Asianet Suvarna News Asianet Suvarna News

ಒಂದು ವರ್ಷ ಯಾರ ಕೈಗೂ ಸಿಗಲ್ವಂತೆ ರಿಷಬ್ ಶೆಟ್ಟಿ: ನನ್ ತಂಟೆಗೆ ಬರಬೇಡಿ ಅಂದಿದ್ದೇಕೆ ಡಿವೈನ್ ಸ್ಟಾರ್!

ಕಾಂತಾರ ಸಿನಿಮಾ ಬಂದು ಒಂದು ವರ್ಷ ಆಯ್ತು. ರಿಷಬ್ ಶೆಟ್ಟಿ ಡಿವೈನ್ ಸ್ಟಾರ್ ಪಟ್ಟಕ್ಕೇರಿ ಪ್ಯಾನ್ ಇಂಡಿಯಾದಲ್ಲಿ ಸೌಂಡ್ ಮಾಡಿದ್ದು ಆಯ್ತು. ಕಾಂತಾರ ಪ್ರೀಕ್ವೆಲ್ ಕಥೆ ಹೇಳ್ತೀನಿ ಅಂತ ಶೆಟ್ರು ಅನೌನ್ಸ್ ಮಾಡಿದ್ದೂ ಆಗಿದೆ. ಆದ್ರೆ ರಿಷಬ್ ಮಾತ್ರ ಇಷ್ಟು ದಿನ ಫುಲ್ ಫ್ರೀ ಆಗಿ ಓಡಾಡ್ಕೊಂಡಿದ್ರು.

Kantara 2 Shooting Busy I Will Not Attend Any Programme Next One Year Says Rishab Shetty gvd
Author
First Published Nov 1, 2023, 12:50 PM IST

ಕಾಂತಾರ ಸಿನಿಮಾ ಬಂದು ಒಂದು ವರ್ಷ ಆಯ್ತು. ರಿಷಬ್ ಶೆಟ್ಟಿ ಡಿವೈನ್ ಸ್ಟಾರ್ ಪಟ್ಟಕ್ಕೇರಿ ಪ್ಯಾನ್ ಇಂಡಿಯಾದಲ್ಲಿ ಸೌಂಡ್ ಮಾಡಿದ್ದು ಆಯ್ತು. ಕಾಂತಾರ ಪ್ರೀಕ್ವೆಲ್ ಕಥೆ ಹೇಳ್ತೀನಿ ಅಂತ ಶೆಟ್ರು ಅನೌನ್ಸ್ ಮಾಡಿದ್ದೂ ಆಗಿದೆ. ಆದ್ರೆ ರಿಷಬ್ ಮಾತ್ರ ಇಷ್ಟು ದಿನ ಫುಲ್ ಫ್ರೀ ಆಗಿ ಓಡಾಡ್ಕೊಂಡಿದ್ರು. ಅರೆ ಏನ್ ಶೆಟ್ರೆ ನಿಮ್ ಕತೆ ಕಾಂತಾರ2 ಸಿನಿಮಾ ಶುರು ಮಾಡ್ತೀವಿ ಅಂತೇಳಿ ಈಗ್ ನೋಡಿದ್ರೆ ಆರಾಮಾಗಿ ಓಡಾಡ್ಕೊಂಡ್ ಇದ್ದೀರಾ ಅಂತ ಇವರ ಭಕ್ತಗಣ ಕೇಳ್ತಾನೆ ಇದ್ರು. ಇನ್ಮುಂದೆ ಅದಕ್ಕೆಲ್ಲ ಶೆಟ್ರು ಪುಲಿಸ್ಟಾಪ್ ಇಡ್ತಾರಂತೆ. 

ಕಾಂತಾರ ಸಿನಿಮಾ ಬಂದ್ಮೇಲೆ ಕರಾವಳಿ ಪ್ರತಿಭೆ ರಿಷಬ್ ಶೆಟ್ಟಿಗೆ ಬೇಡಿಕೆ ಹೆಚ್ಚಾಗಿದೆ. ಇದ್ದ ಬದ್ದ ಕಾರ್ಯಕ್ರಮದ ಆಯೋಜಕರೆಲ್ಲಾ ನಮ್ ಕಾರ್ಯಕ್ರಮಕ್ಕೆ ಬನ್ನಿ ನಮ್ ಕಾರ್ಯಕ್ರಮಕ್ಕೆ ಬನ್ನಿ ಶೆಟ್ರಿಗೆ ಆಹ್ವಾನ ಕೊಡ್ತಾನೆ ಇದ್ದಾರೆ. ಆದ್ರೆ ಕಾಡು ಬೆಟ್ಟದ ಶಿವ ಈಗ ಗಟ್ಟಿ ನಿರ್ಧಾರವೊಂದನ್ನ ಮಾಡಿದ್ದಾರೆ. ಇನ್ನೊಂದು ವರ್ಷ ನಾನ್ ಯಾರ ಕೈಗು ಸಿಗಲ್ರಪ್ಪಾ ನನ್ನ ನನ್ ಪಾಡಿಗೆ ಬಿಟ್ ಬಿಡಿ ಅಂತ ಹೇಳ್ಬಿಟ್ಟಿದ್ದಾರೆ. ಉಡುಪಿಯಲ್ಲಿ ನಡೆದ ವಿಶ್ವ ಬಂಟರ ಸಮಾವೇಶದಲ್ಲಿ ಭಾಗಿ ಆಗಿದ್ದ ರಿಷಬ್ ಇನ್ನುಂದೆ ನಾನು ನಿಮ್ ಯಾರ್ ಕೈಗೂ ಸಿಗಲ್ಲ. 

‘ಶೂಟಿಂಗ್ ಮುಗಿದ ಮೇಲೆ ಮತ್ತೆ ಕಾರ್ಯಕ್ರಮಗಳಲ್ಲಿ ಸಿಗುತ್ತೇನೆ. ಅಲ್ಲಿಯವರೆಗೂ ಯಾವುದೇ ಕಾರ್ಯಕ್ರಮಕ್ಕೆ ಆಹ್ವಾನಿಸಬೇಡಿ. ಶೂಟಿಂಗ್ ಮಧ್ಯ ಬರಲು ಆಗುವುದಿಲ್ಲ. ಬೇಸರ ಬೇಡ ಎಂದಿದ್ದಾರೆ. ಸೋ ಅಲ್ಲಿಗೆ ರಷಬ್ ಇನ್ಮುಂದೆ ಕಾಂತಾರ ಪಾರ್ಟ್2  ವರ್ಕ್ನಲ್ಲಿ ಬ್ಯುಸಿ ಆಗ್ತಾರೆ ಅಂತ ಕನ್ಫರ್ಮ್. ಶೆಟ್ರ ಕಾಂತಾರ2 ಕೆಲಸ ಬರ್ದಂಡ್ ಆಗಿ ನಡೀತಿದೆ. ಕಾಂತಾರದ ಪ್ರೀಕ್ವೆಲ್ ಸ್ಟೋರಿಯ ಸ್ಕ್ರಿಪ್ಟ್ ವರ್ಕ್ ಕಂಪ್ಲೀಟ್ ಆಗಿದೆ. ಪ್ರೀ ಪ್ರೊಡಕ್ಷನ್ ಕೆಲಸಗಳು ಮುಗಿದಿದೆ. ಶೂಟಿಂಗ್ ಸ್ಪಾಟ್ ಕೂಡ ಹುಡುಕಿ ಆಗಿದೆ. ಸ್ಟಾರ್ ಕಾಸ್ಟ್ ಫೈಲ್ ಆಗಿದೆ. ಇನ್ನೇನ್ರಿ ಬೇಕು ಶೂಟಿಂಗ್ ಹೋದ್ರೆ ಸಾಕು. 

Black & Gold Dressನಲ್ಲಿ Rishab Shetty ದಂಪತಿ: ಕ್ಯೂಟ್‌ ಜೋಡಿ ಮೇಲೆ ಕೆಟ್ಟ ದೃಷ್ಟಿ ಬೀಳದಿರಲಿ ಎಂದ ಫ್ಯಾನ್ಸ್!

ಸೋ ನವೆಂಬರ್ನಿಂದ ಕಾಂತಾರ ಚಿತ್ರೀಕರಣ ಶುರುವಾಗುತ್ತೆ ಅಂತ ರಿಷಬ್ ಆಪ್ತ ಸಂಘ ಹೇಳಿದೆ.  ಡಿವೈನ್ ಸ್ಟಾರ್ ರಿಷಬ್ ಕಾಂತಾರ 2ಗೆ ಬಜೆಟ್ ಅನ್ನ ಪಕ್ಕಾ ಪ್ಲಾನ್ ಮಾಡಿದ್ದಾರೆ. ನಿರ್ಮಾಣ ಸಂಸ್ಥೆ ಹೊಂಬಾಳೆ ಶೂಟಿಂಗ್ಗೆ ಅಂತ 50 ಕೋಟಿ ಮೀಸಲಿಟ್ಟಿದೆಯಂತೆ. ಕಾಂತಾರ ಪಾರ್ಟ್1 ಬರೀ ಕೆರಾಡಿ ಊರಿನಲ್ಲಿ ಮಾತ್ರ ಆಗಿತ್ತು. ಆದ್ರೆ ಕಾಂತಾರ2 ಚಿತ್ರೀಕರಣ ಕೆರಾಡಿ ಜೊತೆಗೆ ಕುಂಂದಾಪುರ ಮಂಗಳೂರು, ಶಿವಮೊಗ್ಗ ಕೇರಳಾದಲ್ಲೂ ನಡೆಯಲಿದೆ ಅಂತ ಶೆಟ್ರ ಆಪ್ತಬಳಗ ವರ್ತಮಾನ ಕೊಟ್ಟಿದ್ದಾರೆ. ಏನಿ ವೇ ರಿಷಬ್ ಕಾಂತಾರಕ್ಕಾಗಿ ಒಂದು ವರ್ಷ ಯಾರ್ ಕೈಗೂ ಸಿಗೊಲ್ಲಾ ಅನ್ನೋದೆ ಸಧ್ಯದ ಹ್ಯಾಪನಿಂಗ್.

Follow Us:
Download App:
  • android
  • ios