ದುಬೈ(ಜ.  31) ಸ್ಯಾಂಡಲ್‌ವುಡ್ ಸುಲ್ತಾನ ಕಿಚ್ಚ ಸುದೀಪ್ ದುಬೈನಲ್ಲಿ ಬೆಳ್ಳಿಹಬ್ಬ ಆಚರಿಸಿಕೊಳ್ತಿದ್ದಾರೆ. ಸುದೀಪ್ ಸಿನಿಮಾ ಜೀವನಕ್ಕೆ 25 ವರ್ಷದ ಸಂಭ್ರಮ. ದುಬೈನ ಬುರ್ಜ್ ಖಲೀಫಾದ‌ಲ್ಲಿ ಕಿಚ್ಚನ ಬೆಳ್ಳಿ ಹಬ್ಬ ಆಚರಣೆ ನಡೆಯುತ್ತಿದ್ದು ಕಿಚ್ಚ ಅಭಿನಯದ ವಿಕ್ರಾಂತ್ ರೋಣ ಚಿತ್ರದ ಕಟೌಟ್ ಬುರ್ಜ್ ಖಲೀಫಾದ ಮೇಲೆ ಕೆಲವೇ ಕ್ಷಣದಲ್ಲಿ ರಾರಾಜಿಸಲಿದೆ.  ವಿಕ್ರಾಂತ್ ರೋಣದ ನೇರ ಪ್ರಸಾರವನ್ನು ನೀವಿಲ್ಲಿ  ನೋಡಬಹುದು.

ಬಿಗ್ ಬಾಸ್ ಹೊಸ ಪ್ರೋಮೋ ನೋಡಿದ್ದೀರಾ

ವಿಕ್ರಾಂತ್ ರೋಣ ಸಿನಿಮಾದ 180 ಸೆಕೆಂಡುಗಳ ಟೀಸರ್ ಬಿಡುಗಡೆ ಆಗಲಿದೆ. ಇಂದು ರಾತ್ರಿ ವಿಕ್ರಾಂತ್ ರೋಣ ಟೈಟಲ್‌   ಲೋಗೋ ಕೂಡ ಲಾಂಚ್ ಆಗಲಿದೆ. ಸುದೀಪ್ ಮತ್ತು ತಂಡ ಮೂರು ದಿನಗಳ ಹಿಂದೆಯೇ ದುಬೈ ತಲುಪಿದ್ದಾರೆ. ಕಿಚ್ಚನ ಬೆಳ್ಳಿಹಬ್ಬ ಆಚರಣೆಯಲ್ಲಿ ಪತ್ನಿ ಪ್ರಿಯಾ ಹಾಗೂ ಮಗಳು ಸಾನ್ವಿ ಭಾಗಿಯಾಗಲಿದ್ದಾರೆ. 

ದುಬೈನ ಬುರ್ಜ್​ ಖಲೀಫ ಮೇಲೆ ಕಿಚ್ಚ ಸುದೀಪ್​ ಬೆಳ್ಳಿ ಹಬ್ಬ ಆಚರಣೆ ನಡೆಯುತ್ತಿದ್ದು,  ಮೂರು ನಿಮಿಷದ ಲೇಸರ್ ಲೈಟ್​​​​​ ಕಟೌಟ್​​ಗೆ ಬರೋಬ್ಬರಿ 70 ಲಕ್ಷ ಖರ್ಚು ಮಾಡಲಾಗಿದೆ.