Asianet Suvarna News Asianet Suvarna News

ಕನ್ನಡ ಚಿತ್ರರಂಗದ ಒಳಿತಿಗಾಗಿ ಪೂಜೆ, ನಾಗರಾಧನೆ ವೇಳೆ ಮೈಮೇಲೆ ದೇವರು ಬಂದಂತೆ ಆಡಿದ ನಟಿ ಜ್ಯೋತಿ!

ಕನ್ನಡ ಚಿತ್ರರಂಗದ ಏಳಿಗೆಗಾಗಿ ಮಹಾಯಾಗ ನಡೆಸಲಾಗುತ್ತಿದ್ದು, ನಾಗರಾಧನೆ ಪೂಜೆ ವೇಳೆ ಹಿರಿಯ ನಟಿ ಜ್ಯೋತಿ ಭಾವೋದ್ವೇಗಕ್ಕೆ ಒಳಗಾದರು. ಮೈಮೇಲೆ ದೇವರ ಆವಾಹನೆ ಬಂದಂತೆ ಆಡಿದ ಘಟನೆ ನಡೆದಿದೆ.

Karnataka Film Artists Association special pooja and homa  for  industry  growth gow
Author
First Published Aug 14, 2024, 1:55 PM IST | Last Updated Aug 14, 2024, 1:55 PM IST

ಬೆಂಗಳೂರು (ಆ.14): ಕನ್ನಡ ಚಿತ್ರರಂಗದ ಏಳಿಗೆಗಾಗಿ ಮಹಾಯಾಗ ನಡೆಸಲಾಗುತ್ತಿದ್ದು, ಚಾಮರಾಜಪೇಟೆ ಕಲಾವಿದರ ಸಂಘದಲ್ಲಿ ವಿಶೇಷ ಪೂಜೆ ನಡೆದಿದೆ. ಬೆಳಿಗ್ಗೆ 8.00ರಿಂದ  ಗಣಯಾಗ, ಆಶ್ಲೇಷ ಬಲಿ, ಸರ್ಪ ಶಾಂತಿ, ಮೃತ್ಯುಂಜಯ ಹೋಮ ಜರುಗಿದೆ. ಈ ವಿಶೇಷ ಪೂಜೆಯನ್ನು ಉಡುಪಿಯ ಪ್ರಕಾಶ್‌ ಅಮ್ಮಣ್ಣಯ್ಯ 8 ಜನರ ಪುರೋಹಿತರ ತಂಡ ನೆರವೇರಿಸಿದೆ. ಕನ್ನಡ ಚಿತ್ರರಂಗದ ಕಲಾವಿದರು, ತಂತ್ರಜ್ಞರು,ಸೇರಿದಂತೆ ಒಟ್ಟು 500 ಜನ ಇದರಲ್ಲಿ ಪಾಲ್ಗೊಂಡರು.

ಇನ್ನು ನಾಗರಾಧನೆ ಪೂಜೆ ವೇಳೆ ಹಿರಿಯ ನಟಿ ಜ್ಯೋತಿ ಭಾವೋದ್ವೇಗಕ್ಕೆ ಒಳಗಾದರು. ಮೈಮೇಲೆ ದೇವರ ಆವಾಹನೆ ಬಂದಂತೆ ಆಡಿದರು. ಕೂಡಲೇ ಪಕ್ಕದಲ್ಲಿದ್ದ ಕಲಾವಿದರು ಅವರನ್ನು ಹಿಡಿದುಕೊಂಡು ಸಮಾಧಾನಪಡಿಸಿದರು. ಬಳಿಕ ನೀರು ಕುಡಿದು ಜ್ಯೋತಿ  ಸಮಾಧಾನಗೊಂಡರು.

ತೆಲುಗು ಬಿಗ್‌ಬಾಸ್‌ ಸೆಪ್ಟೆಂಬರ್‌ ನಲ್ಲಿ ಆರಂಭ, ಪ್ರೋಮೋ ರಿಲೀಸ್‌, ಸಂಭಾವ್ಯರ ಪಟ್ಟಿಯಲ್ಲಿ ಇಬ್ಬರು ಕನ್ನಡತಿಯರು!

ಹಿರಿಯ ನಟಿ ಸರೋಜದೇವಿ ಸಲಹೆಯಂತೆ ಪೂಜೆ ನಡೆಯುತ್ತಿದೆ. ಸಾಲು ಸಾಲು ಕಲಾವಿದರು ಸಾವಿಗಿಡಾದ ಹಿನ್ನೆಲೆ, ವಿಶೇಷ ಪೂಜೆ ಮಾಡಿಸುವಂತೆ ಕಲಾವಿದರ ಸಂಘಕ್ಕೆ  ಸಲಹೆ ‌ನೀಡಿದ್ದ ಸರೋಜ ದೇವಿ. ಹೋಮ ಹವನ ಪೂಜೆಗೆ ದೊಡ್ಡಣ್ಣ ದಂಪತಿ ಕುಳಿತಿದ್ದರು. ನಾಳೆ 500 ಕ್ಕೂ ಹೆಚ್ಚು ಜನರಿಗೆ ವಿಶೇಷ ಭೋಜನದ ವ್ಯವಸ್ಥೆ ಮಾಡಲಾಗಿದೆ. ಪೂಜೆಗೆ ಬರುವ ಅತಿಥಿಗಳಿಗಾಗಿ ಹೋಳಿಗೆ, ಬಿಳಿ ಹೋಳಿಗೆ ಹಿತಕಿದ ಬೇಳೆ ಸಾರು, ಪೂರಿ ಹೀರೆಕಾಯಿ ಬಜ್ಜಿ, ಹೆಸರು ಬೇಳೆ ಕೋಸಂಬರಿ, ತುಪ್ಪದ ಮೈಸೂರು ಪಾಕ್, ಪುಳಿಯೊಗರೆ, ಅನ್ನ ,ಸಾಂಬರ್, ಸಬ್ಬಕ್ಕಿ ಪಾಯಸ, ಸ್ಪ್ರೌಟ್ಸ್ ಕೋಸಂಬರಿ ಮಾಡಲಾಗುವುದು.

ಹಿರಿಯ ನಟ ಜಗ್ಗೇಶ್ ಪೂಜೆಯಲ್ಲಿ ಭಾಗಿಯಾದರು. ಈ‌ ಪೂಜೆ ದರ್ಶನ್ ಗಾಗಿ‌ ಮಾಡಿದ್ದು ಅಲ್ಲ. ದರ್ಶನ್ ಗಾಗಿ ಪೂಜೆ ಮಾಡಿದ್ರೆ ನಾನು ಪೂಜೆ ಗೆ ಬರ್ತಿರಲಿಲ್ಲ. ಇದು ಚಿತ್ರರಂಗದ ಒಳತಿಗಾಗಿ ಪೂಜೆ‌ ಮಾಡಿರೋದು ಎಂದು ಸ್ಪಷ್ಟನೆ ನೀಡಿದರು.

ಭಾರತದ ಬಿಗ್‌ಬಾಸ್ ಶೋಗಳನ್ನು ನುಂಗಿ ಹಾಕಿದ್ದ ಕನ್ನಡದ 10ರ ಸೀಸನ್‌ ನ ಬಳೆ! ಬಿಬಿಕೆ 11ರಲ್ಲಿ ಏನಾಗಲಿದೆಯೋ?

 ಹಿರಿಯ ನಟರಾದ   ದೊಡ್ಡಣ್ಣ, ರಾಕ್ ಲೈನ್ ವೆಂಕಟೇಶ್, ಜಗ್ಗೇಶ್,     ಹಿರಿಯ ನಟಿಯರಾದ ಸುಮಲತ,  ಜಯಮಾಲ ರೇಖಾದಾಸ್ , ಅಂಜಲಿ, ಗಿರಿಜಾ ಲೋಕೇಶ್,  ಪದ್ಮಾ ವಾಸಂತಿ, ಪದ್ಮಜಾರಾವ್, ಮಾಲತಿ ಶ್ರೀ ಮೈಸೂರು, ನಟಿಯರಾದ ರಾಗಿಣಿ ಸೇರಿದಂತೆ 500 ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದರು. 

ನಟ ನೆನಪಿರಲಿ ಪ್ರೇಮ್ ಹೇಳಿಕೆ, ಚಿತ್ರರಂಗಕ್ಕೆ ಒಳ್ಳೆದಾಗಲಿ ಅನ್ನೋ ಕಾರಣಕ್ಕೆ ಈ ಕಾರ್ಯವನ್ನ ಮಾಡಲಾಗುತ್ತಿದೆ. ಸಂಕಷ್ಟ ಯಾರಿಗೆ ಬಂದರು ದೇವರನ್ನ ನೆನೆಯಬೇಕು. ಅದರಂತೆ ಇಂದು ದೇವರನ್ನ ನೆನೆಯುವ ಕೆಲಸ ಆಗ್ತಿದೆ. ಇದು ಯಾರದೋ ಸ್ವಾರ್ಥಕ್ಕೋ, ಅಥವಾ ಯಾರದೋ ಮನೆಯ ಕೆಲಸಕ್ಕಾಗಿ ಮಾಡುತ್ತಿರೋ ಕಾರ್ಯ ಅಲ್ಲ. ಇಡೀ ಕನ್ನಡ ಚಿತ್ರರಂಗಕ್ಕೆ ಒಳ್ಳೆದಾಗಲಿ ಅನ್ನೋ ಕಾರಣಕ್ಕೆ ಮಾಡ್ತಿರೋ ಪೂಜೆ. ಎಲ್ಲರೂ ಒಟ್ಟಾಗಿ ಬರಬೇಕು. ಈ‌ಮೂಲಕ ಒಗ್ಗಟ್ಟು ತೋರಿಸಬೇಕು. ಇನ್ನು ಮುಂದೆ ಎಲ್ಲವು ಒಳ್ಳೆಯದಾಗಲಿ. ದರ್ಶನ್ ಕೂಡ ಚಿತ್ರ ರಂಗಕ್ಕೆ ಸಾಕಷ್ಟು ಕೊಡುಗೆ ಕೊಟ್ಟಿದ್ದಾರೆ. ಈ ಪೂಜೆಯಿಂದ ಅವರಿಗೂ ಒಳ್ಳೇದಾಗಲಿ. ದರ್ಶನರನ್ನ ಕಳೆದ ಬಾರಿ ಹೋದಾಗ ಭೇಟಿ ಸಾಧ್ಯ ಆಗಲಿಲ್ಲ. ಮತ್ತೊಮ್ಮೆ ಸದ್ಯದಲ್ಲೇ ಭೇಟಿ ಮಾಡುತ್ತೇನೆ ಎಂದರು.

ನಟಿ ಗಿರಿಜಾ ಲೋಕೇಶ್ ಹೇಳಿಕೆ, ಚಿತ್ರರಂಗ ಒಳಿತಿಗಾಗಿ ಈ ಪೂಜೆ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲಾ ಒಳ್ಳೆಯದಾಗುತ್ತೆ. ಕನ್ನಡ ಚಿತ್ರರಂಗ ಉನ್ನತ ಮಟ್ಟಕ್ಕೆ ಹೋಗುತ್ತೆ. ಸ್ವಲ್ಪ ದಿನ ಚಿತ್ರರಂಗಕ್ಕೆ ಮೋಡ ಕವಿದಿತ್ತು ಅಷ್ಟೇ. ಈಗ ಎಲ್ಲರಿಗೂ ಒಳ್ಳೆಯದು ಆಗಲಿ ಅಂತ ಈ ಪೂಜೆ ಮಾಡುತ್ತಿದ್ದೇವೆ. ಹೀಗಾಗಿ ಈ ಹೋಮಕ್ಕೆ ಎಲ್ಲರೂ ಬಂದಿದ್ದೇವೆ. ಕಾರ್ಮಿಕರಿಗೆ ಸಂಬಳವನ್ನು ಎಲ್ಲರೂ ಕೊಡಬೇಕು. ಅವರು ದಿನಗೂಲಿಗೆ ಬಂದಿರ್ತಾರೆ. ಅವರಿಗೆ ಯಾರು ಮೋಸ ಮಾಡಬಾರದು ಸಂಬಳ ಕೊಡಬೇಕು. ದರ್ಶನ್ ಗಾಗಿ ಪೂಜೆ ಮಾಡಲಾಗುತ್ತಿದೆ ಅನ್ನೋ  ವಿಚಾರದ ಬಗ್ಗೆ ಪ್ರಶ್ನಿಸಿದ್ದಕ್ಕೆ, ಒಬ್ಬ ವ್ಯಕ್ತಿ ಅಂತ ಅಲ್ಲ. ಕಲಾವಿದರೆಲ್ಲರಿಗೂ ಒಳ್ಳೆಯದಾಗಲಿ ಅಂತ ಈ ಪೂಜೆ ಮಾಡಲಾಗುತ್ತಿದೆ. ದರ್ಶನ್ ಕೂಡ ನಮ್ಮ ಕಲಾವಿದರಲ್ಲಿ ಒಬ್ಬರು. ಅವರಿಗೂ ಕೂಡ ಒಳ್ಳೆಯದಾಗಿ ಕಷ್ಟಗಳು ಕಡಿಮೆಯಾಗಲಿ ಎಂದರು.

Latest Videos
Follow Us:
Download App:
  • android
  • ios