ಅಶ್ವತ್ಥಾಮ ಚಿತ್ರದ ಬಗ್ಗೆ ಅಪ್ಡೇಟ್ ಹಂಚಿಕೊಂಡ ಕಿಚ್ಚ ಸುದೀಪ್. ಕಿಚ್ಚ ಕ್ರಿಯೇಷನ್‌ನಲ್ಲಿ ಮತ್ತೊಂದು ಹೊಸ ಸಿನಿಮಾ ರೆಡಿ........

ಕಿಚ್ಚ ಸುದೀಪ್ ಮತ್ತು ಅನೂಪ್ ಭಂಡಾರಿ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ 'ವಿಕ್ರಾಂತ್ ರೋಣ' ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿದೆ. ಇದೇ ಸಮಯಕ್ಕೆ ತಮ್ಮ ಮುಂದಿನ ಚಿತ್ರದ ಶೀರ್ಷಿಕೆಯನ್ನು ಅನೂಪ್ ಅನೌನ್ಸ್ ಮಾಡಿದ್ದರು. 

ಇದೀ ಗುಡ್ ನ್ಯೂಸ್ ಒಂದು ಹೊರ ಬಂದಿದೆ. 'ಅಶ್ವತ್ಥಾಮ' ಸಿನಿಮಾ ನಿರ್ಮಾಣ ಮಾಡುತ್ತಿರುವುದು ಸ್ವತಃ ಕಿಚ್ಚ ಸುದೀಪ್ ಅವರೇ. ಕಿಚ್ಚ ಕ್ರಿಯೇಷನ್ಸ್‌ನಲ್ಲಿ ಮೂಡಿ ಬರುತ್ತಿರುವ ಈ ಚಿತ್ರದ ಪೋಸ್ಟ್‌ ಕೂಡ ಕ್ರಿಯೇಟ್ ಆಗಿದೆ. 'ಹೆಸರು ಅಶ್ವತ್ಥಾಮ, ತಂದೆ ಹೆಸರು ದ್ರೋಣಾಚಾರ್ಯ, ವಯಸ್ಸು 52, ಸ್ಥಳ ಗೊತ್ತಿಲ್ಲ, ಗುರಿ ಲೋಡಿಂಗ್' ಎಂದು ಬರೆಯಲಾಗಿದೆ. 

ತನ್ನದೇ ಸಿನಿಮಾ ಬಗ್ಗೆ ಮನಬಿಚ್ಚಿ ಮಾತನಾಡಿದ ಕಿಚ್ಚ ಸುದೀಪ್!

'ನಾನು ಹಲವು ವರ್ಷಗಳಿಂದ ಈ ಪ್ರಾಜೆಕ್ಟ್‌ ಬಗ್ಗೆ ಕೆಲಸ ಮಾಡುತ್ತಿರುವೆ. ಇದನ್ನು ಆನ್‌ಸ್ಕ್ರೀನ್‌ಗೆ ತರಲೇಬೇಕು ಎಂದಿತ್ತು. ಸ್ಕ್ರಿಪ್ಟ್‌ ಕೆಲಸಗಳು ನಡೆಯುತ್ತಿದ್ದು ಶೀಘ್ರದಲ್ಲಿ ತಂಡದಲ್ಲಿರುವ ಸದಸ್ಯರ ಹೆಸರನ್ನು ರಿವೀಲ್ ಮಾಡುವೆ. ಸುದೀಪ್ ಸೋದರಳಿಯ ಸಂಚಿತ್ ಈ ಚಿತ್ರದ ಮೂಲಕ ಲಾಂಚ್ ಆಗುತ್ತಿದ್ದಾರೆ ಎಂಬುದು ಸುಳ್ಳು, ಇದರ ಬಗ್ಗೆ ಯಾವುದೇ ತೀರ್ಮಾನ ತೆಗೆದಿಕೊಂಡಿಲ್ಲ'ಎಂದು ಅನೂಪ್ ಮಾತನಾಡಿದ್ದಾರೆ.

Scroll to load tweet…