ಸ್ಯಾಂಡಲ್​ವುಡ್​ ಸ್ಟಾರ್​ ಕಿಚ್ಚ ಸುದೀಪ್​ ಅವರ ಪುತ್ರಿ ಸಾನ್ವಿ ಅವರ ಫೋಟೋಶೂಟ್ ವಿಡಿಯೋ ವೈರಲ್​ ಆಗಿದ್ದು, ನಾಯಕಿಯಾಗಿ ಎಂಟ್ರಿ ಕೊಡಲು ರೆಡಿನಾ ಅಂತಿದ್ದಾರೆ ಫ್ಯಾನ್ಸ್​. 

ಸ್ಯಾಂಡಲ್​ವುಡ್​ ನಟ ಸುದೀಪ್​ (Kicchaa Sudeep) ದೊಡ್ಡ ಅಭಿಮಾನಿ ಬಳಗವನ್ನೇ ಹೊಂದಿದ್ದಾರೆ. ಇಂದಿಗೂ ಅವರಿಗೆ ಸಕತ್​ ಬೇಡಿಕೆ ಇದೆ. ಅವರಿಗೆ 19 ವರ್ಷದ ಕ್ಯೂಟ್​ ಮಗಳಿರೋ ವಿಷಯ ಸಿನಿ ಪ್ರಿಯರಿಗೆ ತಿಳಿದದ್ದೇ. ಸಾನ್ವಿ ಸುದೀಪ್​ ಸಾಮಾಜಿಕ ಜಾಲತಾಣದಲ್ಲಿ ಸಕತ್​ ಆ್ಯಕ್ಟೀವ್​ ಆಗಿದ್ದಾರೆ. ಸ್ಟಾರ್​ ಕಿಡ್​ ಎಂದಾಕ್ಷಣ ಎಲ್ಲರ ಕಣ್ಣು ಅವರ ಮೇಲೆಯೇ ಇರುವುದು ಸಹಜ. ಸ್ಟಾರ್ ನಟರಿಗೆ ಮಕ್ಕಳು ಹುಟ್ಟಿದಾಕ್ಷಣ, ಅವರು ಯಾವಾಗ ಸಿನಿ ರಂಗಕ್ಕೆ ಎಂಟ್ರಿ ಕೊಡ್ತಾರೆ ಎಂದು ಕಾಯುತ್ತಿರುವವರೇ ಹೆಚ್ಚು. ಮಕ್ಕಳು ಸ್ವಲ್ಪ ಪ್ರೌಢಾವಸ್ಥೆಗೆ ಬಂದರಂತೂ ಮುಗಿದೇ ಹೋಯ್ತು. ನಾಯಕ-ನಾಯಕಿ ಯಾವಾಗ ಆಗ್ತಾರೆ ಎಂದು ಫ್ಯಾನ್ಸ್​ ಕಾತರದಿಂದ ಕಾಯುತ್ತಿರುತ್ತಾರೆ. ಅದೇ ರೀತಿ ಈಗ ಸುದೀಪ್​ ಅವರ ಪುತ್ರಿ ಸಾನ್ವಿಯ ವಿಷಯದಲ್ಲಿಯೂ ಸಿನಿ ಪ್ರಿಯರು ಬಹಳ ಕಾತರರಾಗಿದ್ದಾರೆ. ಕಂಠಸಿರಿಯ ಮೂಲಕ ಮೋಡಿ ಮಾಡುತ್ತಿರುವ ಸಾನ್ವಿ ಚಿತ್ರರಂಗಕ್ಕೆ ನಾಯಕಿಯಾಗಿ ಯಾವಾಗ ಕಾಲಿಡುತ್ತಾರೆ ಎಂಬ ಕುತೂಹಲ ಅಭಿಮಾನಿಗಳದ್ದು.

ಸಾನ್ವಿ ಸುದೀಪ್‌ ಇತ್ತೀಚೆಗೆ ಜಿಮ್ಮಿ (Gymmi) ಚಿತ್ರದಲ್ಲಿ ಒಂದು ಹಾಡನ್ನು ಹಾಡಿದ್ದು, ಗಾಯಕಿಯಾಗಿ ಸಾನ್ವಿ ಸಿನಿರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ತುಂಬಾ ಉತ್ತಮ ಕಂಠವುಳ್ಳ ಸಾನ್ವಿ ಈ ಚಿತ್ರದಲ್ಲಿ ಹಾಡಿರುವ ಹಾಡಿಗೆ ಫ್ಯಾನ್ಸ್​ ಫಿದಾ ಆಗಿದ್ದಾರೆ. ಜಿಮ್ಮಿ ಚಿತ್ರದಲ್ಲಿ ಸುದೀಪ್ ಅವರ ಸೋದರಳಿಯ ಅಂದರೆ ಅಕ್ಕನ ಮಗ ಸಂಚಿತ್ ಸಂಜೀವ್ ನಟಿಸಿದ್ದಾರೆ. ಅಂತೂ ಚಿತ್ರರಂಗಕ್ಕೆ ಹಾಡಿನ ಮೂಲಕ ಎಂಟ್ರಿ ಕೊಟ್ಟಾಗಿದೆ. ನಾಯಕಿಯಾಗಿ ಯಾವಾಗ ಎಂಟ್ರಿ ಎಂದು ಕೇಳುತ್ತಿದ್ದಾರೆ ಫ್ಯಾನ್ಸ್​. ಇದೇ ವೇಳೆ, ಸಾನ್ವಿ ಅವರು, ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಬಗೆಬಗೆ ರೀತಿಯಲ್ಲಿ ಫೋಟೋಶೂಟ್​ ಮಾಡಿಸಿಕೊಂಡು ಅದನ್ನು ಶೇರ್​ ಮಾಡಿದ್ದಾರೆ, ವಿಡಿಯೋ ಒಂದನ್ನು ಅಪ್​ಲೋಡ್​ ಮಾಡಿದ್ದಾರೆ. ಇನ್ನಷ್ಟು ಫೋಟೋಗಳನ್ನು ಶೀಘ್ರದಲ್ಲಿಯೇ ಹಾಕುವುದಾಗಿ ಕ್ಯಾಪ್ಷನ್​ ಕೂಡ ಕೊಟ್ಟಿದ್ದಾರೆ. ಇವೆಲ್ಲವುಗಳನ್ನು ನೋಡುತ್ತಿದ್ದರೆ, ಸಾನ್ವಿ ಖಂಡಿತವಾಗಿಯೂ ಸ್ಯಾಂಡಲ್​ವುಡ್​ಗೆ ನಾಯಕಿಯಾಗಿ ಎಂಟ್ರಿ ಕೊಡಲು ಸಿದ್ಧತೆ ಮಾಡಿಕೊಂಡಿದ್ದಾರೆ ಎಂದೇ ಅಭಿಮಾನಿಗಳು ಹೇಳುತ್ತಿದ್ದಾರೆ.

View post on Instagram

ಅಂದು ಸುದೀಪ್- ಪುನೀತ್, ಇಂದು ಅವರ ಮಕ್ಕಳು; ಸಾನ್ವಿ- ಧ್ರುತಿ ಫೋಟೋ ವೈರಲ್!

ಸಾನ್ವಿ (Sanvi Sudeep) ಅವರ ಈ ಫೋಟೋಗಳಿಗೆ ಕಮೆಂಟ್​ಗಳ ಸುರಿಮಳೆಯೇ ಆಗಿದೆ. ಹಾರ್ಟ್​ ಎಮೋಜಿಗಳಿಂದ ಕಮೆಂಟ್​ ಬಾಕ್ಸ್​ ತುಂಬಿದ್ದರೆ, ಹಲವರು ಕೇಳುತ್ತಿರುವ ಪ್ರಶ್ನೆ... ಮುಂದಿನ ಚಿತ್ರಕ್ಕೆ ರೆಡಿನಾ, ಚಿತ್ರ ರಂಗಕ್ಕೆ ಎಂಟ್ರಿ ಯಾವಾಗ ಎಂಬುದು. ಅಂದಹಾಗೆ, ಸಾನ್ವಿ ವಿದ್ಯಾಭ್ಯಾಸದ ಜೊತೆ ಸಂಗೀತ ಮತ್ತು ಪೇಂಟಿಂಗ್​ನಲ್ಲಿ ನುರಿತರು. ಸುದೀಪ್ ಅಕ್ಕನ ಮಗ ಸಂಚಿತ್ ಜಿಮ್ಮಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಚಿತ್ರದ ಫಸ್ಟ್‌ ಲುಕ್‌ ಹಾಗೂ ಇಂಟ್ರಡಕ್ಷನ್ ಸಾಂಗ್ ಕೆಲ ದಿನಗಳ ಹಿಂದೆ ಬಿಡುಗಡೆಯಾಗಿದೆ. ಇದರ ಇಂಟ್ರೊಡಕ್ಷನ್ ಹಾಡನ್ನು ಸ್ವತಃ ಸಾನ್ವಿ ಬರೆದು ಹಾಡಿದ್ದಾರೆ. ಇಂಗ್ಲಿಷ್ ಹಾಗೂ ಕನ್ನಡ ಭಾಷೆಯನ್ನು ಮಿಕ್ಸ್‌ ಮಾಡಿ ಹಾಡಿದ್ದಾರೆ. ಇದಾಗಲೇ ಸಾಮಾಜಿಕ ಜಾಲತಾಣದಲ್ಲಿ ಸಾನ್ವಿ ಹಲವಾರು ಫೋಟೋಗಳನ್ನು ಶೇರ್​ ಮಾಡಿಕೊಂಡಾಗಲೆಲ್ಲ ಬಾಲಿವುಡ್​ ಸ್ಟಾರ್​ ರೀತಿಯೇ ಇದ್ದೀರಿ ಎನ್ನುವವರೇ ಹೆಚ್ಚು. 

‘ಜಿಮ್ಮಿ’ ಚಿತ್ರದ ಟೀಸರ್‌ ಹಾಡನ್ನು ಕೇಳಿದಾಗ ಖುದ್ದು ಸುದೀಪ್​ ಅವರೇ ಅಚ್ಚರಿಪಟ್ಟಿದ್ದರು. ಈ ಬಗ್ಗೆ ಅವರು ಹೇಳಿಕೊಂಡಿದ್ದರು ಕೂಡ. ‘ನನ್ನ ಮಗಳು ಹಾಡುತ್ತಾಳೆ ಅಂತ ಗೊತ್ತಿತ್ತು, ಇಷ್ಟು ಚೆನ್ನಾಗಿ ಹಾಡುತ್ತಾಳೆ ಅಂತ ಗೊತ್ತಿರಲಿಲ್ಲ’ ಎಂದಿದ್ದರು. ಅಲ್ಲಿಗೆ ಸೂಪರ್‌ಸ್ಟಾರ್‌ ತಂದೆಯ ಮಗಳು ಸೂಪರ್ ಗಾಯಕಿಯಾಗಿ ಚಿತ್ರರಂಗಕ್ಕೆ ಬರುವ ಲಕ್ಷಣಗಳು ದಟ್ಟವಾಗಿರುವುದು ತಿಳಿದಿತ್ತು. ಆದರೆ ಇದೀಗ ವಿಡಿಯೋ ಹಾಗೂ ಫೋಟೋ ಶೂಟ್​ಗಳನ್ನು (Photoshoot) ನೋಡಿದರೆ ನಾಯಕಿಯಾಗಿಯೇ ಎಂಟ್ರಿ ಕೊಡುವ ಲಕ್ಷಣ ಕಾಣುತ್ತಿದೆ ಎನ್ನುವುದು ಕಿಚ್ಚ ಫ್ಯಾನ್ಸ್​ ಅಂಬೋಣ. ಇದಕ್ಕೆ ಕಾಲವೇ ಉತ್ತರಿಸಬೇಕಿದೆ. 

View post on Instagram