ಬೆಂಗಳೂರು (ಏ. 14)  ಮದುವೆಯಾಗಿ ಹನೂಮೂನ್  ಸಂಭ್ರಮದಲ್ಲಿದ್ದ ಲವ್​​ ಮಾಕ್​ಟೈಲ್ ಜೋಡಿಗೆ ಕೊರೋನಾ ಸೋಂಕು ತಗುಲಿದೆ.  ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್‌'ಗೆ ಕೊರೋನಾ ಸೋಂಕು ದೃಢಪಟ್ಟಿದೆ.

ವಿಚಾರವನ್ನು  ಸ್ವತಃ ಡಾರ್ಲಿಂಗ್ ಕೃಷ್ಣ ಅವರೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮಿಲನ ಹಾಗೂ ನನ್ನ ಕೊರೋನಾ ಪರೀಕ್ಷೆಯ ವರದಿ ಬಂದಿದ್ದು, ಇಬ್ಬರೂ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ನಮ್ಮೊಂದಿಗೆ ಸಂಪರ್ಕದಲ್ಲಿದ್ದವರು ದಯವಿಟ್ಟು ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಕರ್ನಾಟಕದಲ್ಲಿ ಮತ್ತೆ ಲಾಕ್ ಡೌನ್; ಸರ್ಕಾರ ಏನು ಹೇಳುತ್ತದೆ? 

ಸ್ಯಾಂಡಲ್​ವುಡ್ ಯುವ ಜೋಡಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್​ ಪ್ರೇಮಿಗಳ ದಿನದಂದು ಮದುವೆಯಾಗಿದ್ದರು. ಡಾರ್ಲಿಂಗ್ ಕೃಷ್ಣ ಲವ್​​ ಮಾಕ್​ಟೈಲ್ 2 ದಲ್ಲಿ ಬಿಸಿಯಾಗಿದ್ದರು. ಮದುವೆಯಾದ ನಂತರ ದಂಪತಿ ಹನುಮೂನ್ ಟ್ರಿಪ್ ಮಾಡಿದ್ದರು.

ಕೊರೋನಾ  ಎರಡನೇ ಅಲೆ ವ್ಯಾಪಿಸುತ್ತಿದ್ದು ಬಾಲಿವುಡ್ ನ  ಅನೇಕರಿಗೂ ತಗುಲಿದೆ. ಅಕ್ಷಯ್ ಕುಮಾರ್ ಗುಣಮುಖರಾಗಿ ಮನೆಗೆ ಹಿಂದಿರುಗಿದ್ದಾರೆ. ಎರಡನೇ ಅಲೆ ನಿಯಂಣತ್ರಣಕ್ಕೆ ಸರ್ಕಾರಗಳು ಹರಸಾಹಸ ಮಾಡುತ್ತಿವೆ.