Asianet Suvarna News Asianet Suvarna News

ನಟಿ ಅದಿತಿ ಪ್ರಭುದೇವ ಆರತಕ್ಷತೆಯಲ್ಲಿ ಲಹರಿ ವೇಲು ಅಸ್ವಸ್ಥ; ಆಸ್ಪತ್ರೆಗೆ ದಾಖಲು

ಅದಿತಿ ಪ್ರಭುದೇವ ಮತ್ತು ಯಶಸ್ವಿ ಮದುವೆ ಆರತಕ್ಷತೆ ಸಮಾರಂಭದಲ್ಲಿ ಭಾಗಿಯಾಗಿದ್ದ ಲಹರಿ ಆಡಿಯೋ ಮುಖ್ಯಸ್ಥ ಲಹರಿ ವೇಲು ಅವರು ಅಸ್ವಸ್ಥಗೊಂಡಿದ್ದಾರೆ. 

Lahari Velu Admitted to hospital after visits to Aditi prabhudeva marriage reception sgk
Author
First Published Nov 28, 2022, 10:41 AM IST

ಸ್ಯಾಂಡಲ್‌ವುಡ್ ನಟಿ ಅದಿತಿ ಪ್ರಭುದೇವ ಮತ್ತು ಯಶಸ್ವಿ ಮದುವೆ ಸಂಭ್ರಮ ಜೋರಾಗಿ ನೆಡೆಯುತ್ತಿದೆ. ಪ್ಯಾಲೆಸ್ ಗ್ರೌಂಡ್‌ನಲ್ಲಿ ನಡೆಯುತ್ತಿರುವ ಅದ್ದೂರಿ ಮದುವೆ ಸಮಾರಂಭದಲ್ಲಿ ಅನೇಕ ಗಣ್ಯರು ಭಾಗಿಯಾಗಿದ್ದರು. ನಿನ್ನೆ (ನವೆಂಬರ್ 27) ನಡೆದ ಆರತಕ್ಷತೆ ಸಮಾರಂಭದಲ್ಲಿ ಭಾಗಿಯಾಗಿದ್ದ ಲಹರಿ ಆಡಿಯೋ ಮುಖ್ಯಸ್ಥ ಲಹರಿ ವೇಲು ಅವರು ಅಸ್ವಸ್ಥಗೊಂಡಿದ್ದಾರೆ. ಬಳಿಕ ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ಡಿಸ್ಚಾರ್ಜ್ ಮಾಡಿಸಿಕೊಂಡು ಮನೆಗೆ ಮರಳಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸದ್ಯ ಲಹರಿ ವೇಲು ಚೇತರಿಸಿಕೊಳ್ಳುತ್ತಿದ್ದು ವಿಶ್ರಾಂತಿ ಪಡೆಯಲು ವೈದ್ಯರು ಸೂಚಿಸಿದ್ದಾರೆ ಎನ್ನಲಾಗಿದೆ. 

ಅದಿತಿ ಮತ್ತು ಯಶಸ್ವಿ ಮದುವೆ ಸಂಭ್ರಮ  ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್‌ನ ಗಾಯತ್ರಿ ವಿಹಾರ್‌ನಲ್ಲಿ ನಡೆಯುತ್ತಿದೆ. ಲಹರಿ ವೇಲು ಕೂಡ ನಿನ್ನೆ ನಡೆದ ಅದಿತಿ ಮತ್ತು ಯಶಸ್ವಿ ಮದುವೆ ಸಂಭ್ರಮದಲ್ಲಿ ಭಾಗಿಯಾಗಿದ್ದರು. ರಾತ್ರಿ ನಡೆದ ಆರತಕ್ಷತೆ ಸಮಾರಂಭಕ್ಕೆ ಹಾಜರಾಗಿದ್ದ ಲಹರಿ ವೇಲು ವಧು-ವರಿಗೆ ಶುಭಹಾರೈಸಿ ಹೊರಬರುತ್ತಿದ್ದಾಗ ಕುಸಿದು ಬಿದ್ದಿದ್ದಾರೆ. ತಲೆ ಸುತ್ತು ಬಂದು ಕುಸಿದಿದ್ದಾರೆ ಎನ್ನಲಾಗಿದೆ. ತಕ್ಷಣ ಅವರನ್ನು ವಿಕ್ರಾಂತ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗಿದೆ. ಚಿಕಿತ್ಸೆ ಬಳಿಕ ರಾತ್ರಿಯೇ ಮನೆಗೆ ತೆರಳಿದ್ದಾರೆ. ವೈದ್ಯರು ಸಂಪೂರ್ಣ ವಿಶ್ರಾಂತಿ ಪಡೆಯುವಂತೆ ಹೇಳಿದ್ದಾರೆ ಎಂದು  
ಹೇಳಿದ್ದಾರೆ. 

ಅದಿತಿ ಪ್ರಭುದೇವ ಮೆಹೆಂದಿ; ಅರಮನೆ ಮೈದಾನದಲ್ಲಿ ಕೆಂಪು-ಕೆಂಪು ಸೆಟ್...

ಅದಿತಿ ಪ್ರಭುದೇವ ಮತ್ತು ಉದ್ಯಮಿ ಯಶಸ್ವಿ ಮದುವೆ ಸಂಭ್ರಮ ನವೆಂಬರ್ 26ರಿಂದ ನಡೆಯುತ್ತಿದೆ. ಹಳದಿ ಶಾಸ್ತ್ರ, ಮೆಹಂದಿ ಶಾಸ್ತ್ರ, ಆರತಕ್ಷತೆ ಹಾಗೂ ಮದುವೆ ಸಂಭ್ರಮ ಪ್ಯಾಲೆಸ್ ಗ್ರೌಂಡ್ ನಲ್ಲಿ ನಡೆಯುತ್ತಿದೆ. ಈಗಾಗಲೇ ಅದುತಿ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದಿತಿ ಆರತಕ್ಷತೆ ಸಮಾರಂಭದಲ್ಲಿ ಸ್ಯಾಂಡಲ್ ವುಡ್ ನ ಅನೇಕ ಗಣ್ಯರು ಭಾಗಿಯಾಗಿದ್ದರು. ರಾಕಿಂಗ್ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿ ಸೇರಿದಂತೆ ಅನೇಕ ಗಣ್ಯರು ಹಾಜರಾಗಿ ಅದಿತಿ ಜೋಡಿಗೆ ಶುಭಹಾರೈಸಿದ್ದಾರೆ. 

ಅದಿತಿ ಪ್ರಭುದೇವ ಮದುವೆ ಸಂಭ್ರಮ; ಅರಿಶಿಣ ಶಾಸ್ತ್ರದ ಫೋಟೋಗಳು ವೈರಲ್

ಇಂದು (ನವೆಂಬರ್ 28) ಪ್ಯಾಲೆಸ್ ಗ್ರೌಂಡ್‌ನಲ್ಲಿ ಅದಿತಿ ಕೊರಳಿಗೆ ಮಾಂಗಲ್ಯ ಧಾರಣೆ ಮಾಡಲಿದ್ದಾರೆ ಯಶಸ್ವಿ. ಅದಿತಿ ಮತ್ತು ಯಶಸ್ವಿ ಅವರದ್ದು ಲವ್ ಕಮ್ ಅರೇಂಜ್ ಮ್ಯಾರೇಜ್. ಅನೇಕ ವರ್ಷಗಳ ಪ್ರೀತಿ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡುವಂತೆ ಮಾಡಿದೆ. ಅದಿತಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮದುವೆ ನಂತರವೂ ಚಿತ್ರರಂಗದಲ್ಲಿ ಸಕ್ರೀಯರಾಗಿ ಇರುವ ಅದಿತಿ ಮತ್ತಷ್ಟು ಸಿನಿಮಾಗಳ ಮೂಲಕ ಅಭಿಮಾನಿಗಳನ್ನು ರಂಜಿಸಲಿದ್ದಾರೆ. 

Follow Us:
Download App:
  • android
  • ios