Asianet Suvarna News Asianet Suvarna News

ಚಿತ್ರೋದ್ಯಮಕ್ಕೆ ಗುಡ್ ನ್ಯೂಸ್; ಜು.19 ರಿಂದ ರಾಜ್ಯಾದ್ಯಂತ ಚಿತ್ರಮಂದಿರಗಳ ಆರಂಭ!

- ಹೀಗೊಂದು ಮಾತು ಹೇಳಲಿಕ್ಕೆ ಅವಕಾಶ ಕೊಟ್ಟಿರುವುದು ರಾಜ್ಯ ಸರ್ಕಾರ. ಇಡೀ ರಾಜ್ಯದ ಬಹುತೇಕ ಕ್ಷೇತ್ರಗಳು ಅನ್‌ಲಾಕ್ ಆಗುತ್ತಿವೆ. ಈ ಹಿನ್ನೆಲೆಯಲ್ಲಿ ಜು.19ರಿಂದ ಚಿತ್ರಮಂದಿರಗಳು ಕೂಡ ಬಾಗಿಲು ತೆಗೆಯಬಹುದು ಎನ್ನುವುದು ಸರ್ಕಾರ ಕೊಟ್ಟಿರುವ ಗುಡ್ ನ್ಯೂಸ್. ಆ ಮೂಲಕ ಕೊರೋನಾ ಎರಡನೇ ಅಲೆ ಕಾರಣಕ್ಕೆ ಕಳೆದ ಮೂರು ತಿಂಗಳುಗಳಿಂದ ಬಾಗಿಲು ಮುಚ್ಚಿರುವ ಚಿತ್ರಮಂದಿರಗಳು, ಇಲ್ಲಿನ ಪರದೆಗಳು ಬೆಳಕು ಕಾಣುತ್ತಿವೆ.

Karnataka government allows film theatres to operate from July 19th vcs
Author
Bangalore, First Published Jul 19, 2021, 4:48 PM IST

ಥಿಯೇಟರ್‌ಗಳು ಬಾಗಿಲು ತೆಗೆಯುವ ಸುದ್ದಿ ಕೇಳಿ ಬರುತ್ತಿರುವಂತೆ ಚಿತೊ್ರೀದ್ಯಮದಲ್ಲಿ ಮತ್ತಷ್ಟು ಚಟುವಟಿಕೆಗಳು ಚುರುಕುಗೊಂಡಿವೆ.

ಸದ್ಯಕ್ಕೆ ಶೇ.50ರಷ್ಟು ಸೀಟು ಭರ್ತಿಗೆ ಮಾತ್ರ ಅವಕಾಶ ಕೊಟ್ಟು ಥಿಯೇಟರ್‌ಗಳು ಬಾಗಿಲು ತೆರೆಯಲು ಅವಕಾಶ ನೀಡಲಾಗಿದೆ. ಶೇ.100ರಷ್ಟು ಸೀಟು ಭರ್ತಿಗೆ ಅವಕಾಶ ಕೇಳುತ್ತಿದ್ದವರಿಗೆ ಕೊಂಚ ನೆಮ್ಮದಿಯಾದರೂ ಸಿಕ್ಕಿದೆ ಎನ್ನುವಂತಾಗಿದೆ. ಹಾಗಾದರೆ ಈ ಗುಡ್ ನ್ಯೂಸ್‌ನಿಂದ ಈ ವಾರದಿಂದಲೇ ಸಿನಿಮಾ ಪ್ರದರ್ಶನ ಆಗಲಿದೆಯೇ? ಯಾರೆಲ್ಲ ಏನೆಲ್ಲ ಹೇಳುತ್ತಿದ್ದಾರೆ?

ಪ್ರದರ್ಶಕರು ಹೇಳುವುದೇನು?

- ಕಳೆದ ಮೂರು ತಿಂಗಳಿಂದ ಬಾಗಿಲು ಮುಚ್ಚಿದ್ದೇವೆ. ಸಿನಿಮಾ ಪ್ರದರ್ಶನಕ್ಕೆ ಬೇಕಾದ ತಯಾರಿ ಮಾಡಿಕೊಳ್ಳಬೇಕಿದೆ.

- ಕನಿಷ್ಠ 15 ರಿಂದ 20 ದಿನ ಆದರೂ ಬೇಕಾಗುತ್ತದೆ. ಏನೇ ಅವಸರ ಮಾಡಿದರೂ ಎರಡು ವಾರಗಳಂತೂ ಬೇಕು.

- ಶೇ.50ರಷ್ಟು ಸೀಟು ಭರ್ತಿ ಕಾರಣಕ್ಕೆ ದೊಡ್ಡ ಸಿನಿಮಾಗಳು ಬರಲ್ಲ. ಈ ಹೊತ್ತಿನಲ್ಲಿ ಬಾಗಿಲು ತೆರೆದರೆ ಚಿತ್ರಮಂದಿರಗಳ ನಿರ್ವಹಣೆ ಕಷ್ಟ ಆಗಲಿದೆ.

- ನಿರ್ಮಾಪಕರು ತಮ್ಮ ಚಿತ್ರಗಳ ಬಿಡುಗಡೆ ದಿನಾಂಕ ಘೋಷಣೆ ಮಾಡಲಿ.

ಸಿನಿಮಾ, ಕಾಲೇಜು ಶುರು: ನೈಟ್‌ ಕರ್ಫ್ಯೂ ಅವಧಿ ಕಡಿತ!

ನಿರ್ಮಾಪಕರ ಅಭಿಪ್ರಾಯಗಳೇನು?

- ಶೇ.50ರಷ್ಟು ಸೀಟು ಭರ್ತಿಗೆ ಮಾತ್ರ ಅವಕಾಶ ಇದ್ದಾಗ, ಬಿಗ್ ಬಜೆಟ್ ಚಿತ್ರಗಳನ್ನು ಬಿಡುಗಡೆ ಮಾಡಿದರೆ ನಷ್ಟ ಆಗಲಿದೆ.

- ಚಿತ್ರೀಕರಣ ಮುಗಿಸಿರುವ ಎಲ್ಲ ನಿರ್ಮಾಪಕರು ಸೇರಿ ಮಾತುಕತೆ ಮಾಡಿಕೊಂಡು ಯಾರು ಬರಲು ಸಿದ್ಧರಿದ್ದಾರೆ ಎಂಬುದನ್ನು ನೋಡಬೇಕು.

- ಶೇ.100ರಷ್ಟು ಸೀಟು ಭರ್ತಿಗೆ ಅವಕಾಶ ಕೊಟ್ಟರೆ ಮಾತ್ರ ಸ್ಟಾರ್ ನಟರ ಚಿತ್ರಗಳು ಬಿಡುಗಡೆ ಮಾಡಲಿದ್ದೇವೆ.

- ಈಗ ಥಿಯೇಟರ್‌ಗಳು ಬಾಗಿಲು ತೆಗೆಸಿ, ಮತ್ತೆ ಕೊರೋನಾ ಜಾಸ್ತಿ ಆಗಿ ಮುಚ್ಚಿಸಿದರೆ ಹೇಗೆ?

ಸರ್ಕಾರದ ಈ ಅದೇಶವನ್ನು ಸ್ವಾಗತಿಸುತ್ತೇವೆ. ಆದರೆ, ಅನುಮತಿ ಸಿಕ್ಕ ಕೂಡಲೇ ಥಿಯೇಟರ್ ಬಾಗಿಲು ತೆಗೆದು ಸಿನಿಮಾ ಪ್ರದರ್ಶನ ಮಾಡಲು ಸಾಧ್ಯವಿಲ್ಲ ಎಂಬುದು ಎಲ್ಲರಿಗೂ ಗೊತ್ತು. ಸ್ವಚ್ಛತೆ, ತಾಂತ್ರಿಕ ದೋಷಗಳ ಪರಿಶೀಲನೆ ಇತ್ಯಾದಿಗಳಿಗೆ ಎರಡು ವಾರ ಸಮಯ ಬೇಕು. ಇದರ ನಡುವೆ ನಿರ್ಮಾಪಕರು ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡಲು ಸಿದ್ಧರಿದ್ದಾರೆಯೇ ಎಂಬುದು ಗೊತ್ತಾಗಬೇಕು. ಇದು ಕನ್ನಡ ಚಿತ್ರಗಳನ್ನೇ ನಂಬಿರುವ ಸಿಂಗಲ್ ಸ್ಕ್ರೀನ್‌ಗಳ ಪರಿಸ್ಥಿತಿ. ಆದರೆ, ಮಲ್ಟಿಪ್ಲೆಕ್‌ಸ್ಗಳು ಈ ವಾರದಿಂದಲೇ ಆರಂಭವಾಗಬಹುದು. ಅವರ ಕೆಲಸದ ರೀತಿ ಬೇರೆ. ಅದೇ ರೀತಿ ಪರಭಾಷೆಯ ಚಿತ್ರಗಳನ್ನು ಪ್ರದರ್ಶನ ಮಾಡುವ ಚಿತ್ರಮಂದಿರಗಳು ಕೂಡ ಇದೇ ಶುಕ್ರವಾರದಿಂದ ಪ್ರದರ್ಶನಕ್ಕೆ ಸಜ್ಜಾಗಬಹುದು. ಯಾಕೆಂದರೆ ಕನ್ನಡ ಸಿನಿಮಾಗಳು ಎಷ್ಟು, ಯಾವಾಗ ಬಿಡುಗಡೆ ಆಗುತ್ತವೆ ಎನ್ನುವ ಲೆಕ್ಕಾಚಾರ ಅವರಿಗೆ ಬೇಕಿಲ್ಲ. ಚಿತ್ರಮಂದಿರಗಳಿಗೆ ಸಿನಿಮಾಗಳು ಯಾವಾಗ ಬರುತ್ತವೆ ಎಂಬುದು ನಿರ್ಮಾಪಕರ ಅಭಿಪ್ರಾಯದ ಮೇಲೆ ನಿಂತಿದೆ. - ಕೆ ವಿ ಚಂದ್ರಶೇಖರ್, ಕರ್ನಾಟಕ ಚಲನಚಿತ್ರ ಪ್ರದರ್ಶಕರ ಸಂಘದ ಅಧ್ಯಕ್ಷ

ದೊಡ್ಡ ಚಿತ್ರಗಳು ಬಿಡುಗಡೆ ಆಗದಿದ್ದರೆ?

- ಮರು ಬಿಡುಗಡೆಯ ಕನಸು ಕಾಣುತ್ತಿರುವ ಚಿತ್ರಗಳು ತಕ್ಷಣಕ್ಕೆ ತೆರೆ ಮೇಲೆ ಬರುತ್ತವೆ.

- ಹೊಸಬರ ಹಾಗೂ ಸಣ್ಣ ಬಜೆಟ್ ಚಿತ್ರಗಳ ಬಿಡುಗಡೆ ಅವಕಾಶ ಸಿಗಲಿದೆ.

- ಎರಡು ಮೂರು ವಾರಗಳ ಕಾಲ ಹೊಸಬರ ಚಿತ್ರಗಳೇ ಥಿಯೇಟರ್‌ಗಳನ್ನು ಸಾಕಲಿವೆ.

- ಹಾಗೆ ನೋಡಿದರೆ ಕೆಲವು ಚಿತ್ರಗಳು ಈ ವಾರದಿಂದಲೇ ಬಿಡುಗಡೆ ಆಗಬಹುದು.

- ಪರಭಾಷೆಯ ಚಿತ್ರಗಳು ಮಲ್ಟಿಪ್ಲೆಕ್‌ಸ್ಗಳಲ್ಲಿ ಹಾಗೂ ಗಡಿ ಪ್ರದೇಶಗಳಲ್ಲಿರುವ ಸಿಂಗಲ್ ಸ್ಕ್ರೀನ್‌ಗಳಲ್ಲಿ ತೆರೆ ಕಾಣಲಿವೆ.

ಜು.19ರಿಂದಲೇ ಚಿತ್ರಮಂದಿರಗಳು ಬಾಗಿಲು ತೆರೆಯಬಹುದು ಎಂದು ಸರ್ಕಾರ ಹೇಳಿರುವ ಹಿನ್ನೆಲೆಯಲ್ಲಿ ಚಿತ್ರರಂಗದ ಕೇಳಿ ಬರುತ್ತಿರುವ ಅಭಿಪ್ರಾಯಗಳು ಹಾಗೂ ವಾದಗಳು ಇವು.

Follow Us:
Download App:
  • android
  • ios