ಸುಹಾಸ್‌ನಿಂದ ವ್ಯಾಪಾರ ಕಲೆ ಕಲಿಯಲು ಕರೆ ಕೊಟ್ಟ ರಾಜ್ ಬಿ ಶೆಟ್ಟಿ, ಎಂಥ ಮಾರ್ರೆ!
ಸೆಟ್ ಹುಡಗ ಸುಹಾಸ್‌ಗೆ ರಿಷಬ್ ಶೆಟ್ಟಿ ಅವ್ರು 'ದೊಡ್ಡವ್ನನಾದ್ಮೇಲೆ ಏನಾಗ್ತೀಯ ನೀನು? ಅಂತ ಕೇಳಿದಾರೆ. ಅದಕ್ಕೆ ಮೊಟ್ಟ ಮೊದಲ ಉತ್ತರವೇ ಮಜವಾಗಿದೆ.. ವಿಡಿಯೋ ನೋಡಿದರೇನೇ ರಿಯಲ್ ಮಜಾ ಸಿಗೋದು ಅನ್ನೋ ತರ ಇದೆ. ಹೀಗಾಗಿಯೇ ಸ್ವತಃ..

ನಟ-ನಿರ್ದೇಶಕ ರಾಜ್ ಬಿ ಶೆಟ್ಟಿ (Raj B Shetty) ಕನ್ನಡ ಸಿನಿಮಾ ಸೆಟ್ ಬಾಯ್ ಸುಹಾಸ್ (Suhas) ಬಗ್ಗೆ ಪೋಸ್ಟ್ ಒಂದನ್ನು ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್‌ನಲ್ಲಿ ಹಾಕಿದ್ದಾರೆ. ಆ ವಿಡಿಯೋ ತುಂಬಾ ವಿಶೇಷವಾಗಿದೆ. ಅದನ್ನು ನೋಡಿ ಹಲವರು ವಿಭಿನ್ನ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಪೋಸ್ಟ್ ಮಾಡಿರುವುದು ಮಾತ್ರವಲ್ಲ, ಸುಹಾಸ್ ಬಗ್ಗೆ ರಾಜ್ ಬಿ ಶೆಟ್ಟಿ ಬರೆದಿರುವುದು ಕೂಡ ಎಲ್ಲರ ಗಮನ ಸೆಳೆಯುತ್ತಿದೆ. ಹಾಗಿದ್ರೆ ಅದೇನು ನೋಡಿ..
ದೊಡ್ಡವ್ನನಾದ್ಮೇಲೆ ಏನಾಗ್ತೀಯ ನೀನು? ಅಂತ ಕೇಳಿದಾರೆ. ಅದಕ್ಕೆ ಮೊಟ್ಟ ಮೊದಲ ಉತ್ತರ 'ದೊಡ್ಡವನಾದ್ಮೇಲೇ ಗೊತ್ತಾಗುತ್ತೆ ಎಂದಿದಾನೆ ಸುಹಾಸ್. ಬಳಿಕ, 'ವ್ಯಾಪಾರ ಮಾಡ್ತೀನಿ' ಅಂದಿದಾನೆ ಹುಡುಗ. ಅದಕ್ಕೆ ಏನ್ ವ್ಯಾಪಾರ ಮಾಡ್ತೀಯಾ ಅಂತ ಕೇಳಿದ್ದಕ್ಕೆ 'ಟೊಮೆಟೋ, ಎಲ್ಲಾ ಮಾಡ್ತೀನಿ, ಸೊಪ್ಪು, ಹಬ್ಬಕ್ಕೆ ಕಬ್ಬು, ಗೆಣಸು, ಅವ್ರೇ ಕಾಯಿ, ಕಡ್ಲೇ ಕಾಯಿ.. ಒಂದಿನ ಮಾತ್ರ ಹಾಕಿದ್ದು ಕಬ್ಬು.. 'ಅಂದಿದಾನೆ ಸುಹಾಸ್.
ಆಯ್ತು, ನೀನು ಟೊಮೆಟೋಗೆ ಎಷ್ಟು ಹೇಳ್ತೀಯಾ? ಎನ್ನಲು 20 ರೂಪಾಯಿ ಅಂದಿದಾನೆ ಹುಡುಗ.. ಕಮ್ಮಿ ಮಾಡ್ಕೋ ಅಂದಾಗ, 'ಆಗಲ್ಲ, ಲಾಸ್ ಆಗುತ್ತೆ' ಅಂದಿದಾನೆ. 'ಯಾಕೆ ಲಾಸ್ ಅಗುತ್ತೆ, ಆ ಅಂಗಡಿಯವ್ನು 17 ರೂಪಾಯಿಗೇ ಕೊಡ್ತಾನೆ' ಎನ್ನಲು ಸುಹಾಸ್ 'ಅಲ್ಲೇ ಹೋಗಿ ತಗೊಳ್ಳಿ ಅಂತೀನಿ..' ಅಂದಿದಾನೆ. ಹುಡುಗ ಸಖತ್ ಚೂಟಿ ಆಗಿದಾನೆ. ಅವನು ಮಾತಾಡುವಾಗ ಕೊಡವ ಎಕ್ಸ್‌ಪ್ರೆಶನ್ ಹಾಗೂ ಮುಗ್ಧ ನಗು ನೋಡಿದರೆ ಎಂಥವರಿಗೂ ಒಮ್ಮೆ ಸುಹಾಸ್ ನೋಡ್ಬೇಕು ಅನ್ಸುತ್ತೆ.
ವಿಡಿಯೋ ನೋಡಿದರೇನೇ ಮಾತ್ರ ರಿಯಲ್ ಮಜಾ ಸಿಗೋದು ಅನ್ನೋ ತರ ಇದೆ. ಹೀಗಾಗಿಯೇ ಸ್ವತಃ ನಟ-ನಿರ್ದೇಶಕ ರಾಜ್ ಬಿ ಶೆಟ್ಟಿಯವರು ಈ ಸುಹಾಸ್ ವಿಡಿಯೋವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸುಹಾಸ್ ಮಾತುಕತೆ ರೀತಿ ಸೂಪರ್ ಅನ್ನೋ ಹಾಗಿದೆ. ಜೊತೆಗೆ, ಬೀದಿ ಬದಿಯಲ್ಲಿ ಬಿಸಿನೆಸ್ ಹೇಗೆ ಮಾಡ್ತಾರೆ ಅನ್ನೋದನ್ನ ಆ ಹುಡುಗ ಚೆನ್ನಾಗಿ ನೋಡ್ಕೊಂಡಿದಾನೆ ಅನ್ನೋದು ಅರ್ಥ ಆಗುತ್ತೆ ಅಲ್ಲಿ.
ಈ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿರುವ ರಾಜ್ ಬಿ ಶೆಟ್ಟಿ 'ಕನ್ನಡ ಸಿನಿಮಾ ಸೆಟ್‌ನ ಫೇಮಸ್ ಹುಡುಗ ಸುಹಾಸ್.. ಜೂನಿಯರ್ ಆರ್ಟಿಸ್ಟ್ ಆದ್ರೆ ಲೈಫ್ ಎಕ್ಸ್‌ಪೀರಿಯನ್ಸ್ ಅಂತ ಬಂದಾಗ ಆತ ತುಂಬಾ ಸೀನಿಯರ್.. ಆತನಿಂದ ನಾವೆಲ್ಲಾ ವ್ಯಾಪಾರ-ವಹಿವಾಟಿನ ಕಲೆ ಕಲಿಯೋಣ ಬನ್ನಿ..' ಅಂತ ಕರೆ ಕೊಟ್ಟಿದ್ದಾರೆ ರಾಜ್ ಬಿ ಶೆಟ್ಟಿ. ಒಟ್ಟಿನಲ್ಲಿ ಚಿಕ್ಕವರಿಂದ ದೊಡ್ಡವರವರೆಗೂ ರಾಜ್ ಬಿ ಶೆಟ್ಟಿಯವರು ಎಲ್ಲರಿಗೂ ಬೆಲೆ ಕೊಡುತ್ತಾರೆ, ಜೊತೆಗೆ ಎಲ್ಲರಿಂದಲೂ ಕಲಿಯುತ್ತಾರೆ ಎನ್ನುವುದು ಕನ್ಫರ್ಮ್ ಆಗೋಯ್ತು ಅಲ್ವೇ?

