Asianet Suvarna News Asianet Suvarna News

ಹೋರಾಟದಲ್ಲಿ ಅಸುನೀಗಿದರೂ ಪರ್ವಾಗಿಲ್ಲ ಫೈಟ್ ಮುಂದುವರಿಸುವೆ: ಯಶ್

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ವಿಡಿಯೋ. ಯಶ್ ಭವಿಷ್ಯವನ್ನು ಪ್ರಶ್ನೆ ಮಾಡುವವರಿಗೆ ಇಲ್ಲಿದೆ ಉತ್ತರ.... 
 

KGF actor Yash talks about most asked questions by netizens after kgf vcs
Author
First Published Jan 12, 2023, 3:32 PM IST

ನಂದ ಗೋಕುಲ ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ಜರ್ನಿ ಆರಂಭಿಸಿದ ನವೀನ್‌ ಕುಮಾರ್ ಗೌಡ 2008ರಲ್ಲಿ ಮೊಗ್ಗಿನ ಮನಸ್ಸು ಸಿನಿಮಾ ಮೂಲಕ ಬೆಳ್ಳಿ ತೆರೆ ಪಾದಾರ್ಪಣೆ ಮಾಡಿದ್ದರು. ಅಲ್ಲಿಂದ ಯಶ್ ಆಗಿ ಪರಿಚಯವಾದ ಹಾಸನದ ಹುಡುಗ ರಾಕಿಂಗ್ ಸ್ಟಾರ್‌ ಕಿರೀಟ ಪಡೆದುಕೊಂಡರು. ಹೊಂಬಾಳೆ ಫಿಲ್ಮ್ ಜೊತೆ ಕೈ ಜೋಡಿಸಿ ಕೆಜಿಎಫ್‌ ಹಿಟ್ ಕೊಟ್ಟು ರಾಖಿ ಭಾಯ್ ಆದ್ದರು. ವಿಶ್ವಾದ್ಯಂತ ಬ್ಯಾಕ್ ಟು ಬ್ಯಾಕ್ ಹಿಟ್‌ ಕೊಟ್ಟಿರುವ ಯಶ್‌ ಮುಂದಿನ ಪ್ರಾಜೆಕ್ಟ್‌ ಯಾವುದು? ಯಾರ ಜೊತೆ ಸಿನಿಮಾ ಮಾಡಲಿದ್ದಾರೆ ಎಂದು ಪದೇ ಪದೇ ಕೇಳುವ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ. 

ವೈರಲ್ ವಿಡಿಯೋ: 

ಕೆಲವು ದಿನಗಳ ಹಿಂದೆ ಅನುಪಮಾ ಚೋಪ್ರಾ ನಡೆಸಿದ ಸಂದರ್ಶನದಲ್ಲಿ ಯಶ್ ಭಾಗಿಯಾಗಿದ್ದು. ವೃತ್ತಿ ಜೀವನ ಮತ್ತು ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವಾಗ ಹಿಟ್ ಸಿನಿಮಾ ಆದ್ಮೇಲೆ ಜನರು ಪದೇ ಪದೇ ಕೇಳುವ ಪ್ರಶ್ನೆಗಳ ಬಗ್ಗೆ ಚರ್ಚೆ ಮಾಡಿದ್ದಾರೆ. 

Yash; ನೆಪೋಟಿಸಂ ಬಗ್ಗೆ ರಾಕಿಂಗ್ ಸ್ಟಾರ್ ಹೇಳಿದ್ದೇನು? ಫ್ಯಾನ್ಸ್ ಹೃದಯ ಗೆದ್ದ ಯಶ್ ರಿಯಾಕ್ಷನ್

'ಈಗಲೂ ನನ್ನನ್ನು ಅನೇಕರು ಪ್ರಶ್ನೆ ಮಾಡುತ್ತಾರೆ ಯಾಕೆ ಸಮಯ ತೆಗೆದುಕೊಳ್ಳುತ್ತಿರುವೆ ಎಂದು. ಇನ್ನೂ ಕೆಲವರು ಹೇಳುತ್ತಾರೆ ನೀವು ಕೆಜಿಎಫ್‌ ಭಾಗ 3 ಸಿನಿಮಾ ಮಾಡಬೇಕು ಎಂದು. ನಿಮಗೆ ಅದೊಂದೆ ಇರುವುದು ಎಂದು. ಯಾವಾಗ ನಿಮ್ಮ ಗಡ್ಡ ತೆಗೆಯುವುದು? ಜನರು ನಿಮ್ಮನ್ನು ಹೇಗೆ ಒಪ್ಪಿಕೊಳ್ಳುತ್ತಾರಾ? ಈ ರೀತಿ ಪ್ರಶ್ನೆಗಳು ಬರುವುದು ನನ್ನ ಸ್ನೇಹಿತರಿಂದಲೇ. ಈ ರೀತಿ ಪ್ರಶ್ನೆಯನ್ನು ತುಂಬಾ ಮಂದಿ ಕೇಳುತ್ತಾರೆ ಈಗ ಏನು ಮಾಡುತ್ತಿರುವೆ? ಮುಂದಕ್ಕೆ ನಿನ್ನ ಕೈಯಲ್ಲಿ ಏನು ಮಾಡಲು ಆಗುತ್ತದೆ? ....ಏನ್ ಸರ್ ಇದೇ ಕೊನೆನಾ? ಎನ್ನುತ್ತಾರೆ. ಅದಕ್ಕೆ ನನ್ನ ಉತ್ತರ ಇರಬಹುದು ಹೌದು ಇದು ಕೊನೆ ಎಂದು ನಿಮಗೆ ಅನಿಸಿರಬಹುದು. ಸರಿ ಈಗ ನಾನು ಬಂದಿರುವೆ ಎಲ್ಲವನ್ನು ಸಂಪೂರ್ಣ ನಾನು ಪಡೆದುಕೊಳ್ಳುವೆ ಎನ್ನುವ ವ್ಯಕ್ತಿ ನಾನಲ್ಲ. ನಾನು ನನ್ನನ್ನು ಮೊದಲು ಸ್ಥಾಪಿಸಿಕೊಳ್ಳಬೇಕು ಎನ್ನುವುದಿಲ್ಲ. I am not somebody who is not built for administration, I am somebody who was buit to conquer.  ನಾನು ಹೊರಗಡೆ ಎಲ್ಲಾ ಹೋಗುವೆ, ನನಗೆ ಖುಷಿ ಕೊಡುವ ಕೆಲಸಗಳನ್ನು ಮಾಡುವೆ. ಹೋರಾಟದಲ್ಲಿ ನಾನು ಸತ್ತರೂ ಪರ್ವಾಗಿಲ್ಲ ಆದರೆ ನಾನು ಸದಾ ಫೈಟ್ ಮಾಡುವ ವ್ಯಕ್ತಿ. ಇದನ್ನು ನಾನು ಹೆಚ್ಚಿಗೆ ನಂಬುವೆ' ಎಂದು ಯಶ್ ಮಾತನಾಡಿದ್ದಾರೆ. 

ಇದೊಂದೇ ಹೇಳಿಕೆ ವೈರಲ್ ಆಗಿದಲ್ಲ ಯಶ್ ಹಿಂದಿ ಮತ್ತು ಕನ್ನಡ ಸಿನಿಮಾ ಬಗ್ಗೆ ನೀಡಿದ ಕೇಳಿ ಕೂಡ ಸೌಂಡ್ ಮಾಡಿತ್ತು.  'ಕರ್ನಾಟಕದ ಜನರು ಬೇರೆ ಯಾವುದೇ ಉದ್ಯಮವನ್ನು ಕೀಳಾಗಿ ನೀಡುವುದನ್ನು ನಾನು ಬಯಸುವುದಿಲ್ಲ. ಏಕೆಂದರೆ ಎಲ್ಲರೂ ನಮ್ಮನ್ನು ಕೀಳಾಗಿ ನಡೆಸಿಕೊಂಡಾಗ ನಾವು ಆ ಸಮಸ್ಯೆಯನ್ನು ಎದುರಿಸಿದ್ದೇವೆ. ನಾನು ಈ ಗೌರವ ಪಡೆಯಲು ತುಂಬಾ ಶ್ರಮಿಸಿದ್ದೇವೆ. ಅದರ ನಂತರ, ನಾವು ಯಾರನ್ನೂ ಕೆಟ್ಟದಾಗಿ ನಡೆಸಿಕೊಳ್ಳುವುದು ಬೇಡ.  ನಾವು ಎಲ್ಲರನ್ನೂ ಗೌರವಿಸೋಣ. ಬಾಲಿವುಡ್ ಅನ್ನು ಗೌರವಿಸಿ. ನಾರ್ತ್ ಮತ್ತು ಸೌತ್ ಮರೆತುಬಿಡಿ.ಇದೇ ಸಮಯದಲ್ಲಿ ಯಾರನ್ನೂ ಮೂಲೆಗುಂಪು ಮಾಡುವುದು ಸರಿಯಲ್ಲ ಯಾರೋ ಒಬ್ಬರು ಬಾಲಿವುಡ್‌ ಏನೂ ಅಲ್ಲ  ಎಂದು ಅಪಹಾಸ್ಯ ಮಾಡುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಯಶ್ ಹೇಳಿದರು. 'ಒಂದು ದೇಶವಾಗಿ, ನಾವು ಉತ್ತಮ ಸಿನಿಮಾಗಳನ್ನು ಮಾಡಬೇಕು, ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಬೇಕು ಮತ್ತು ಚಿತ್ರಮಂದಿರಗಳನ್ನು ನಿರ್ಮಿಸಬೇಕು. ಮಾಡಲು ತುಂಬಾ ಇದೆ. ಈ ತಲೆಮಾರು ನಮ್ಮ ನಡುವೆ ಜಗಳವಾಡುವುದನ್ನು ನಿಲ್ಲಿಸಿ, ಹೊರಹೋಗಿ ಪ್ರಪಂಚದ ಇತರರೊಂದಿಗೆ ಸ್ಪರ್ಧಿಸಿ ಭಾರತ ಈಗ ಬಂದಿದೆ ಎಂದು ಹೇಳಬೇಕು' ಎಂದು ಹೇಳಿದರು. 

Follow Us:
Download App:
  • android
  • ios