Asianet Suvarna News Asianet Suvarna News

Karnataka Election Results 2023: ಜನರಲ್ಲಿ ಕಿಚ್ಚೆಬ್ಬಿಸದ ಸುದೀಪ್ ಪ್ರಚಾರ; ಬಿಜೆಪಿಗೆ ಸೋಲಿನ ಪ್ರಹಾರ

Karnataka Election Results 2023: ಕಿಚ್ಚ ಸುದೀಪ್ ಪ್ರಚಾರ ಮಾಡಿದವರ ಪೈಕಿ ಗೆದ್ದವರು ಎಷ್ಟು, ಸೋತವರು ಯಾರು? ಇಲ್ಲಿದೆ ಸಂಪೂರ್ಣ ವಿವರ.

Karnataka Election Results 2023: Who are the winners and losers among those campaigned by Sudeep? sgk
Author
First Published May 13, 2023, 6:03 PM IST

ಕರ್ನಾಟಕ ವಿಧಾನಸಭಾ ಚುನಾವಣೆಯ ಮತ ಎಣಿಕೆ ಬಹುತೇಕ ಮುಕ್ತಾಯ ಹಂತಕ್ಕೆ ಬಂದಿದ್ದು ಕಾಂಗ್ರೆಸ್ ಬಯಭೇರಿ ಬಾರಿಸಿದೆ. 135ಕ್ಕೂ ಹೆಚ್ಚು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದು ಬೀಗಿದ್ದು ಸರ್ಕಾರ ರಚನೆಗೆ ಮುಂದಾಗಿದೆ. ಈ ಬಾರಿಯ ವಿಧಾನಸಭಾ ಫಲಿತಾಂಶ ಘಟಾನುಘಟಿ ನಾಯಕರು ಮಕಾಡೆ ಮಲಗಿಸಿದೆ. ಈ ಫಲಿತಾಂಶ ಬಿಜೆಪಿಗೆ ಭಾರಿ ಮುಖಭಂಗವಾಗಿದ್ದು ಯಾವ ತಂತ್ರವೂ ವರ್ಕೌಟ್ ಆಗಿಲ್ಲ. ಅದರಲ್ಲೂ ಸಿನಿಮಾ ಕಲಾವಿದರ ಪ್ರಚಾರ ಕೂಡ ಮೋಡಿ ಮಾಡಿಲ್ಲ. ಈ ಬಾರಿಯ ಚುನಾವಣಾ ಪ್ರಚಾರಕ್ಕೆ ಸ್ಯಾಂಡಲ್‌ವುಡ್‌ನ ಅನೇಕ ಕಲಾವಿದರು ಇಳಿದಿದ್ದರು. ಕನ್ನಡ ಮಾತ್ರವಲ್ಲದೆ ಪರಭಾಷೆಯ ಕಲಾವಿದರು ಕೂಡ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡಿದ್ದರು.  

ಸ್ಟಾರ್ ಕಲಾವಿದರು, ಪರಭಾಷಾ ಕಲಾವಿದರ ಪ್ರಚಾರ ಕೂಡ ನಿರೀಕ್ಷೆಯ ಮಟ್ಟದಲ್ಲಿ ವರ್ಕೌಟ್ ಆಗಿಲ್ಲ. ಸ್ಯಾಂಡಲ್‌ವುಡ್ ಸ್ಟಾರ್ ಕಿಚ್ಚ ಸುದೀಪ್ ಈ ಬಾರಿ ಬಿಜೆಪಿ ಪರ ಪ್ರಚಾರಕ್ಕೆ ಇಳಿದಿದ್ದರು. ಸಿಎಂ ಬೊಮ್ಮಾಯಿ ಅವರಿಗೆ ತನ್ನ ಬೆಂಬಲ, ಅವರು ಯಾರ ಪರ ಪ್ರಚಾರ ಮಾಡಲು ಹೇಳುತ್ತಾರೋ ಅವರ ಪರ ಪ್ರಚಾರ ಮಾಡುವುದಾಗಿ ಹೇಳಿದ್ದ ಕಿಚ್ಚ ಬಳಿಕ ಅನೇಕ ಕ್ಷೇತ್ರಗಳಿಗೆ ತೆರಳಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡಿದ್ದರು. ಕಿಚ್ಚ ಹೋದಲೆಲ್ಲ ಜನಸಾಗರವೇ ಇರುತ್ತಿತ್ತು. 

Karnataka Election Results 2023: ಶಿವರಾಜ್ ಕುಮಾರ್ ಪ್ರಚಾರ ಮಾಡಿದವರಲ್ಲಿ ಗೆದ್ದವರು ಯಾರು, ಸೋತವರ್ಯಾರು?

ಸುದೀಪ್ ಪ್ರಚಾರ ಮಾಡಿದ ಕ್ಷೇತ್ರಗಳ ಪೈಕಿ ಗೆದ್ದವರಲ್ಲಿ ಬಸವರಾಜ ಬೊಮ್ಮಾಯಿ, ಆರ್ ಆರ್ ನಗರ ಕ್ಷೇತ್ರದ ಅಭ್ಯರ್ಥಿ ಮುನಿರತ್ನ ಮತ್ತು ಶಿಕಾರಿಪುರದಲ್ಲಿ ವಿಜಯೇಂದ್ರ, ಲಿಂಗಸುಗೂರಿನಲ್ಲಿ ಮಾನಪ್ಪ ವಜ್ಜಲ್‌ ಗೆದ್ದು ಬೀಗಿದ್ದಾರೆ. ಇನ್ನ ಬಹುತೇಕ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಸೋಲುಕಂಡಿದ್ದಾರೆ. 

Karnataka Election Results 2023: ಕರ್ನಾಟಕ ರಾಜಕೀಯ ಹೊಲಸು ಮಾಡಿದ್ದ ಹಲವರು ಸೋತಿದ್ದಾರೆ - ಕವಿರಾಜ್

ಸೋತ ಅಭ್ಯರ್ಥಿಗಳಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುಧಾಕರ್ ಕೂಡ ಸೇರಿದ್ದಾರೆ. ಸುಧಾಕರ್ ಪರ ಕಿಚ್ಚ ಮಾತ್ರವಲ್ಲದೇ ಪರಭಾಷೆಯ ಕಲಾವಿದರು ಸಹ ಪ್ರಚಾರ ಮಾಡಿದ್ದರು. ಸ್ಟಾರ್‌ಗಳನ್ನು ನೋಡಲು ಅಭಿಮಾನಿಗಳು ಮುಗಿಬ್ಬಿದ್ದರು. ಆದರೆ ಆ ಸಂಖ್ಯೆ ಮತವಾಗಿ ಬದಲಾಗಿಲ್ಲ ಎನ್ನುವುದು ಇಂದಿನ ಫಲಿತಾಂಶ ನೋಡಿದ್ರೆ ಗೊತ್ತಾಗುತ್ತಿದೆ. ಇನ್ನು ದೊಡ್ಡಬಳ್ಳಾಪುರ ಬಿಜೆಪಿ ಅಭ್ಯರ್ಥಿ ಧೀರಜ್ ಮುನಿರಾಜ್, ವರುಣದಲ್ಲಿ ವಿ. ಸೋಮಣ್ಣ, ಹಾಸನದಲ್ಲಿ ಪ್ರೀತಮ್ ಬುಬ್ಬಿ, ಮಸ್ಕಿಯಲ್ಲಿ ಪ್ರಥಾಪ್ ಗೌಡ, ಮಾನ್ವಿಯಲ್ಲಿ ಬಿ ವಿ ನಾಯಕ್, ದೇವದುರ್ಗದಲ್ಲಿ ಶಿವನಗೌಡ ಸೋತಿದ್ದಾರೆ. 

Follow Us:
Download App:
  • android
  • ios