿ ರಿಲೀಸ್‌ ಆಗಿ ಒಂದೂವರೆ ತಿಂಗಳ ನಂತರವೂ ಸಕ್ಸಸ್‌ಫುಲ್‌ ಆಗಿ ಓಡುತ್ತಿದ್ದೆ. ರಿಷಬ್ ರಾಷ್ಟ್ರಮಟ್ಟದ ಸ್ಟಾರ್(National level star) ನಟರಾಗಿ ಬೆಳೆದಿದ್ದಾರೆ. ಪ್ರೈವೇಟ್ ಜೆಟ್‌ನಲ್ಲಿ ಓಡಾಡುವ ಲೆವೆಲ್‌ಗೆ ಬೆಳೆದಿದ್ದಾರೆ.

Kamal Sarika Divorce ಅವಕಾಶ ಕೊಟ್ಟರೇ ಅದೇ ಜೀವನ ಬದುಕುವ, ಕಮಲ್‌ ಬಗ್ಗೆ ಮೌನ ಮುರಿದ ಮಾಜಿ ಪತ್ನಿ

ಈ ಎರಡು ಎಕ್ಸಾಂಪಲ್‌ಗಳು(Example) ಸಾಕಲ್ವಾ ಹೆಣ್ಣುಮಗು ಹುಟ್ಟಿದ್ರೆ ಅದೃಷ್ಟ(Luck) ಖುಲಾಯಿಸುತ್ತೆ ಅನ್ನೋದಕ್ಕೆ, ಸದ್ಯಕ್ಕೀಗ ಧ್ರುವ ಸರ್ಜಾ ಅವರಿಗೂ ಹೆಣ್ಣು ಮಗು ಆಗಿದೆ. ಅವರ ಮುಂದಿನ ಸಿನಿಮಾ ಮಾರ್ಟಿನ್ ಸಕ್ಸಸ್ ಆದ್ರೆ ಈ ನಂಬಿಕೆ ಮತ್ತಷ್ಟು ಹೆಚ್ಚೋದು ಗ್ಯಾರಂಟಿ.

Follow Us:
Download App:
  • android
  • ios