ಪುಟ್ಟಣ್ಣ ಕಣಗಾಲ್ ನಿರ್ದೇಶನ ಪಡುವಾರಹಳ್ಳಿ ಪಾಂಡವರು ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಕಲಾವಿದ ವಿಶ್ವನಾಥ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಚಿಕಿತ್ಸೆ ಪಡೆಯಲು ಆರ್ಥಿಕ ಸಹಾಯ ಕೋರಿದ್ದಾರೆ.

ನಟ ಕಿಚ್ಚ ಸುದೀಪ್ ಸತ್ಕಾರ್ಯ ಮೆಚ್ಚಿದ ಸಚಿವ ಸುಧಾಕರ್‌; ಟ್ಟೀಟ್ ವೈರಲ್!

ಶುಗರ್ ಕಾಯಿಲೆಯಿಂದ ಬಳಲುತ್ತಿರವ ವಿಶ್ವನಾಥ್ ಕಾಲಿಗೆ ಗ್ಯಾಂಗ್ರಿನ್ ಆಗಿದೆ. ಸದ್ಯಕ್ಕೆ ಕಳೆದ ಹದಿನೈದು ದಿನಗಳಿಂದ ವಿಜಯನಗರದ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಸೂಕ್ತ ಚಿಕಿತ್ಸೆ ಪಡೆಯಲು ಕಿಚ್ಚ ಸುದೀಪ್ ಚಾರಿಟೇಬಲ್ ಟ್ರಸ್ಟ್‌ ಸಹಾಯ ಮಾಡಿದೆ ಎಂದಿದ್ದಾರೆ. ಚಿತ್ರರಂಗದ ಕಲಾಬಂಧುಗಳು ನಟ ವಿಶ್ವನಾಥ್‌ಗೆ ಸಹಾಯ ಮಾಡಬೇಕೆಂದು ಸುವರ್ಣ್ ನ್ಯೂಸ್‌.ಕಾಂ ಕೂಡ ಮನವಿ ಮಾಡಿಕೊಳ್ಳುತ್ತಿದೆ.

ಡಾ.ರಾಜ್‌ಕುಮಾರ್ ಜೊತೆ 'ಚಲಿಸುವ ಮೂಡಗಳು','ಶ್ರಾವಣ ಬಂತು',' ಗುರಿ', 'ಜ್ವಾಲಾಮುಖಿ' ಹಾಗೂ ವಿಷ್ಣುವರ್ಧನ್‌ ಜೊತೆ ಹತ್ತು ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಟಾಲಿವುಡ್‌ನ ರಾಮ್‌ ಗೋಪಾಲ್ ವರ್ಮಾ, ಕೆ ಬಾಲಚಂದ್ರು ನಿರ್ದೇಶನ ಚಿತ್ರಗಳಲ್ಲಿ ಹಾಗೂ ಚಿರಂಜೀವಿಯ 'ಶಿವ' ಸಿನಿಮಾದಲ್ಲೂ ನಟಿಸಿದ್ದಾರೆ. ಪುನೀತ್‌ ರಾಜ್‌ಕುಮಾರ್ ಸೂಪರ್ ಹಿಟ್ ಸಿನಿಮಾ 'ವಂಶಿ' ಹಾಗೂ ಕುಮಾರಸ್ವಾಮಿ ನಿರ್ಮಾಣ ಮಾಡಿದ 'ಜಿತೇಂದ್ರ'ದಲ್ಲಿ ಜಗ್ಗೇಶ್‌ ಜೊತೆ ಕಾಣಿಸಿಕೊಂಡಿದ್ದಾರೆ.  ನಂತರ ದಿನಗಳಲ್ಲಿ ಅವಕಾಶಗಳು ಕಡಿಮೆಯಾದ ಕಾರಣ ನಟಿಸುವುದನ್ನು ನಿಲ್ಲಿಸಿದ್ದರು. ಇದೀಗ ಅನಾರೋಗ್ಯ ಕಾಡುತ್ತಿದ್ದು, ಆರ್ಥಿಕ ಸಮಸ್ಯೆಯೂ ಜೊತೆಯಾಗಿದ್ದರಿಂದ ಈ ಹಿರಿಯ ನಟನಿಗೆ ಬದುಕುವ ಕಷ್ಟವಾಗುತ್ತಿದೆ. 

ಕಾಡಿನ ಮಕ್ಕಳಿಗೆ ಶಿಕ್ಷಣದ ಕಂಪು: ಶಾಲೆ ದತ್ತು ಪಡೆದ ಕಿಚ್ಚ 

ಸಹಾಯ ಮಾಡಲು ಇಚ್ಛಿಸುವವರು ಈ ಸಂಖ್ಯೆಗೆ ಕರೆ ಮಾಡಬಹುದು: ‎+91 87927 44142