ಸುದೀಪ್ ನಟನೆಯ ‘ಫ್ಯಾಂಟಮ್’ ಚಿತ್ರತಂಡ ಕೇರಳದ ಪಾಲ್‌ಘಾಟ್‌ನಲ್ಲಿ ಬೀಡು ಬಿಟ್ಟಿದೆ. ಸುಮಾರು 35 ದಿನಗಳ ಕಾಲ ಕೇರಳದಲ್ಲಿ ಚಿತ್ರೀಕರಣ ಮಾಡಲು ಪ್ಲಾನ್ ಮಾಡಲಾಗಿದೆ.
ಕಳೆದ ಎರಡು ದಿನಗಳಿಂದ (ಡಿ.8ರಿಂದ) ಪಾಲ್‌ಘಾಟ್‌ನಲ್ಲಿ ಚಿತ್ರೀಕರಣ ಮಾಡುತ್ತಿದ್ದು, ಒಟ್ಟು 35 ದಿನಗಳ ಕಾಲ ಇದೇ ಜಾಗದಲ್ಲಿ ಶೂಟಿಂಗ್ ಪ್ಲಾನ್ ಮಾಡಿಕೊಂಡಿದ್ದಾರೆ ನಿರ್ದೇಶಕ ಅನೂಪ್ ಭಂಡಾರಿ. ಇದು ಚಿತ್ರತಂಡ ಅಂತಿಮ ಹಂತದ ಶೂಟಿಂಗ್.
ಕಿಚ್ಚ ಸುದೀಪ್ ಫೋಟೋ ಸಿಕ್ಕಾಪಟ್ಟೆ ವೈರಲ್; ಫ್ಯಾಂಟಮ್ ಲೋಕವಿದು!
‘ಚಿತ್ರದ ಕೊನೆಯ ಹಂತದ ಶೂಟಿಂಗ್ ಆರಂಭವಾಗಿದೆ. ಲೊಕೇಶನ್ ಅದ್ಭುತವಾಗಿದೆ. ಅಚ್ಚುಕಟ್ಟಾಗಿ ಸೆಟ್ ನಿರ್ಮಿಸಲಾಗಿದೆ’ ಎಂದು ಲೊಕೇಶನ್ ಫೋಟೋವೊಂದನ್ನು ತಮ್ಮ ಟ್ವಿಟ್ಟರ್‌ನಲ್ಲಿ ಸುದೀಪ್ ಹಂಚಿಕೊಂಡಿದ್ದಾರೆ. ಬಾಲಿವುಡ್ ನಾಯಕಿ ತಂಡವನ್ನು ಕೂಡಿಕೊಂಡಿದ್ದು, ಆ ಬಗ್ಗೆ ಮಾಹಿತಿ ನೀಡಲು ನಿರ್ಮಾಪಕ ಜಾಕ್ ಮಂಜು ನಿರಾಕರಿಸಿದ್ದಾರೆ.
![]()
‘ಬಾಂಬೆಯಿಂದ ಈಗಾಗಲೇ ನಾಯಕಿ ಬಂದಿದ್ದಾರೆ. ಆಕೆಯ ಪಾತ್ರದ ಚಿತ್ರೀಕರಣ ಕೂಡ ಆಗುತ್ತಿದೆ. ಆದರೆ, ಆಕೆ ಯಾರೂ ಎಂಬುದನ್ನು ಸಿನಿಮಾ ತೆರೆಗೆ ಬರುವ ತನಕ ಹೇಳಲಾಗದು. ಸಸ್ಪೆನ್ಸ್ ಕಾಯ್ದುಕೊಳ್ಳುವುದಕ್ಕಾಗಿಯೇ ಬಾಂಬೆಯಿಂದ ಹೊಸ ನಟಿಯನ್ನು ಕರೆಸಿದ್ದೇವೆ. ಕತೆಯ ದೃಷ್ಟಿಯಿಂದ ಆಕೆ ಯಾರೆಂದನ್ನು ಈಗಲೇ ಬಿಟ್ಟು ಕೊಡಲು ಆಗಲ್ಲ. ಹೀಗಾಗಿ ನಾಯಕಿ ಪಾತ್ರದ ಶೂಟಿಂಗ್ ಶುರುವಾಗಿ 32 ದಿನ ಆದರೂ ಯಾರೆಂದು ಗುಟ್ಟಾಗಿಯೇ ಇಟ್ಟಿದ್ದೇವೆ’ ಎಂಬುದು ನಿರ್ಮಾಪಕ ಜಾಕ್ ಮಂಜು ಕೊಡುವ ವಿವರಣೆ.
