ಕೆಜಿಎಫ್-2 ಸಿನಿಮಾ ನೋಡಿಲ್ಲ ಎಂದು ಕಾಂತಾರ ನಟ ಕಿಶೋರ್ ಹೇಳಿದ್ದಾರೆ. ಯಾಕೆ ಎಂದ ಸಹ ಬಹಿರಂಗ ಪಡಿಸಿದ್ದಾರೆ.
2022ರ ದೊಡ್ಡ ಬ್ಲಾಕ್ ಬಸ್ಟರ್ ಸಿನಿಮಾ, ಅತೀ ಹೆಚ್ಚು ಕಲೆಕ್ಷನ್ ಮಾಡಿದ ಕನ್ನಡದ ಚಿತ್ರ ಕೆಜಿಎಫ್-2. ರಾಕಿಂಗ್ ಯಶ್, ಪ್ರಶಾಂತ್ ನೀಲ್ ಮತ್ತು ಹೊಂಬಾಳೆ ಕಾಂಬಿನೇಷನ್ ನಲ್ಲಿ ಬಂದ ಕೆಜಿಎಫ್-2 ರಾಷ್ಟ್ರ- ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿತ್ತು. ಎಲ್ಲಾ ಭಾಷೆಯ ಅಭಿಮಾನಿಗಳು ಸಿನಿಮಾ ನೋಡಿ ಇಷ್ಟಪಟ್ಟಿದ್ದರು. ಯಶ್ ನಟನೆ, ಫೈಟಿಂಗ್, ಸಾಂಗ್ಸ್ ಹೀಗೆ ಎಲ್ಲಾ ವಿಚಾರಗಳಲ್ಲೂ ಕೆಜಿಎಫ-2 ಅಭಿಮಾನಿಗಳ ಹೃದಯ ಗೆದ್ದಿತ್ತು. ಆದರೆ ಕನ್ನಡ ನಟ, ಕಾಂತಾರ ಸ್ಟಾರ್ ಕಿಶೋರ್ ಕೆಜಿಎಫ್-2 ಸಿನಿಮಾ ನೋಡಿಲ್ಲ ಎಂದು ಬಹಿರಂಗ ಪಡಿಸಿದ್ದಾರೆ. ಕೆಜಿಎಫ್-2 ನನ್ನ ಪ್ರಕಾರದ ಸಿನಿಮಾ ಅಲ್ಲ ಹಾಗಾಗಿ ನೋಡಿಲ್ಲ ಎಂದು ಹೇಳಿದ್ದಾರೆ,
ಕಾಂತಾರ ಸಿನಿಮಾದಲ್ಲಿನ ತನ್ನ ಅದ್ಭುತ ಅಭಿನಯಕ್ಕೆ ಭಾರಿ ಮೆಚ್ಚುಗೆ ಪಡೆದಿರುವ ನಟಿ ಕಿಶೋರ್ KGF 2 ಸಿನಿಮಾದ ಸ್ಟೋರಿ ಲೈನ್‌ಗೆ ನಾನು ಅಭಿಮಾನಿಯಲ್ಲ ಎಂದಿದ್ದಾರೆ. ಈ ಬಗ್ಗೆ ಮಾತನಾಡಿರುವ ಕಿಶೋರ್, ನನೆಗ ಸರಿಯೋ ತಪ್ಪೋ ಗೊತ್ತಿಲ್ಲ. ಆದರೆ ನಾನು ಕೆಜಿಎಫ್-2 ನೋಡಿಲ್ಲ. ಇದು ನನ್ನ ಪ್ರಕಾರದ ಸಿನಿಮಾ ಅಲ್ಲ. ಇದು ವೈಯಕ್ತಿಕ ಆಯ್ಕೆಯಾಗಿದೆ. ನಾನು ಸಕ್ಸಸ್ ಕಾಣದ ಕನ್ನಡದ ಚಿಕ್ಕ ಸಿನಿಮಾಗಳನ್ನು ನೋಡುತ್ತೇನೆ ಆದರೆ ಇಂಥ ಬುದ್ದಿ ಇಲ್ಲದ ಸಿನಿಮಾ ನೋಡಲ್ಲ' ಎಂದು ಹೇಳಿದ್ದಾರೆ.
ದೈವ, ದೆವ್ವ ನಮ್ಮ ನಂಬಿಕೆಯಷ್ಟೇ, ಅವಮಾನಿಸುವ ಅವಶ್ಯಕತೆ ಇಲ್ಲ; ಕಾಂತಾರ ವೈರಲ್ ವಿಡಿಯೋಗೆ ಕಿಶೋರ್ ರಿಯಾಕ್ಷನ್
ಅಂದಹಾಗೆ ನಟ ಕಿಶೋರ್ ಸದ್ಯ ಬಾಲಿವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ. ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಅವರ ರೆಡ್ ಕಾಲರ್ ಚಿತ್ರದ ಮೂಲಕ ಹಿಂದಿಗೆ ಪದಾರ್ಪಣೆ ಮಾಡುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ಕಿಶೋರ್, ನಾನು ಈ ಸಿನಿಮಾವನ್ನು ಚೊಚ್ಚಲ ಬಾಲಿವುಡ್ ಸಿನಿಮಾ ಅಂತ ನೋಡಲ್ಲ ಇದು ನಾವು ಹಿಂದಿಯಲ್ಲಿ ನಿರ್ಮಿಸುತ್ತಿರುವ ಚಿತ್ರ ಎಂದು ಹೇಳಿದ್ದಾರೆ.
ಟ್ವಿಟರ್ ಸಸ್ಪೆಂಡ್ ಆದದ್ದು ದೈವದ ಬಗ್ಗೆ ಬರೆದ ಪೋಸ್ಟ್‌ನಿಂದಲ್ಲ; ಊಹಾಪೋಹಗಳಿಗೆ ನಟ ಕಿಶೋರ್ ಬ್ರೇಕ್
ಕಿಶೋರ್ ಟ್ವಿಟ್ಟರ್ ಅಕೌಂಟ್ ಹ್ಯಾಕ್
ಅಂದಹಾಗೆ ಇತ್ತೀಚಿಗಷ್ಟೆ ನಟ ಕಿಶೋರ್ ಟ್ವಿಟ್ಟರ್ ಅಕೌಂಟ್ ಹ್ಯಾಕ್ ಆಗಿತ್ತು. ಕಿಶೋರ್ ಟ್ವಿಟ್ಟರ್ ಅಕೌಂಟ್ ಯಾಕೆ ಅಮಾನತು ಆಗಿದೆ ಎಂದು ಎಲ್ಲರಿಗೂ ಅಚ್ಚರಿಯಾಗಿತ್ತು. ಈ ಬಗ್ಗೆ ಸ್ವತಃ ಕಿಶೋರ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ಈ ಬಗ್ಗೆ ಕಿಶೋರ್, 'ಊಹಾಪೋಹಗಳನ್ನು ತಡೆಯಲಿಕ್ಕಾಗಿಯಷ್ಟೆ. ನನ್ನ ಟ್ವಿಟರ್ ಅಕೌಂಟ್ ಸಸ್ಪೆಂಡ್ ಆದದ್ದು ನನ್ನ ಯಾವ ಪೋಸ್ಟಿನಿಂದಲೂ ಅಲ್ಲ. ಡಿಸೆಂಬರ್ 20 ನೇತಾರೀಖು 2022 ರಂದು ಹ್ಯಾಕ್ ಮಾಡಲಾಗಿದ್ದರಿಂದ ಎಂದು ತಿಳಿದುಬಂದಿದೆ. ತಕ್ಕ ಕ್ರಮ ಕೈಗೊಳ್ಳುವ ಭರವಸೆ ಟ್ವಿಟರ್ ಕೂಡ ಕೊಟ್ಟಿದೆ. ಎಲ್ಲರ ಕಾಳಜಿಗೆ ಧನ್ಯವಾದಗಳು' ಎಂದು ಹೇಳಿದ್ದಾರೆ.
