Asianet Suvarna News Asianet Suvarna News

ಅದ್ಭುತ, ಮಾಸ್ಟರ್ ಪೀಸ್; 'ಕಾಂತಾರ' ನೋಡಿ ಹಾಡಿಹೊಗಳಿದ ಸುದೀಪ್ ಪುತ್ರಿ ಸಾನ್ವಿ

ಕಾಂತಾರ ಸಿನಿಮಾದ ಬಗ್ಗೆ ಸ್ಯಾಂಡಲ್ ವುಡ್‌ನ ಖ್ಯಾತ ನಟ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಪುತ್ರಿ ಸಾನ್ವಿ ಕಾಂತಾರ ಸಿನಿಮಾ ನೋಡಿ ಹಾಡಿಹೊಗಳಿದ್ದಾರೆ.

Kiccha Sudeep daughter sanvi watched kanthara film and says brilliant masterpiece by rishab shetty sgk
Author
First Published Oct 3, 2022, 4:30 PM IST

ರಿಷಬ್ ಶೆಟ್ಟಿ ನಿರ್ದೇಶನ ಮಾಡಿ ನಟಿಸಿರುವ ಕಾಂತಾರ ಸಿನಿಮಾ ಅದ್ದೂರಿಯಾಗಿ ರಿಲೀಸ್ ಆಗಿದೆ. ಸೆಪ್ಟಂಬರ್ 30ರಂದು ತೆರೆಗೆ ಬಂದ ಕಾಂತಾರ ಸಿನಿಮಾ ನೋಡಿ ಪ್ರೇಕ್ಷಕರು ಫಿದಾ ಆಗಿದ್ದಾರೆ.  ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಅದರಲ್ಲೂ ರಿಷಬ್ ಶೆಟ್ಟ ಅಭಿನಯಕ್ಕೆ ಅಭಿಮಾನಿಗಳು ಫುಲ್ ಮಾರ್ಕ್ಸ್ ನೀಡಿದ್ದಾರೆ. ಚಿತ್ರ ವೀಕ್ಷಿಸಿದ ಪ್ರೇಕ್ಷಕರು ಸಾಮಾಜಿಕ ಜಾಲತಾಣದಲ್ಲಿ ಚಿತ್ರದ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. ಸಿನಿಮಾದ ಹಾಡು, ಬ್ಯಾಗ್ರೌಂಡ್ ಮ್ಯೂಸಿಕ್ , ಕರಾವಳಿಯ ಆಚಾರ ವಿಚಾರಗಳು ಪ್ರೇಕ್ಷಕರ ಹೃದಯ ಗೆದ್ದಿದೆ. ಟ್ರೈಲರ್ ಮೂಲಕವೇ ಭಾರಿ ನಿರೀಕ್ಷೆ ಹುಟ್ಟಿಹಾಕಿದ್ದ ಕಾಂತಾರಾ ಸಿನಿಮಾ ಈಗ ಚಿತ್ರಮಂದಿರಗಳಲ್ಲಿ ಅಬ್ಬರಿಸುತ್ತಿದೆ. 

ಸದ್ಯ ಕಾಂತಾರ ಸಿನಿಮಾದ ಬಗ್ಗೆ ಸ್ಯಾಂಡಲ್ ವುಡ್‌ನ ಖ್ಯಾತ ನಟ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಪುತ್ರಿ ಸಾನ್ವಿ ಸುದೀಪ್ ಸಿನಿಮಾ ನೋಡಿ ಹಾಡಿಹೊಗಳಿದ್ದಾರೆ. ಚಿತ್ರದ ಬಗ್ಗೆ ವಿಮರ್ಶೆ ಮಾಡಿರುವ ಸಾನ್ವಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಕಾಂತಾರ ಬಗ್ಗೆ ಹೇಳಿರುವ ಸಾನ್ವಿ, 'ಈಗಷ್ಟೆ ಕಾಂತಾರ ಸಿನಿಮಾ ವೀಕ್ಷಿಸಿದೆ. ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ರಿಷಬ್ ಶೆಟ್ಟಿ ಅವರಿಂದ ಅದ್ಭುತವಾದ ಮಾಸ್ಟರ್ ಪೀಸ್. ಇಡೀ ತಂಡಕ್ಕೆ ಹ್ಯಾಟ್ಸಾಫ್' ಎಂದು ಹೇಳಿದರು. 

ಸುದೀಪ್ ಪುತ್ರಿ ಅನೇಕ ವಿಚಾರಗಳನ್ನು ರಿವೀಲ್ ಮಾಡಿದ್ದಾರೆ. ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರ ನೀಡಿರುವ ಸಾನ್ವಿ ಅನೇಕ ವಿಚಾರಗಳನ್ನು ಬಹಿರಂಗ ಪಡಿಸಿದರು. ನೆಪೋಟಿಸಂ ಬಗ್ಗೆಯೂ ಸಾನ್ವಿ  ಮಾತನಾಡಿದ್ದಾರೆ.  ಮೊದಲ ಬಾರಿಗೆ ಸುದೀಪ್ ಪುತ್ರಿ ನೆಪೋಟಿಸಂ ಬಗ್ಗೆ ಮಾತನಾಡಿದ್ದಾರೆ.   

ನೆಪೋಟಿಸಂ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಉತ್ತರ ನೀಡಿದ ಸಾನ್ವಿ, ಸೆಲೆಬ್ರಿಟಿ ಮಕ್ಕಳು ಎನ್ನುವ ಕಾರಣಕ್ಕೆ ತುಂಬಾ ದ್ವೇಷ ಮಾಡಲಾಗುತ್ತಿದೆ ಎಂದು ಹೇ
ಳಿದ್ದಾರೆ. 'ಸೆಲೆಬ್ರಿಟಿ ಮಕ್ಕಳು ಎನ್ನುವ ಕಾರಣಕ್ಕೆ ಅವರನ್ನು ತುಂಬಾ ದ್ವೇಷ ಮಾಡಲಾಗುತ್ತಿದೆ. ಕೇವಲ ಅವರ ಬ್ಯಾಗ್ರೌಂಡ್ ನಿಂದ. ಇದು ಅವರ (ಸೆಲೆಬ್ರಿಟಿ ಮಕ್ಕಳ) ತಪ್ಪಲ್ಲ. ದಯವಿಟ್ಟು ಹೇಟ್ ಮಾಡುವುದನ್ನು ನಿಲ್ಲಿಸಿ' ಎಂದು ಹೇಳಿದ್ದಾರೆ. 

Kantara; ರಿಷಬ್ ಶೆಟ್ಟಿ ಸಿನಿಮಾಗೆ ಪ್ರಭಾಸ್ ಫಿದಾ, ಕ್ಲೈಮ್ಯಾಕ್ಸ್ ಬಗ್ಗೆ ಹೇಳಿದ್ದೇನು?

ಇನ್ನು ಸ್ಯಾಂಡಲ್ ವುಡ್ ಎಂಟ್ರಿಯ ಬಗ್ಗೆಯೂ ಸುದೀಪ್ ಪುತ್ರಿ ಸಾನ್ವಿ ಮಾತನಾಡಿದ್ದಾರೆ. ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕರೆ ಏನು ಮಾಡುತ್ತೀರಿ ಎಂದು ಕೇಳಿದ ಪ್ರಶ್ನೆಗೆ ಡಿಪೆಂಡ್ಸ್ ಎಂದು ಹೇಳಿದ್ದಾರೆ. ಇನ್ನು ಈವರ್ಷದ ತುಂಬಾ ಇಷ್ಟವಾದ ಸಿನಿಮಾ ಯಾವುದು ಎನ್ನುವ ಪ್ರಶ್ನೆಗೆ 'ಕಾಂತಾರ' ಎಂದು ಹೇಳಿದ್ದಾರೆ. ಇಷ್ಟವಾದ ಗಾಯಕ ವಿಜಯ್ ಪ್ರಕಾಶ್ ಎಂದು ಹೇಳಿದ್ದಾರೆ. ಫೇವರಿಟ್ ಹೀರೋ ಸಿದ್ಧಾರ್ಥ್ ಮಲ್ಹೋತ್ರ ಮತ್ತು ಕಿಚ್ಚ ಸುದೀಪ್ ಎಂದಿದ್ದಾರೆ.

1 ತಿಂಗಳು Non Veg ತಿಂದಿಲ್ಲ, ಚಪ್ಪಲಿ ಹಾಕುತ್ತಿರಲಿಲ್ಲ: ಕಾಂತಾರ ಕಷ್ಟ ಬಿಚ್ಚಿಟ್ಟ ರಿಷಬ್ ಶೆಟ್ಟಿ

ಇನ್ನು ಕಾಂತಾರ ಬಗ್ಗೆ ಹೇಳುವುದಾದರೆ ಚಿತ್ರದಲ್ಲಿ ರಿಷಬ್ ಶೆಟ್ಟಿ ಮತ್ತು ಕಿಶೋರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಾಯಕಿಯಾಗಿ ಸಪ್ತಮಿ ಕಾಣಿಸಿಕೊಂಡಿದ್ದಾರೆ. ಕಾಂತಾರ ಸಿನಿಮಾದಲ್ಲಿ ಕಂಬಳ ಕ್ರೀಡೆಯೇ ಹೈಲೆಟ್. ಜೊತೆಗೆ ಭೂತಕೋಲ, ದೈವಾರಾಧನೆ, ಆಚಾರ, ವಿಚಾರಗಳನ್ನು ಸೂಕ್ಷ್ಮವಾಗಿ ತೋರಿಸಲಾಗಿದೆ. ಕರಾವಳಿಯ ಸಂಸ್ಕೃತಿ ಜೊತೆಗೆ ಕಾಡಿನ ಜೊತೆ ಬದುಕುವ ಜನರು ಮತ್ತು ಸರ್ಕಾರಿ ಅಧಿಕಾರಿಗಳ ಸಂಘರ್ಷ ಕೂಡ ಇದೆ. ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಅವರು ನಟಿಸುವ ಜೊತೆಗೆ ನಿರ್ದೇಶನದ ಜಬಾವ್ದಾರಿಯನ್ನು ವಹಿಸಿಕೊಂಡಿದ್ದಾರೆ. ಅಜನೀಶ್ ಲೋಕಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ. 

Follow Us:
Download App:
  • android
  • ios