Asianet Suvarna News Asianet Suvarna News

ಅಕ್ಟೋಬರ್ 14ಕ್ಕೆ ಕೋಟಿಗೊಬ್ಬ 3 ಬಿಡುಗಡೆ!

ಸೆಪ್ಟೆಂಬರ್ 2ರಂದು ಕಿಚ್ಚನ ಹುಟ್ಟು ಹಬ್ಬ. ಅಂದು ಕೋಟಿಗೊಬ್ಬ 3 ರಿಲೀಸ್ ದಿನಾಂಕ ಅಧಿಕೃತವಾಗಿ ಘೋಷಣೆ!

Kiccha Sudeep Kotigobba 3 to hit the screen on October 14th vcs
Author
Bangalore, First Published Aug 24, 2021, 1:38 PM IST
  • Facebook
  • Twitter
  • Whatsapp

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ, ಶಿವ ಕಾರ್ತಿಕ್ ನಿರ್ದೇಶನದ ‘ಕೋಟಿಗೊಬ್ಬ 3’ ಚಿತ್ರವನ್ನು ಅಕ್ಟೋಬರ್ 14ರಂದು ಕನ್ನಡ ಸೇರಿದಂತೆ ಬೇರೆ ಭಾಷೆಗಳಲ್ಲೂ ಬಿಡುಗಡೆ ಮಾಡುವ ತಯಾರಿ ಮಾಡಿಕೊಳ್ಳುತ್ತಿದೆ ಚಿತ್ರರಂಗ. ಸುದೀಪ್ ಹುಟ್ಟು ಹಬ್ಬದ ದಿನ ವಿಶೇಷವಾಗಿ ಸಿನಿಮಾ ಬಿಡುಗಡೆ ದಿನಾಂಕ ಪ್ರಕಟಿಸುವ ಸಾಧ್ಯತೆಗಳಿವೆ.

ಅಕ್ಟೋಬರ್ 14ರಂದು ಎಸ್.ಎಸ್. ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್’ ಸಿನಿಮಾ ಬಿಡುಗಡೆಯಾಗಬೇಕಿತ್ತು. ಆದರೆ, ಕಾರಣಾಂತರಗಳಿಂದ ಈ ಚಿತ್ರದ ಬಿಡುಗಡೆ ದಿನಾಂಕವೂ ಮುಂದಕ್ಕೆ ಹೋಗಿದೆ. ಈ ಕಾರಣಕ್ಕೆ ಅಕ್ಟೋಬರ್ 14ರಂದು ‘ಕೋಟಿಗೊಬ್ಬ 3’ ಚಿತ್ರದ ಮೂಲಕ ಚಿತ್ರ ರಸಿಕರನ್ನು ಚಿತ್ರಮಂದಿರಗಳತ್ತ ಕರೆ ತರುವ ಪ್ಲಾನ್ ನಿರ್ಮಾಪಕರದ್ದು ಎನ್ನಲಾಗುತ್ತಿದೆ. ಈ ಚಿತ್ರಕ್ಕೆ ಸೂರಪ್ಪ ಬಾಬು ಬಂಡವಾಳ ಹಾಕಿದ್ದಾರೆ.

ಸುದೀಪ್ ಸಿಡಿಪಿ ಬಿಡುಗಡೆ ಮಾಡಿದ ಅನಿಲ್ ಕುಂಬ್ಳೆ!

ಈಗಾಗಲೇ ಕಿಚ್ಚನ ಲುಕ್ ಹಾಗೂ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಟೀಸರ್‌ ಮಾಸ್ ಹಾಗೂ ಕಾಮಿಡಿ ಎಲಿಮೆಂಟ್‌ ಹೊಂದಿದ್ದು, ಚಿತ್ರ ಹಿಟ್ ಆಗೇ ಆಗುತ್ತೆ ಎನ್ನುತ್ತಿದ್ದಾರೆ ಕಿಚ್ಚ ಸುದೀಪ್ ಅಭಿಮಾನಿಗಳು. ಕೆಲವು ದಿನಗಳ ಹಿಂದೆ ಸುದೀಪ್ ಚಿತ್ರದ ಡಬ್ಬಿಂಗ್ ಮುಗಿಸಿದ್ದಾರೆ.  ಬಿಡುಗಡೆ ತಡವಾಗುತ್ತಿರುವ ಕಾರಣ ಓಟಿಟಿಯಲ್ಲಿ ಸಿನಿಮಾ ರಿಲೀಸ್ ಮಾಡುವಂತೆ ಪ್ರತಿಷ್ಠಿತ ಓಟಿಟಿ ಪ್ಲಾಟ್‌ಫಾರ್ಮ್ 35 ಕೋಟಿ ರೂ. ಆಫರ್ ನೀಡಿತ್ತು. ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡಲೇ ಬೇಕೆಂದು ಚಿತ್ರತಂಡ ನಿರ್ಧರಿಸಿದೆ.

Follow Us:
Download App:
  • android
  • ios