Asianet Suvarna News Asianet Suvarna News

APPUಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ: ಮುಖ್ಯ ಅತಿಥಿಗಳಾಗಿ ಬರಲಿದ್ದಾರೆ ರಜನಿಕಾಂತ್‌, ಜೂನಿಯರ್‌ ಎನ್‌ಟಿಆರ್‌

ನವೆಂಬರ್‌ 1 ರಂದು ರಾಜ್ಯದ ಜನತೆಯ ಪ್ರೀತಿಯ ಅಪ್ಪುವಿಗೆ ನವೆಂಬರ್‌ 1 ರಂದು ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟರಾದ ಜೂನಿಯರ್‌ ಎನ್‌ಟಿಆರ್‌ ಹಾಗೂ ರಜನಿಕಾಂತ್‌ ಅವರಿಗೆ ಆಹ್ವಾನ ನೀಡಲಾಗಿದ್ದು, ಅವರು ಮುಖ್ಯ ಅತಿಥಿಗಳಾಗಿ ಬರುತ್ತಿರುವುದನ್ನು ಖಚಿತಪಡಿಸಿದ್ದಾರೆ. 

karnataka ratna state highest civilian award to puneeth rajkumar junior ntr and rajinikanth confirms their presence ash
Author
First Published Oct 29, 2022, 3:46 PM IST

ಕನ್ನಡ ನಾಡಿನ ಅಪ್ಪು, ಪುನೀತ್‌ ರಾಜ್‌ಕುಮಾರ್‌ ನಮ್ಮನ್ನಗಲಿ ಇಂದಿಗೆ 1 ವರ್ಷ ತುಂಬಿದೆ. ಆದರೂ, ದೊಡ್ಮನೆ ಕುಟುಂಬ, ಅಪ್ಪು ಅಭಿಮಾನಿಗಳು ಮಾತ್ರವಲ್ಲ, ಇಡೀ ಕರ್ನಾಟಕ ಜನತೆಯೇ ಅವರನ್ನು ಮರೆಯಲು ಸಾಧ್ಯವಾಗುತ್ತಿಲ್ಲ. ಇನ್ನು, ಸ್ಯಾಂಡಲ್‌ವುಡ್‌ಗೆ ಮಾತ್ರವಲ್ಲ, ಸಂಪೂರ್ಣ ಭಾರತೀಯ ಚಿತ್ರರಂಗಕ್ಕೆ ಅವರನ್ನು ಮರೆಯಲು ಸಾಧ್ಯವಾಗುತ್ತಿಲ್ಲ. ಈ ಮಧ್ಯೆ, ನವೆಂಬರ್‌ 1 ರಂದು ರಾಜ್ಯದ ಜನತೆಯ ಪ್ರೀತಿಯ ಅಪ್ಪುವಿಗೆ ನವೆಂಬರ್‌ 1 ರಂದು ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟರಾದ ಜೂನಿಯರ್‌ ಎನ್‌ಟಿಆರ್‌ ಹಾಗೂ ರಜನಿಕಾಂತ್‌ ಅವರಿಗೆ ಆಹ್ವಾನ ನೀಡಲಾಗಿದ್ದು, ಅವರು ಮುಖ್ಯ ಅತಿಥಿಗಳಾಗಿ ಬರುತ್ತಿದ್ದಾರೆ. 

ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಜೂನಿಯರ್‌ ಎನ್‌ಟಿಆರ್‌ ಹಾಗೂ ರಜನಿಕಾಂತ್‌, ಅತಿಥಿಯಾಗಿ ಬರುತ್ತಿರುವುದನ್ನು ಖಚಿತಪಡಿಸಿದ್ದಾರೆ. ಮುಖ್ಯಮಂತ್ರಿಗಳ ಆಹ್ವಾನಕ್ಜೆ ಸಮ್ಮತಿಸಿ ಕಾರ್ಯಕ್ರಮ ಉಪಸ್ಥಿತಿಯನ್ನು ಟಾಲಿವುಡ್ ಹಾಗೂ ಕಾಲಿವುಡ್‌ ನಟರು ಖಚಿತಪಡಿಸಿದ್ದಾರೆ. ಅಲ್ಲದೆ, ಮುಖ್ಯಮಂತ್ರಿಗಳಿಗೆ ಹಾಗೂ ರಾಜ್ಯದ ಜನತೆಗೆ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳನ್ನೂ ತಿಳಿಸಿದ್ದಾರೆ ನಟ ಜೂನಿಯರ್‌ ಎನ್‌ಟಿಆರ್‌.  

ಇದನ್ನು ಓದಿ: ನವೆಂಬರ್ 1ಕ್ಕೆ ಅಪ್ಪುಗೆ 'ಕರ್ನಾಟಕ ರತ್ನ' ಪ್ರದಾನ; ರಜನಿಕಾಂತ್, ಐಶ್ವರ್ಯಾ ರೈ ಬರುವ ನಿರೀಕ್ಷೆ

ನವೆಂಬರ್‌ 1 ರಂದು ರಾಜ್ಯ ಸರ್ಕಾರ ನಡೆಸುವ ಸಮಾರಂಭದಲ್ಲಿ ಪುನೀತ್‌ ರಾಜ್‌ ಕುಮಾರ್‌ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ಸಮಾರಂಭ ಪ್ರದಾನ ಮಾಡಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಟಾಲಿವುಡ್‌ ಖ್ಯಾತ ನಟ ಜೂನಿಯರ್‌ ಎನ್‌ಟಿಆರ್‌ ಅವರಿಗೆ ಆಹ್ವಾನ ಮಾಡಲಾಗಿತ್ತು. ಈ ಹಿನ್ನೆಲೆ ಸಿಎಂಗೆ ಪತ್ರ ಬರೆದ ಜೂನಿಯರ್‌ ಎನ್‌ಟಿಆರ್‌, ಸಮಾರಂಭಕ್ಕೆ ಆಹ್ವಾನಿಸುವುದಾಗಿ ಖಚಿತಪಡಿಸಿದ್ದಾರೆ. 

ಪುನೀತ್‌ ರಾಜ್‌ಕುಮಾರ್‌ ತುಂಬಾ ಟ್ಯಾಲೆಂಟೆಡ್‌ ನಟರಾಗಿದ್ದರು ಹಾಗೂ ಉತ್ತಮ ಸಮಾಜ ಸೇವಕರೂ ಆಗಿದ್ದರು ಎಂಬುದನ್ನು ನಾನು ಒಪ್ಪುತ್ತೇನೆ. ಅವರ ಹಠಾತ್‌ ನಿಧನ, ಕನ್ನಡ ಚತ್ರರಂಗಕ್ಕೆ ಆದ ನಷ್ಟ ಮಾತ್ರವಲ್ಲ. ಇಡೀ ಭಾರತೀಯ ಚಿತ್ರರಂಗಕ್ಕೆ ನಷ್ಟವಾಗಿದೆ. ವೈಯಕ್ತಿಕವಾಗಿ ನನಗೆ ಕೂಡ, ಏಕೆಂದರೆ ನಾವಿಬ್ಬರೂ ಹೃದಯಕ್ಕೆ ತುಂಬಾ ಹತ್ತಿರವಾಗಿದ್ದೆವು. ನಾವು ಅನೇಕ ವಿಷಯಗಳನ್ನು ಒಟ್ಟಿಗೆ ಹಂಚಿಕೊಂಡಿದ್ದೇವೆ.

ಈ ಹಿನ್ನೆಲೆ ಅಪ್ಪುವಿಗೆ ಗೌರವ ಸಲ್ಲಿಸುವ ಸಮಾರಂಭದಲ್ಲಿ ನಾನು ಭಾಗಿಯಾಗುವುದು ನನಗೆ ಗೌರವ ಮಾತ್ರವಲ್ಲ ಕರ್ತವ್ಯವೂ ಹೌದು ಎಂದೂ ಸಿಎಂ ಬೊಮ್ಮಾಯಿ ಅವರಿಗೆ ಬರೆದ ಪತ್ರದಲ್ಲಿ ಜೂನಿಯರ್‌ ಎನ್‌ಟಿಆರ್‌ ಬರೆದಿದ್ದಾರೆ. ಈ ಮೂಲಕ ನವೆಂಬರ್‌ 1 ರಂದು ನಡೆಯುವ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಭೇಟಿ ನೀಡುವುದಾಗಿ ಖಚಿತಪಡಿಸಿದ್ದಾರೆ. 

ಸಮಾರಂಭಕ್ಕೆ ಬರುವ ಬಗ್ಗೆ ಅಧಿಕೃತಗೊಳಿಸಿದ ರಜನಿಕಾಂತ್‌
ಜೂನಿಯರ್‌ ಎನ್‌ಟಿಆರ್‌ ಮಾತ್ರವಲ್ಲ ಟಾಲಿವುಡ್‌ ಸೂಪರ್‌ಸ್ಟಾರ್‌ ರಜಿನಿಕಾಂತ್‌ ಅವರು ಸಹ ಅಪ್ಪು ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಬರುವುದಾಗಿ ಸಿಎಂ ಬೊಮ್ಮಾಯಿಗೆ ಪತ್ರ ಬರೆದಿದ್ದಾರೆ. ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಕ್ಕೆ ರಾಜ್ಯ ಸರ್ಕಾರಕ್ಕೆ ಹಾಗೂ ಸಿಎಂ ಬಸವರಾಜ ಬೊಮ್ಮಾಯಿಗೆ ಧನ್ಯವಾದ ಹೇಳಿದ್ದಾರೆ. 

ಇದನ್ನೂ ಓದಿ: ನವೆಂಬರ್ 1ಕ್ಕೆ ಪುನೀತ್ ರಾಜ್‌ಕುಮಾರ್‌ಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ; ಸಿಎಂ ಬೊಮ್ಮಾಯಿ

ಅಲ್ಲದೆ, ನವೆಂಬರ್ 1 ರಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಚೆನ್ನೈನಿಂದ ಹೊರಡುತ್ತೇನೆ ಹಾಗೂ ಮಧ್ಯಹ್ನ 3 ಗಂಟೆ ವೇಳೆಗೆ ಬೆಂಗಳೂರಿಗೆ ಬರುವುದಾಗಿಯೂ ರಜನಿಕಾಂತ್‌ ಅಧಿಕೃತ ಪತ್ರದಲ್ಲಿ ಹೇಳಿಕೊಂಡಿದ್ದಾರೆ. 

ಇದನ್ನೂ ಓದಿ: ಪುನೀತ್‌ ರಾಜ್‌ಕುಮಾರ್‌ಗೆ ಶೀಘ್ರದಲ್ಲೇ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ: ಸಿಎಂ ಘೋಷಣೆ

Follow Us:
Download App:
  • android
  • ios