ಗಣರಾಜ್ಯೋತ್ಸವಕ್ಕೆ ಈ ಸಿನಿಮಾ ನೋಡುವಂತೆ ಸೂಚಿಸಿದ ಸರ್ಕಾರ..! ಇದರ ವಿಶೇಷತೆ ಏನು ಗೊತ್ತಾ?

ರಾಜ್ಯದ ಜನತೆ ಗಣರಾಜ್ಯೋತ್ಸವ ದಿನದಂದು ಈ ಸಿನಿಮಾವನ್ನು ವೀಕ್ಷಣೆ ಮಾಡುವಂತೆ ರಾಜ್ಯ ಸರ್ಕಾರದಿಂದ ಸೂಚನೆ ನೀಡಲಾಗಿದೆ.

Karnataka Govt suggested to watch movie Samanatheya kadege for republic day 2024 sat

ಬೆಂಗಳೂರು  (ಜ.24): ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷಗಳು ಕಳೆದಿವೆ. ಇನ್ನು ಈಗ ದೇಶದ ಸಂವಿಧಾನವನ್ನು ಅಂಗೀಕರಿಸಿಕೊಂಡು 75 ವರ್ಷಗಳು ಕಳೆದಿವೆ. ಆದರೂ, ದೇಶದಲ್ಲಿ ಸಮಾನತೆಯನ್ನು ಸಾಧಿಸುವುದು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಸಮಾನತೆ ಸಾರುವ ಚಲನಚಿತ್ರವನ್ನು ಸರ್ಕಾರದಿಂದಲೇ ಪ್ರದರ್ಶನ ಮಾಡಲಾಗುತ್ತಿದ್ದು, ಇದನ್ನು ಎಲ್ಲರೂ ನೋಡಬೇಕು ಎಂದು ಸೂಚನೆ ನೀಡಲಾಗಿದೆ.

ನಾವೆಲ್ಲರೂ ಭಾರತೀಯರು, ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿದವರು ಎಂದು ನಾವು ಬಾಯಿಂದ ಹೇಳುತ್ತೇವೆ. ಆದರೆ, ಸಮಾನತೆ ಹಾಗೂ ಏಕತೆ ಎನ್ನುವುದನ್ನು ಸಂವಿಧಾನ ಅಂಗೀಕಾರಗೊಂಡು 75 ವರ್ಷಗಳಾದರೂ ಸಾಧಿಸಲು ಸಾಧ್ಯವಾಗಿಲ್ಲ. ದೇಶದಲ್ಲಿ ತಲೆ ತಲಾಂತರದಿಂದ ತುಳಿತಕ್ಕೊಳಗಾದವರಿಗೆ, ಅಸ್ಪೃಶ್ಯರಿಗೆ, ದಲಿತರಿಗೆ ಹಾಗೂ ಮೂಲ ಸೌಕರ್ಯ ವಂಚಿತರಾದವರನ್ನು ಸಮಾಜದ ಮುನ್ನೆಲೆಗೆ ತರಲು ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದಲ್ಲಿ ವಿಶೇಷ ಮೀಸಲಾತಿಯನ್ನು ನೀಡಿದ್ದರು.

ಸರ್ಕಾರದ ಬೊಕ್ಕಸಕ್ಕೆ ಆರ್ಥಿಕ ನಷ್ಟ ತಪ್ಪಿಸಲು ಮುಂದಾದ ಕೆಎಎಸ್‌ ಅಧಿಕಾರಿಯದ್ದೇ ತಪ್ಪು: ಸಿಎಂ ಸಿದ್ದರಾಮಯ್ಯ!

ದೇಶದಲ್ಲಿ ಸಂವಿಧಾನ ಜಾರಿಗೊಂಡು 50 ವರ್ಷಗಳಲ್ಲಿ ಸಮಾನತೆಯನ್ನು ಸಾಧಿಸಬೇಕು. ಎಲ್ಲ ಸಮುದಾಯಗಳಲ್ಲಿ ಸಮಾನತೆ ಸಾಧಿಸಿದ ನಂತರ ಮೀಸಲಾತಿ ರದ್ದುಗೊಳಿಸಲು ಅವಕಾಶ ನೀಡಲಾಗಿತ್ತು. ಆದರೆ, ಸಂವಿಧಾನ ಜಾರಿಗೊಂಡು 74 ವರ್ಷಗಳಾದರೂ ಸಮಾನತೆ ಸಾಧಿಸಲಾಗಿಲ್ಲ. ಕರ್ನಾಟಕ ಸೇರಿದಂತೆ ದೇಶದ ವಿವಿಧಡೆ ಅಸಮಾನತೆ, ಜಾತೀಯತೆ ತಾಂಡವಾಡುತ್ತಿದೆ. ಈ ಹಿನ್ನೆಲೆಯಲ್ಲಿ ಸಮಾಜದಲ್ಲಿ ಅಸ್ಪೃಶ್ಯತೆ ತೊಲಗಿಸಲು ಹಾಗೂ ಸಮಾನತೆಯನ್ನು ಎತ್ತಿ ಹಿಡಿಯಲು ಅನುಕೂಲ ಆಗುವಂತೆ ಸರ್ಕಾರದಿಂದ ಸಿನಿಮಾ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ.

ಯಾವುದು ಈ ಸಿನಿಮಾ? ಎಲ್ಲಿ ನೋಡಬೇಕು?
ಜ.26 ರಂದು 'ಸಮಾನತೆಯ ಕಡೆಗೆ' ಎಂಬ ಚಲನಚಿತ್ರವನ್ನು ಚಂದನ ವಾಹಿನಿಯಲ್ಲಿ  ಪ್ರಸಾರ ಮಾಡಲಾಗುತ್ತಿದೆ. ಅಸ್ಪೃಶ್ಯತೆ  ನಿವಾರಣೆ  ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ  ಪ್ರಾಯೋಜಿಸಲಾದ 'ಸಮಾನತೆಯ ಕಡೆಗೆ' ಎಂಬ ಕನ್ನಡ ಚಲನಚಿತ್ರವನ್ನು ಜನವರಿ  26 ರಂದು ಗಣರಾಜ್ಯೋತ್ಸವ ದಿನದಂದು ಚಂದನ ವಾಹಿನಿಯಲ್ಲಿ  ಮಧ್ಯಾಹ್ನ 2.30ರಿಂದ 4.30 ಅವಧಿಯಲ್ಲಿ ಪ್ರಸಾರ ಮಾಡಲಾಗುತ್ತಿದೆ. ಸಾರ್ವಜನಿಕರು ಈ ಸಿನಿಮಾ ವೀಕ್ಷಣೆ ಮಾಡಬೇಕು ಎಂದು  ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಅವಧಿ ಮುಕ್ತಾಯ: ಕಲಬುರಗಿ ಆಸ್ಪತ್ರೆ ಉದ್ಘಾಟಿಸೋ ಆಸೆಗೆ ತಣ್ಣೀರು?

ಸಂವಿಧಾನ ಜಾಗೃತಿ ಜಾಥ: ಸ್ಥಬ್ದಚಿತ್ರದ ಮೆರವಣಿಗೆ: ಭಾರತ ಸಂವಿಧಾನ ಅಂಗೀಕರಿಸಿಕೊಂಡು 75ನೇ ವರ್ಷದ ಆಚರಣೆಯ ಪ್ರಯುಕ್ತ  'ಸಂವಿಧಾನ ಜಾಗೃತಿ ಜಾಥ' ಕಾರ್ಯಕ್ರಮವನ್ನು  ನಗರದ ಅರಮನೆ ಮೈದಾನದಲ್ಲಿ ನಡೆಯಲಿದೆ. ಇದರ ಅಂಗವಾಗಿ ಜಿಲ್ಲೆಯಲ್ಲಿ ಸಂವಿಧಾನ ಪೀಠಿಕೆಯ ಸ್ಥಬ್ದಚಿತ್ರದ (Tableau) ಮೆರವಣಿಗೆಯು ಬೆಂಗಳೂರು ನಗರ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ, ನಗರ ಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳಿಗೆ ಜನವರಿ 26 2024 ರಿಂದ ಫೆಬ್ರವರಿ 23 2024 ರವರೆಗೆ ಸಂಚರಿಸಲಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios