Asianet Suvarna News Asianet Suvarna News

ಇಂದಿನಿಂದ ಚಿತ್ರಮಂದಿರಗಳಲ್ಲಿ ಶೇ.100 ಆಸನ ಭರ್ತಿ!

ಕಳೆದ ಎರಡು ವರ್ಷಗಳಿಂದ ಬಹುತೇಕ ಸ್ತಬ್ದಗೊಂಡಿದ್ದ ಚಿತ್ರಮಂದಿರಗಳು ಅಕ್ಟೋಬರ್ 1ರಿಂದ ಶೇ.100ರಷ್ಟು ಸೀಟು ಭರ್ತಿ ಅನುಮತಿ ಜೊತೆ ಪ್ರೇಕ್ಷಕರನ್ನು ಎದುರಾಗುತ್ತಿವೆ. ಚಿತ್ರಮಂದಿರಗಳು ಮೊದಲಿನ ಸಂಭ್ರಮಕ್ಕೆ ಕಾಯುತ್ತಿದ್ದು, ಸ್ಟಾರ್ ಸಿನಿಮಾಗಳ ಕ್ಷಣಗಣನೆ ಶುರುವಾಗಿದೆ.

Karnataka allows film theatres to operate at 100% capacity from October 1st vcs
Author
Bangalore, First Published Oct 1, 2021, 5:48 PM IST
  • Facebook
  • Twitter
  • Whatsapp

ಇಂದಿನಿಂದ ರಾಜ್ಯದ ಎಲ್ಲಾ ಚಿತ್ರಮಂದಿರಗಳಲ್ಲೂ ಶೇ.100ರಷ್ಟು ಸೀಟು ಭರ್ತಿಗೆ ಪ್ರೇಕ್ಷಕರು ಸಾಕ್ಷಿ ಆಗುತ್ತಿದ್ದಾರೆ. ಶೇ.100ರಷ್ಟು ಪ್ರೇಕ್ಷಕರ ಹಾಜರಾತಿ ಅವಕಾಶ ಸಿಕ್ಕ ಮೊದಲ ವಾರದಲ್ಲಿ ಪಿ. ಶೇಷಾದ್ರಿ ನಿರ್ದೇಶನದ ‘ಮೋಹನದಾಸ’ ಹಾಗೂ ಚಂದ್ರಹಾಸ ನಿರ್ದೇಶನದ ‘ಕಾಗೆಮೊಟ್ಟೆ’ ಚಿತ್ರಗಳು ಬಿಡುಗಡೆಯಾಗುತ್ತಿವೆ. ಈ ಎರಡು ಚಿತ್ರಗಳು ಒಟ್ಟು 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿವೆ.

ಚಿತ್ರಮಂದಿರಗಳಲ್ಲಿ 100% ಸೀಟು; ಸಿನಿಮಾ ರಿಲೀಸ್‌ಗಳ ಲಿಸ್ಟ್‌ ಇಲ್ಲಿದೆ!

ರಾಜ್ಯದಲ್ಲಿರುವ 630 ಸಿಂಗಲ್ ಸ್ಕ್ರೀನ್ ಹಾಗೂ 60 ಮಲ್ಟಿಪ್ಲೆಕ್‌ಸ್ ಚಿತ್ರಮಂದಿರಗಳು ಸಿನಿಮಾಗಳ ಪ್ರದರ್ಶನಕ್ಕೆ ಸಜ್ಜಾಗಿವೆ. ಸದ್ಯಕ್ಕೆ ಚಿತ್ರಮಂದಿರಗಳಲ್ಲಿ ಶೇ.5 ರಿಂದ 10ರಷ್ಟು ಪ್ರೇಕ್ಷಕರ ಹಾಜರಾತಿ ಕಾಣುತ್ತಿದೆ. ಅಕ್ಟೋಬರ್ 1ರಿಂದ ಈ ಸ್ಥಿತಿ ಬದಲಾಗಲಿದ್ದು, ಎಲ್ಲಾ ಚಿತ್ರಮಂದಿರಗಳಲ್ಲೂ ಪ್ರೇಕ್ಷಕರ ಸಂಖ್ಯೆ ಹೆಚ್ಚಳವಾಗಲಿದೆ ಎಂಬ ನಿರೀಕ್ಷೆ ಇದೆ. ಸ್ಟಾರ್ ನಟರ ಅಭಿನಯದ ಚಿತ್ರಗಳ ಬಿಡುಗಡೆಗೆ ಇನ್ನೂ ಎರಡು ವಾರ ಬಾಕಿ ಇದೆ. ರಾಜ್ಯದ ಬಹುತೇಕ ಚಿತ್ರಮಂದಿರಗಳು ಅಕ್ಟೋಬರ್ 14ರಂದು ತೆರೆ ಕಾಣುತ್ತಿರುವ ಇಬ್ಬರು ಸ್ಟಾರ್ ನಟರ ಎರಡು ಚಿತ್ರಗಳ ಮೇಲೆ ತಮ್ಮ ಗಮನ ಕೇಂದ್ರೀಕರಣ ಮಾಡಿದ್ದಾರೆ. ದೊಡ್ಡ ಚಿತ್ರಗಳು ಬಂದರೆ ಥಿಯೇಟರ್‌ಗಳು ರಂಗೇರಲಿವೆ ಎಂಬುದು ಬಹುತೇಕ ಪ್ರದರ್ಶಕರ ಅಭಿಪ್ರಾಯ.

ಕಾಗೆಮೊಟ್ಟೆ ಚಿತ್ರವನ್ನು ಮೊದಲ ವಾರದಲ್ಲಿ 100 ರಿಂದ 120 ಥಿಯೇಟರ್‌ಗಳಲ್ಲಿ ಬಿಡುಗಡೆ ಮಾಡುತ್ತಿದ್ದು, ಪ್ರೇಕ್ಷಕರ ಪ್ರತಿಕ್ರಿಯೆ ನೋಡಿಕೊಂಡು ಮುಂದಿನ ವಾರ ಮತ್ತಷ್ಟು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಿದ್ದೇವೆ. ಈಗಾಗಲೇ ನಾವು ಪಟ್ಟಿ ಮಾಡಿಕೊಂಡಿರುವ ಎಲ್ಲಾ ಚಿತ್ರಮಂದಿರಗಳನ್ನೂ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದ್ದಾರೆ. ಧೈರ್ಯವಾಗಿ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬಂದು ಸಿನಿಮಾ ನೋಡಬಹುದು. - ಚಂದ್ರಹಾಸ, ಕಾಗೆಮೊಟ್ಟೆ ನಿರ್ದೇಶಕ

‘ನಾವು ಚಿತ್ರಗಳನ್ನು ಬಿಡುಗಡೆ ಮಾಡುವುದಕ್ಕೆ ತಯಾರಿ ಮಾಡಿಕೊಂಡಿದ್ದೇವೆ. ಇನ್ನು ಎಲ್ಲವೂ ಪ್ರೇಕ್ಷಕರ ಕೈಯಲ್ಲಿದೆ. ಅವರು ಮನಸ್ಸು ಮಾಡಿದರೆ ಚಿತ್ರರಂಗ ಮತ್ತೆ ಎಂದಿನಂತೆ ಹೌಸ್‌ಫುಲ್ ಸಂಭ್ರಮ ಕಾಣಬಹುದು. ಈಗ ಶೇ.10ಷ್ಟು ಪ್ರೇಕ್ಷಕರ ಹಾಜರಾತಿ ಇದೆ. ಅಂದರೆ ಒಂದು ಸಾವಿರ ಸೀಟು ಇದ್ದರೆ 100 ಸೀಟಿನ ಟಿಕೆಟ್ ಮಾರಾಟ ಆಗಬಹುದು. ಎರಡು ವಾರಗಳ ನಂತರ ಅಂದರೆ ಅಕ್ಟೋಬರ್ 14ರ ನಂತರ ಚಿತ್ರಮಂದಿರಗಳ ಸ್ಥಿತಿಗಳು ಗೊತ್ತಾಗಲಿವೆ. ಅಂದರೆ ಪ್ರೇಕ್ಷಕರನ್ನು ಕರೆತರುವ ದೊಡ್ಡ ನಟರ ಮಾಸ್ ಚಿತ್ರಗಳು ಥಿಯೇಟರ್‌ಗಳಿಗೆ ಬರಬೇಕು. ಹಾಗೆ ಬಂದರೆ ಶೇ.80ರಷ್ಟು ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬರಲಿದ್ದಾರೆ’ ಎನ್ನುತ್ತಾರೆ ಕರ್ನಾಟಕ ಚಲನಚಿತ್ರ ಪ್ರದರ್ಶಕರ ಸಂಘದ ಅಧ್ಯಕ್ಷ ಕೆ ವಿ ಚಂದ್ರಶೇಖರ್.

ಶಿವರಾಜ್‌ಕುಮಾರ್ 'ಭಜರಂಗಿ-2' ಬಗ್ಗೆ ತಿಳಿಯಲೇ ಬೇಕಾದ ವಿಚಾರಗಳಿವು..

ಈ ವಾರ ಎರಡು ಚಿತ್ರಗಳು ಬರುತ್ತಿವೆ. ಒಳ್ಳೆಯ ಚಿತ್ರಗಳನ್ನು ಜನ ಗೆಲ್ಲಿಸಿದೆ ನಿಜವಾಗಲೂ ಮತ್ತೆ ಚಿತ್ರರಂಗದಲ್ಲಿ ಹೌಸ್ ಸಂಭ್ರಮ ಕಾಣಬಹುದು. - ಕೆ ವಿ ಚಂದ್ರಶೇಖರ್, ಕರ್ನಾಟಕ ಚಲನಚಿತ್ರ ಪ್ರದರ್ಶಕರ ಸಂಘದ ಅಧ್ಯಕ್ಷ

ರಾಜ್ಯದ ಚಿತ್ರಮಂದಿರಗಳ ಸಂಖ್ಯೆ: 630

ಮಲ್ಟಿಪ್ಲೆಕ್‌ಸ್ಗಳು: 60

ಅ.1ರಂದು ತೆರೆಕಾಣುತ್ತಿರುವ ಚಿತ್ರಗಳು: 2

ಎಷ್ಟು ಥಿಯೇಟರ್‌ಗಳಲ್ಲಿ ಬಿಡುಗಡೆ: 200ಕ್ಕೂ ಹೆಚ್ಚು

ಸದ್ಯಕ್ಕೆ ನಾವು ಮೋಹನದಾಸ ಚಿತ್ರವನ್ನು ಕನ್ನಡದಲ್ಲಿ ಮಾತ್ರ ಬಿಡುಗಡೆ ಮಾಡುತ್ತಿದ್ದೇವೆ. ಕನ್ನಡದಲ್ಲೇ ಸದ್ಯಕ್ಕೆ 30 ಚಿತ್ರಮಂದಿರಗಳಲ್ಲಿ ನಮ್ಮ ಸಿನಿಮಾ ತೆರೆ ಕಾಣುತ್ತಿದೆ. ಕನಿಷ್ಠ 50 ಚಿತ್ರಮಂದಿರಗಳಲ್ಲಾದರೂ ಬಿಡುಗಡೆ ಮಾಡಬೇಕು ಎನ್ನುವ ಗುರಿ ಇದೆ. ದೆಹಲಿಯಲ್ಲೂ ಸಿನಿಮಾ ಬಿಡುಗಡೆ ಆಗುತ್ತಿದೆ. ಅಕ್ಟೋಬರ್ ನಂತರ ಬೇರೆ ಬೇರೆ ರಾಜ್ಯಗಳಲ್ಲೂ ಸಿನಿಮಾ ತೆರೆ ಕಾಣಲಿದೆ. - ಪಿ. ಶೇಷಾದ್ರಿ, ನಿರ್ದೇಶಕ


 

Follow Us:
Download App:
  • android
  • ios