ಕಾಂತಾರ ಸಿನಿಮಾದ ವರಾಹ ರೂಪಂ....ಹಾಡಿನ ವಿವಾದ ಇನ್ನೂ ಬಗೆ ಹರಿದಿಲ್ಲ.  ಕೇರಳ ಹೈ ಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ. ನಿರ್ದೇಶಕ ರಿಷಬ್ ಶೆಟ್ಟಿ ಮತ್ತು ನಿರ್ಮಾಪಕ ವಿಜಯ್ ಕಿರಗಂದೂರು ಅವರಿಗೆ ಬಿಗ್ ರಿಲೀಸ್ ಸಿಕ್ಕಿದೆ.

ಕಾಂತಾರ ಸಿನಿಮಾದ ವರಾಹ ರೂಪಂ....ಹಾಡಿನ ವಿವಾದ ಇನ್ನೂ ಬಗೆ ಹರಿದಿಲ್ಲ. ಇದೀಗ ಕೇರಳ ಹೈ ಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ. ಇದು ಕಾಂತಾರ ತಂಡಕ್ಕೆ ಸ್ವಲ್ಪ ನಿರಾಳವಾಗಿದೆ. ಕಾಂತಾರ ಸಿನಿಮಾದ ಸೂಪರ್ ಹಿಟ್ ವರಾಹ ರೂಪಂ... ಹಾಡಿನ ಮೇಲೆ ಕೃತಿ ಚೌರ್ಯದ ಆರೋಪ ಇತ್ತು. ಕೇರಳ ಮೂಲದ ತೈಕ್ಕುಡಂ ಬ್ರಿಡ್ಜ್ ಎಂಬ ಬ್ಯಾಂಡ್ ಕಾಂತಾರ ತಂಡದ ವಿರುದ್ಧ 'ನವರಸಂ' ಹಾಡನ್ನು ಕದ್ದಿದ್ದಾರೆ ಎಂದು ಕೃತಿಚೌರ್ಯದ ಆರೋಪ ಮಾಡಿ ಕೋರ್ಟ್ ಮೆಟ್ಟಿಲೇರಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳಾ ಹೈ ಕೋರ್ಟ್​​ ಹಾಡು ಬಳಸದಂತೆ ಆದೇಶಿಸಿತ್ತು. ಅಲ್ಲದೇ ನಿರ್ಮಾಪಕ ವಿಜಯ್ ಕಿರಗಂದೂರು ಹಾಗು ನಟ, ನಿರ್ದೇಶಕ ರಿಷಬ್ ಶೆಟ್ಟಿಯನ್ನು ಬಂಧಿಸುವಂತೆ ಆದೇಶಿಸಿತ್ತು. 

ಬಳಿಕ ರಿಷಬ್ ಶೆಟ್ಟ ಹಾಗು ವಿಜಯ್ ಕಿರಗಂದೂರು ಇಬ್ಬರೂ ಕೇರಳ ಹೈ ಕೋರ್ಟ್​ನಿಂದ ಜಾಮೀನು ಪಡೆದುಕೊಂಡಿದ್ದರು. ಬಳಿಕ ಈ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಈಗ ಸುಪ್ರೀಂ ಕೋರ್ಟ್, ಕೇರಳ ಹೈ ಕೋರ್ಟ್ ಕೊಟ್ಟಿದ್ದ ಆದೇಶಕ್ಕೆ ತಡೆಯಾಜ್ಞೆ ನೀಡಿದೆ. ಸುಪ್ರೀಂ ಕೋರ್ಟ್, ನಟ ನಿರ್ದೇಶಕ ರಿಷಬ್ ಶೆಟ್ಟಿ, ನಿರ್ಮಾಪಕ ವಿಜಯ್ ಕಿರಗಂದೂರ್ ಗೆ ಮಧ್ಯಂತರ ರಕ್ಷಣೆ ನೀಡಿದೆ. ತನಿಖೆ ವೇಳೆ ಬಂಧಿಸದಂತೆ ಸುಪ್ರೀಂ ಸೂಚಿಸಿದೆ. ಅಲ್ಲದೆ ಇಬ್ಬರನ್ನೂ ಬಂಧಿಸದೆ ವಿಚಾರಣೆ ನಡೆಸುವಂತೆ ಹೇಳಿದೆ. 

'ಕಾಂತಾರ' ಹಾಡಿನ ವಿವಾದ; ಹೊಂಬಾಳೆಗೆ ಹಿನ್ನಡೆ, ಅರ್ಜಿ ವಜಾಗೊಳಿಸಿದ ಕೇರಳ ಹೈಕೋರ್ಟ್

ಕಾಂತಾರ' ಚಿತ್ರದ 'ವರಾಹ ರೂಪಂ' ಹಾಡನ್ನು ಪ್ರದರ್ಶಿಸಬಾರದು ಎಂದು ಕೇರಳ ಹೈಕೋರ್ಟ್ ವಿಧಿಸಿದ್ದ ಷರತ್ತನ್ನು ಸುಪ್ರೀಂ ಕೋರ್ಟ್ ಸಡಿಲಿಸಿದೆ. ಹಾಡಿನ ಮೇಲೆ ಹಕ್ಕುಸ್ವಾಮ್ಯ ಉಲ್ಲಂಘನೆ ಆರೋಪದ ತನಿಖೆಗೆ ವಿಜಯ್ ಕಿರಗಂದೂರು ಮತ್ತು ರಿಷಬ್ ಶೆಟ್ಟಿಯವರು ಫೆಬ್ರವರಿ 12 ಮತ್ತು 13ರಂದು ಹಾಜರಾಗುವ ವೇಳೆ ಅವರನ್ನು ಬಂಧಿಸಬಾರದೆಂದು ಸುಪ್ರೀಂ ಕೋರ್ಟ್ ಸೂಚಿಸಿದೆ. ಈ ಮೂಲಕ ನಿರ್ದೇಶಕ ರಿಷಬ್ ಶೆಟ್ಟಿ ಮತ್ತು ನಿರ್ಮಾಪಕ ವಿಜಯ್ ಕಿರಗಂದೂರು ಅವರಿಗೆ ಬಿಗ್ ರಿಲೀಫ್ ಸಿಕ್ಕಂತೆ ಆಗಿದೆ.