ಸ್ಯಾಂಡಲ್‌ವುಡ್ ಸ್ಟಾರ್ ನಟ ಸುದೀಪ್-ಪ್ರಿಯಾ ಜೋಡಿ ವಿವಾಹ ವಾರ್ಷಿಕೋತ್ಸವ
ಸುದೀಪ್ ದಂಪತಿಗಳು 22 ವರ್ಷಗಳ ಹಿಂದೆ, ಅಂದರೆ 18 October 2001ರಂದು ಪರಸ್ಪರ ಪ್ರೀತಿಸಿ ವಿವಾಹವಾಗಿದ್ದಾರೆ. ದಂಪತಿಗೆ ಸಾನ್ವಿ ಹೆಸರಿನ ಮಗಳಿದ್ದಾಳೆ. ಇತ್ತೀಚೆಗೆ ಹಲವಾರು ರೀಲ್ಸ್ಗಳು ಹಾಗೂ ಕಾರ್ಯಕ್ರಮಗಳ ಮೂಲಕ ಸುದೀಪ್ ಮಗಳು ಪ್ರಿಯಾ ಕೂಡ ಸ್ಯಾಂಡಲ್‌ವುಡ್ ಸಿನಿಪ್ರಿಯರಿಗೆ ಪರಿಚಿತ ಮುಖ ಎಂಬಂತಾಗಿದೆ.

ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ಮತ್ತು ಪ್ರಿಯಾ ಜೋಡಿಗೆ ಇಂದು (18 ಅಕ್ಟೋಬರ್ 2023) 22ನೇ ವಾರ್ಷಿಕೋತ್ಸವ. ಈ ಆಚರಣೆಯನ್ನು ದಂಪತಿಗಳು ಹೇಗೆ ಆಚರಿಸಿಕೊಂಡಿದ್ದಾರೆ ಎಂಬ ಬಗ್ಗೆ ಇನ್ನಷ್ಟೇ ಮಾಹಿತಿ ಬರಬೇಕಿದೆ. ಈ ಮೊದಲು, ಬಿಗ್ ಬಾಸ್ ಸೀಸನ್-7 ರಲ್ಲಿ ಸುದೀಪ್-ಪ್ರಿಯಾ ತಮ್ಮ 18ನೆಯ ವಿವಾಹ ವಾರ್ಷಿಕೋತ್ಸವವನ್ನು 'ಬಿಗ್ ಬಾಸ್' ಮನೆಯಲ್ಲಿಯೇ ಗ್ರಾಂಡ್ ಆಗಿ ಆಚರಿಸಿಕೊಂಡಿದ್ದರು. ಇಂದು ಎಲ್ಲಿ, ಹೇಗೆ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ ಎಂಬುದು ಸದ್ಯಕ್ಕೆ ಸಸ್ಪೆನ್ಸ್!
ಸುದೀಪ್ ದಂಪತಿಗಳು 22 ವರ್ಷಗಳ ಹಿಂದೆ, ಅಂದರೆ 18 October 2001ರಂದು ಪರಸ್ಪರ ಪ್ರೀತಿಸಿ ವಿವಾಹವಾಗಿದ್ದಾರೆ. ದಂಪತಿಗೆ ಸಾನ್ವಿ ಹೆಸರಿನ ಮಗಳಿದ್ದಾಳೆ. ಇತ್ತೀಚೆಗೆ ಹಲವಾರು ರೀಲ್ಸ್ಗಳು ಹಾಗೂ ಕಾರ್ಯಕ್ರಮಗಳ ಮೂಲಕ ಸುದೀಪ್ ಮಗಳು ಪ್ರಿಯಾ ಕೂಡ ಸ್ಯಾಂಡಲ್‌ವುಡ್ ಸಿನಿಪ್ರಿಯರಿಗೆ ಪರಿಚಿತ ಮುಖ ಎಂಬಂತಾಗಿದೆ. ಸಾನ್ವಿಗೂ ಕೂಡ ಅಭಿಮಾನಿಗಳ ಬಳಗ ಸೃಷ್ಟಿಯಾಗುತ್ತಿದೆ ಎನ್ನಬಹುದು.
ಸಲಿಂಗ ವಿವಾಹ ತೀರ್ಪು: ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಭೂಮಿ ಪೆಡ್ನೇಕರ್, ಸೆಲಿನಾ ಜೇಟ್ಲಿ ನಿರಾಸೆ!
ಸದ್ಯ ಸುದೀಪ್ ಬಿಗ್ ಬಾಸ್ ಕನ್ನಡ ಸೀಸನ್ 10 ರಿಯಾಲಿಟಿ ಶೋ ಹೋಸ್ಟ್ ಮಾಡುತ್ತಿದ್ದಾರೆ. ಈ ಬಿಗ್ ಬಾಸ್ ಶೋ ಒಂದು ವಾರ ಕಳೆದು ಇದೀಗ ಎರಡನೇ ವಾರಕ್ಕೆ ಕಾಲಿಟ್ಟಿದೆ. ಮೊದಲ ವಾರದ 'ವೀಕೆಂಡ್ ಸಂಚಿಕೆ- ಕಿಚ್ಚನ ಪಂಚಾಯಿತಿ' ಮತ್ತು 'ಸೂಪರ್ ಸಂಡೇ ವಿತ್ ಸುದೀಪ' ಸಂಚಿಕೆಗಳಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಇದೀಗ ಎರಡನೇ ವಾರದ ಟಾಸ್ಕ್‌ಗಳು ನಡೆಯುತ್ತಿವೆ. ಶುಕ್ರವಾರ ಮುಗಿದು ಶನಿವಾರ ಬಂದರೆ ಬಿಗ್ ಬಾಸ್ ಮನೆಯಲ್ಲಿ ಮತ್ತೆ ಕಿಚ್ಚನ 'ದರ್ಶನ' ಸಿಗಲಿದೆ.
ಎರಡನೆ ಮಗುವಿನ ನಂತರ ಅನುಷ್ಕಾ ಶರ್ಮಾ ಕುಟುಂಬಕ್ಕಾಗಿ ವೃತ್ತಿಜೀವನ ತ್ಯಾಗ ಮಾಡ್ತಾರಾ?
ಸುದೀಪ್ ಅವರಿಗಾಗಿಯೇ ವೀಕೆಂಡ್ ಶೋಗಳನ್ನು ಮಾತ್ರ ನೋಡುವವರೂ ಸಾಕಷ್ಟಿದ್ದಾರೆ ಎಂಬ ಸಂಗತಿಯೇನೂ ಗುಟ್ಟಾಗಿ ಉಳಿದಿಲ್ಲ. ಶನಿವಾರ ಮತ್ತು ಭಾನುವಾರದ ಬಿಗ್ ಬಾಸ್ ಟಿಆರ್‌ಪಿಯೇ ಅದನ್ನು ಜಗಜ್ಜಾಹೀರು ಮಾಡುತ್ತಿದೆ. ಒಟ್ಟಿನಲ್ಲಿ, ಇಂದು ಸುದೀಪ್-ಪ್ರಿಯಾ ವಿವಾಹ ವಾರ್ಷಿಕೋತ್ಸವ ಆಚರಿಸಲ್ಪಡುತ್ತಿದೆ.