ಕಿಚ್ಚ ಸುದೀಪ್ ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ ಹಿನ್ನೆಲೆ ಕಿಚ್ಚನ ಸಿನಿ ರಜತ ಮಹೋತ್ಸವ ಸಂಭ್ರಮ ಅದ್ಧೂರಿಯಾಗಿ ನಡೆಯುತ್ತಿದೆ. ಜಗತ್ತಿನ ಅತ್ಯಂತ ಎತ್ತರದ ಬುರ್ಜ್ ಖಲೀಫಾದಲ್ಲಿ ಮಿಂಚಲಿದ್ದಾರೆ ಕಿಚ್ಚ.

ಇದರ ಜೊತೆಗೇ ಸ್ಪೆಷಲ್ ಗಿಫ್ಟ್ ಸುದೀಪ್ ಅವರನ್ನು ಕಾಯುತ್ತಿದೆ. ಬೆಳ್ಳಿ ನಾಣ್ಯ ಬಿಡುಗಡೆಗೆ ಸಿದ್ಧತೆ ಮಾಡಲಾಗಿದೆ. ಸುದೀಪ್ ಸಾಂಸ್ಕೃತಿಕ ಪರಿಷತ್ತು ವತಿಯಿಂದ 1 ಸಾವಿರ ಬೆಳ್ಳಿ ನಾಣ್ಯ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

ಸ್ಯಾಂಡಲ್‌ವುಡ್ ಸುಲ್ತಾನನ ಸಿನಿ ಜರ್ನಿಗೆ 25 ವರ್ಷ: ಬುರ್ಜ್ ಖಲೀಫಾದಲ್ಲಿ ಕಿಚ್ಚನ ಹವಾ

25 ಗ್ರಾಂನ ಒಂದು ಸಾವಿರ ಬೆಳ್ಳಿ ನಾಣ್ಯಗಳ ಅನಾವರಣ ಮಾಡಲಾಗುತ್ತದೆ. ಈ ಬೆಳ್ಳಿ ನಾಣ್ಯದಲ್ಲಿ ಕಿಚ್ಚನ ಭಾವಚಿತ್ರ ಇರಲಿದೆ. ದುಬೈನಿಂದ ಬೆಂಗಳೂರಿಗೆ ಕಿಚ್ಚ ವಾಪಾಸ್ ಆದ ಕೂಡಲೆ 100 ಗ್ರಾಂ ಬೆಳ್ಳಿ ನಾಣ್ಯವನ್ನ ಕಿಚ್ಚನಿಗೆ ವಿಶೇಷ ಉಡುಗರೆಯಾಗಿ ನೀಡಲು ನಿರ್ಧರಿಸಲಾಗಿದೆ.

ಜಗತ್ತಿನ ಎತ್ತರದ ಬುರ್ಜ್ ಖಲೀಫಾದ ಮೇಲೆ ಅಭಿನಯ ಚಕ್ರವರ್ತಿಯ 2000 ಅಡಿ ಕಟೌಟ್ ಇಂದು ಕಾಣಿಸಲಿದೆ. ವಿಕ್ರಾಂತ್ ರೋಣ ಚಿತ್ರದ ಟೀಸರ್ ಕೂಡ ಬುರ್ಜ್ ಖಲೀಫಾದ ಮೇಲೆ ರಿಲೀಸ್ ಆಗಲಿದ್ದು, ಬುರ್ಜ್‌ ಖಲೀಫಾದಲ್ಲಿ ಟೀಸರ್ ಬಿಡುಗಡೆಯಾಗ್ತಿರೋ ಮೊದಲ ಕನ್ನಡ ಸಿನಿಮಾ ಎಂಬ ಕೀರ್ತಿಯೂ ಇದಕ್ಕೆ ಸಲ್ಲುತ್ತದೆ.