ಸೋಮವಾರ ರಾಬರ್ಟ್ ಚಿತ್ರ ವೀಕ್ಷಿಸಲಿರುವ ಸಿಎಂ ಬಿಎಸ್ ವೈ/ ದರ್ಶನ್ ಅಭಿನಯದ ರಾಬರ್ಟ್ ಚಿತ್ರ ನಾಳೆ ತೆರೆಗೆ ಬರ್ತಿದೆ/ ಸೋಮವಾರ ಬಿಡುವಿನ ವೇಳೆಯಲ್ಲಿ ಸಿಎಂ ರಾಬರ್ಟ್ ಚಿತ್ರ ವೀಕ್ಷಿಸುವ ಸಾಧ್ಯತೆ ಇದೆ/ ಮೊನ್ನೆ ವಿಕಾಸೌಧದ ಕಾರ್ಯಕ್ರಮದಲ್ಲಿ ದರ್ಶನ್  ನಟಿಸಿರುವ ರಾಬರ್ಟ್ ಚಿತ್ರ ವೀಕ್ಷಿಸುವುದಾಗಿ ಹೇಳಿದ್ದ ಸಿಎಂ‌..

ಬೆಂಗಳೂರು(ಮಾ. 10) ನಾನು ರಾಬರ್ಟ್ ಚಿತ್ರ ನೋಡುತ್ತೇನೆ ನೀವು ನೋಡಿ ಎಂದು ಹೇಳಿದ್ದ ಸಿಎಂ ಬಿಎಸ್ ಯಡಿಯೂರಪ್ಪ ಸೋಮವಾರ ಮಾರ್ಚ್ 15 ರಂದು ರಾಬರ್ಟ್ ಚಿತ್ರ ವೀಕ್ಷಿಣೆ ಮಾಡಲಿದ್ದಾರೆ.

ದರ್ಶನ್ ಅಭಿನಯದ ರಾಬರ್ಟ್ ಚಿತ್ರ ಗುರುವಾರ ತೆರೆ ಕಾಣುತ್ತಿದೆ. ಸೋಮವಾರ ಬಿಡುವಿನ ವೇಳೆಯಲ್ಲಿ ಸಿಎಂ ರಾಬರ್ಟ್ ಚಿತ್ರ ವೀಕ್ಷಿಸುವ ಸಾಧ್ಯತೆ ಇದೆ. ವಿಕಾಸೌಧದ ಕಾರ್ಯಕ್ರಮದಲ್ಲಿ ದರ್ಶನ್ ಭಾಗಿಯಾಗಿದ್ದರು. ಈ ವೇಳೆ ನಾನು ರಾಬರ್ಟ್ ಚಿತ್ರ ನೋಡಲಿದ್ದೇನೆ ಎಂದು ಯಡಿಯೂರಪ್ಪ ಹೇಳಿದ್ದರು.

ಈ ಕಾರಣಕ್ಕಾದರೂ ರಾಬರ್ಟ್ ಸಿನಿಮಾ ನೋಡಲೇಬೇಕು

ಕೊರೊನಾ ನಂತರ ಹಲವು ತಿಂಗಳ ಬಳಿಕ ಪ್ರೇಕ್ಷಕರ ಮುಂದೆ ದರ್ಶನ್ ತೆರೆ ಮೇಲೆ ಬರಲಿದ್ದು, ಶಿವರಾತ್ರಿ ಹಬ್ಬದ ದಿನದಂದು ಅಭಿಮಾನಿಗಳಿಗೆ ರಸದೌತಣ ನೀಡಲಿದ್ದಾರೆ. ರಾಬರ್ಟ್ ಸಿನಿಮಾಕ್ಕೆ ನಿರ್ದೇಶಕ ತರುಣ್ ಸುಧೀರ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ದರ್ಶನ್‍ಗೆ ಜೋಡಿಯಾಗಿ ಆಶಾ ಭಟ್ ಅಭಿನಯಿಸಿದ್ದಾರೆ. ಚಿತ್ರಕ್ಕೆ ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ ಬಂಡವಾಳ ಹೂಡಿದ್ದು, ಅರ್ಜುನ್ ಜನ್ಯ ಸಂಗೀತ ಹೈಲೈಟ್ಸ್.

ರಿಷಬ್ ಶೆಟ್ಟಿ ಅಭಿನಯದ ಹೀರೋ ಪೈರಸಿಯಾಗಿದ್ದು ಸುದ್ದಿಯಾಗಿತ್ತು. ಯಾರಾದರೂ ಪೈರಸಿ ಮಾಡಿದರೆ ಪರಿಣಾಮ ಘೋರವಾಗಿರುತ್ತದೆ ಎಂದು ನಿರ್ಮಾಪಕ ಉಮಾಪತಿ ಖಡಕ್ ಎಚ್ಚರಿಕೆ ನೀಡಿದ್ದಾರೆ.