ಗೋಲ್ಡನ್ ಸ್ಟಾರ್ ಗಣೇಶ್ ಅವರು ಸುದೀಪ್ ಅವರ ಫ್ರೆಂಡ್. ಇಬ್ಬರೂ ಒಳ್ಳೆಯ ಫ್ರೆಂಡ್ಸ್. ಹಾಗಿದ್ರೂ ಕಿಚ್ ಸುದೀಪ್ ಗಣೇಶ್ ಅವ್ರ ಬರ್ತ್‌ ಡೇ ಮರೆತು ಬಿಟ್ರಾ..?

ಗೋಲ್ಡನ್ ಸ್ಟಾರ್ ಗಣೇಶ್ ಅವರು ಸುದೀಪ್ ಅವರ ಫ್ರೆಂಡ್. ಇಬ್ಬರೂ ಒಳ್ಳೆಯ ಫ್ರೆಂಡ್ಸ್. ಹಾಗಿದ್ರೂ ಕಿಚ್ ಸುದೀಪ್ ಗಣೇಶ್ ಅವ್ರ ಬರ್ತ್‌ ಡೇ ಮರೆತು ಬಿಟ್ರಾ.. ಅನ್ನೋ ಪ್ರಶ್ನೆ ಮೂಡಿದೆ. ಇದಕ್ಕೆ ಕಾರಣ ಕಿಚ್ ಅವರ ಟ್ವೀಟ್.

ಗೋಲ್ಡನ್ ಸ್ಟಾರ್‌ಗೆ ಮುಂಚಿತವಾಗಿಯೇ ವಿಶ್ ಮಾಡಿದ್ದಾರೆ ಕಿಚ್ಚ. ಇದನ್ನು ಅಡ್ವಾನ್ಸ್‌ ವಿಶಸ್ ಎಂದುಕೋ. ನಿನ್ನ ಬರ್ತ್‌ಡೇ ಡೇಟ್‌ ಮಿಸ್ ಮಾಡ್ಕೊಂಡೆ. ಸರಳವಾಗಿ ಹುಟ್ಟುಹಬ್ಬ ಆಚರಿಸುವುದು ಒಳ್ಳೆಯ ನಿರ್ಧಾರ. ಮಚ್‌ ಲವ್ ಮಯ್ ಫ್ರೆಂಡ್ ಎಂದು ಟ್ವೀಟ್ ಮಾಡಿದ್ದಾರೆ.

ಬರ್ತ್‌ಡೇ ದಿನ ಮನೆಗೆ ಬರ್ಬೇಡಿ ಎಂದ ಗೋಲ್ಡನ್ ಸ್ಟಾರ್..! ಫ್ಯಾನ್ಸ್‌ಗೆ ಹೊಸ ರಿಕ್ಷೆಸ್ಟ್

ಇತ್ತೀಚೆಗಷ್ಟೇ ಫೇಸ್‌ಬುಕ್ ಪೋಸ್ಟ್ ಹಾಕಿದ್ದ ಗಣೇಶ್ ತಾವು ಈ ಬಾರಿ ಸರಳವಾಗಿ ಹುಟ್ಟು ಹಬ್ಬ ಆಚರಿಸುವುದಾಗಿ ಹೇಳಿದ್ದರು. ಫ್ಯಾನ್ಸ್‌ ಕೂಡಾ ಮನೆಗೆ ಬರುವುದು ಬೇಡ ಎಂದು ಸೂಚಿಸಿದ್ದರು.

Scroll to load tweet…

ಅಭಿಮಾನಿಗಳಲ್ಲಿ ಕಳಕಳಿಯ ಮನವಿ ಮಾಡಿಕೊಂಡ ಗೋಲ್ಡನ್ ಸ್ಟಾರ್ ಗಣೇಶ್ ಜುಲೈ -2 ರಂದು 42 ನೇ ಜನ್ಮ ದಿನ ಅದ್ಧೂರಿಯಾಗಿ ಆಚರಿಸದಿರಲು ನಿರ್ಧಾರ ಮಾಡಿದ್ದಾರೆ. ಕೊವಿಡ್ -19 ಹಿನ್ನೆಲೆಯಲ್ಲಿ ವೈಭವದಿಂದ ಹುಟ್ಟು ಹಬ್ಬ ಆಚರಿಸುತ್ತಿಲ್ಲ.. ಮನೆ ಬಳಿಗೆ ಬಂದು ತೊಂದರೆ ಪಡೆಬೇಡಿ ಎಂದು ಫ್ಯಾನ್ಸ್ ಗೆ ಮನವಿ ಮಾಡಿದ್ದರು.