Asianet Suvarna News Asianet Suvarna News

ಸುದೀಪ್‌ ಜೊತೆ ಅನೂಪ್ ಭಂಡಾರಿ; ವಿಕ್ರಾಂತ್‌ ರೋಣ ಚಿತ್ರಕ್ಕಿಂತ ಬಿಗ್‌ ಬಜೆಟ್‌ ಸಿನಿಮಾ

ವಿಕ್ರಾಂತ್‌ ರೋಣ ಚಿತ್ರಕ್ಕಿಂತ ತುಂಬಾ ದೊಡ್ಡದು ಬಜೆಟ್ ಸಿನಿಮಾ ಮಾಡಲು ಮುಂದಾದ ಅನೂಪ್‌ ಭಂಡಾರಿ. 46ನೇ ಸಿನಿಮಾ ಯಾರ ಕೈಯಲ್ಲಿ....
 

Kiccha Sudeep to sign 46th film with director Anup Bhandari leaves not clue of title vcs
Author
First Published Jan 20, 2023, 10:26 AM IST

ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಮುಂದಿನ ಸಿನಿಮಾ ಯಾವುದು ಎಂಬ ಪ್ರಶ್ನೆಯನ್ನು ಅಭಿಮಾನಿಗಳು ಕೇಳುತ್ತಲೇ ಇದ್ದರು. ಈಗ ಆ ಪ್ರಶ್ನೆಗೆ ಉತ್ತರ ದೊರಕಿದೆ. ಅನೂಪ್‌ ಭಂಡಾರಿ ನಿರ್ದೇಶನದಲ್ಲಿ ಕಿಚ್ಚ ಸುದೀಪ್‌ ಅವರ ಮುಂದಿನ ಸಿನಿಮಾ ಮೂಡಿ ಬರಲಿದೆ.

‘ಪ್ರಸ್ತುತ ಸಿನಿಮಾದ ಹೆಸರು ಹೇಳಲಾರೆ. ಕಥಾ ಹಂದರ ಬಿಟ್ಟುಕೊಡಲಾರೆ. ಆದರೆ ಇದೊಂದು ಬಿಗ್‌ ಬಜೆಟ್‌ ಸಿನಿಮಾ. ವಿಕ್ರಾಂತ್‌ ರೋಣ ಸಿನಿಮಾಗಿಂತಲೂ ತುಂಬಾ ದೊಡ್ಡ ಸಿನಿಮಾ. ಆ ಕುರಿತು ಕೆಲಸ ನಡೆಯುತ್ತಿದೆ’ ಎಂದು ಅನೂಪ್‌ ಭಂಡಾರಿ ತಿಳಿಸಿದ್ದಾರೆ. ಕೆಲವೇ ದಿನಗಳಲ್ಲಿ ಕಿಚ್ಚ ಸುದೀಪ್‌ ತಾವೇ ಖುದ್ದಾಗಿ ಈ ಸಿನಿಮಾ ಘೋಷಣೆ ಮಾಡುವ ಸಾಧ್ಯತೆ ಇದೆ. ಈ ಹಿಂದೆ ಅನೂಪ್‌ ಭಂಡಾರಿ ‘ಬಿಲ್ಲಾ ಭಾಷಾ ರಂಗ’ ಮತ್ತು ‘ಅಶ್ವತ್ಥಾಮ’ ಸಿನಿಮಾ ಘೋಷಿಸಿದ್ದರು. ಹೊಸ ಸಿನಿಮಾ ಆ ಎರಡರಲ್ಲಿ ಒಂದಾ ಎಂಬ ಪ್ರಶ್ನೆಗೆ ಅನೂಪ್‌ ಅವರು ಉತ್ತರಿಸಲಿಲ್ಲ. ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ ಎಂದಿದ್ದಾರೆ. ಸುದೀಪ್‌ ನಿರ್ಮಾಣದಲ್ಲಿ ಈ ಸಿನಿಮಾ ಮೂಡಿಬರುವ ನಿರೀಕ್ಷೆ ಇದೆ. ವಿಚಾರ ಸ್ಪಷ್ಟತೆಗೆ ಅಭಿಮಾನಿಗಳು ಸ್ವಲ್ಪ ದಿನ ಕಾಯಬೇಕಾಗಿದೆ. ಇದು ಸುದೀಪ್ 46ನೇ ಸಿನಿಮಾ ಆಗಿರುವ ಕಾರಣ ವಿಭಿನ್ನತೆಯನ್ನು ನಿರಿಕ್ಷಿಸುತ್ತಿದ್ದಾರೆ. 

ಪಬ್ಲಿಕ್‌ ಫಿಗರ್‌ ಆದಾಗ ಹೂವಿನ ಜೊತೆ ಮೊಟ್ಟೆಯೂ ಬೀಳುತ್ತೆ: ಸುದೀಪ್‌

ಕೆಲವು ದಿನಗಳ ಹಿಂದೆ ಸುದೀಪ್‌ ಜೊತೆ ನಿರ್ದೇಶಕ ನಂದ ಕಿಶೋರ್ ಮತ್ತು ಕೆಆರ್‌ಜೆ ಸ್ಟುಡಿಯೋ ಮಾಲೀಕರಾದ ಕಾರ್ತಿಕ್ ಗೌಡ ಜೊತೆ ಕಾಣಿಸಿಕೊಂಡಿದ್ದಾರೆ. ಸುದೀಪ್ 46ನೇ ಸಿನಿಮಾ ಹೊಂಬಾಳೆ ಫಿಲ್ಮ ಕೈಯಲ್ಲಿದೆ ಎನ್ನುವ ಮಾತುಗಳು ಕೇಳಿ ಬಂದಿತ್ತು. 

ಕೋಟಿಗೊಬ್ಬ 3 ಮತ್ತು ವಿಕ್ರಾಂತ್ ರೋಣ ಸಿನಿಮಾ ನಂತರ ಸುದೀಪ್ ಬಿಗ್ ಬಾಸ್ ರಿಯಾಲಿಟಿ ಶೋ ನಿರೂಪಣೆಯಲ್ಲಿ ಬ್ಯುಸಿಯಾಗಿ ಬಿಟ್ಟರು. ಶೋ ಮುಗಿದ ನಂತರ ಸುದೀಪ್ ಮುಂದಿನ ನಡೆ ಏನು ಎನ್ನುವ ಕುತೂಹಲ ಹೆಚ್ಚಿದೆ. ಸದ್ಯ ಫ್ಯಾಮಿಲಿ ಟೈಮ್‌ ಎಂದು ಸುದೀಪ್ ಬ್ಯುಸಿಯಾಗಿದ್ದಾರೆ. ಇತ್ತೀಚಿಗೆ ಸುದೀಪ್ ಜೊತೆ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಬಾಡಿಗಾರ್ಡ್‌ ಕಿರಣ್‌ ಹುಟ್ಟುಹಬ್ಬವಿತ್ತು.  ಮನೆಯಲ್ಲಿ ಕೇಕ್ ಕಟ್ ಮಾಡಿಸಿ ಅದ್ಧೂರಿಯಾಗಿ ಆಚರಿಸಿದ್ದರು. ಕಳೆದ ವರ್ಷ ಕಿರಣ್‌ಗೆ ಬುಲೆಟ್‌ ಕೂಡ ಗಿಫ್ಟ್‌ ಮಾಡಿದ್ದರು ಹಾಗೂ ಒಮ್ಮೆ ದೀಪಿಕಾ ಪಡುಕೋಣೆ ಭೇಟಿ ಮಾಡಿದಾಗ ವಿಡಿಯೋ ಕಾಲ್ ಮಾಡಿಸಿ ಮಾತನಾಡಿಸಿದ್ದರು. 

ಸುದೀಪ್ ಭವಿಷ್ಯ:

ಚೈನೀಸ್‌ ವರ್ಷ ಭವಿಷ್ಯ ಆರಂಭವಾಗುವುದು ಜನವರಿ 25ರಿಂದ. ಈ ವರ್ಷ ಸುದೀಪ್ ಲೈಫ್‌ ಹೇಗಿರಲಿದೆ ಗೊತ್ತಾ? ಇವರ ಜನ್ಮವರ್ಷ 1973. ಇದು `ಎತ್ತಿನ ವರ್ಷ' (Ox year). ಇವರು ಎತ್ತಿನಂತೆ ಯಾವುದೇ ಪರಿಶ್ರಮಕ್ಕೂ ಅಳುಕದೆ ಗಂಭೀರ ಮತ್ತು ತಾಳ್ಮೆಯಿಂದ ಕೆಲಸ ಮಾಡುವವರು. ಮೈ ಹುಡಿ ಮಾಡಿಕೊಂಡು ದುಡಿಯುವವರು. ಅಷ್ಟೇ ಪ್ರಮಾಣದ ಯಶಸ್ಸನ್ನೂ ಪಡೆಯುತ್ತಾರೆ. ಕಿಚ್ಚ ಸುದೀಪ್‌ ಅವರು ʼವಿಕ್ರಾಂತ್‌ ರೋಣʼಕ್ಕಾಗಿ ಮೈ ಹುರಿಗಟ್ಟಿಸಿದ್ದನ್ನು ನೀವೇ ನೋಡಿರಬಹುದು. 'ಕಬ್ಜʼ ಮತ್ತು ʼಬಿಲ್ಲಾ ರಂಗʼ ಈ ವರ್ಷ ಬರಲಿವೆ ಎಂದು ನಿರೀಕ್ಷಿಸಲಾಗಿದೆ. ಎರಡೂ ಸುದೀಪ್‌ ನಿರೀಕ್ಷಿಸದಂಥ ಸಕ್ಸಸ್‌ ಮತ್ತು ಕಲೆಕ್ಷನ್‌ ತಂದುಕೊಡಲಿವೆ. ಇನ್ನೂ ಎರಡು ಫಿಲಂಗಳಿಗೆ ದುಡಿಯಬೇಕಾದೀತಾದರೂ ಅವು ಈ ವರ್ಷ ಬರಲಾರವು.

Follow Us:
Download App:
  • android
  • ios