ನಟ ಸುದೀಪ್ ಅಭಿನಯದ ‘ವಿಕ್ರಾಂತ್ ರೋಣ’ ಚಿತ್ರ ಇಂಗ್ಲಿಷ್‌ನಲ್ಲೂ ಬಿಡುಗಡೆಯಾಗಲಿದೆ. ಖುದ್ದು ಸುದೀಪ್ ತಮ್ಮ ಪಾತ್ರಕ್ಕೆ ಡಬ್ ಮಾಡಿದ್ದಾರೆ.
ದಕ್ಷಿಣ ಭಾರತದಲ್ಲೇ ನಾಯಕ ನಟನೊಬ್ಬ ತಮ್ಮ ಪಾತ್ರಕ್ಕೆ ಇಂಗ್ಲಿಷ್‌ನಲ್ಲಿ ಡಬ್ ಮಾಡಿರುವುದು ಇದೇ ಮೊದಲು. ಇಂಥದ್ದೊಂದು ಸಾಹಸವನ್ನು ಮಾಡಿಸಿರುವುದು ನಿರ್ದೇಶಕ ಅನೂಪ್ ಭಂಡಾರಿ.
ಅನೂಪ್ ಭಂಡಾರಿ ನೀಡಿರುವ ವಿಕ್ರಾಂತ್ ರೋಣ ಚಿತ್ರದ ಅಪ್‌ಡೇಟ್ಸ್ ಇಲ್ಲಿದೆ-
1. ‘ವಿಕ್ರಾಂತ್ ರೋಣ’ ಕನ್ನಡ, ತೆಲುಗು, ,ತಮಿಳು, ಹಿಂದಿ, ಮಲಯಾಳಂ ಜತೆಗೆ ಇಂಗ್ಲಿಷ್‌ನಲ್ಲೂ ಬಿಡುಗಡೆ ಆಗುತ್ತಿದೆ. ಮಲಯಾಳಂ ಭಾಷೆಯ ಹೊರತಾಗಿ ಎಲ್ಲಾ ಭಾಷೆಗಳಲ್ಲೂ ಸುದೀಪ್ ಅವರೇ ಡಬ್ ಮಾಡಿದ್ದಾರೆ. ಇದು ನಮ್ಮ ಚಿತ್ರದ ನಾಯಕ ಸುದೀಪ್ ಪ್ರೀತಿಯಿಸಿದ ಸ್ವೀಕರಿಸಿ ನಿಭಾಯಿಸಿದ ದೊಡ್ಡ ಸವಾಲು ಎಂಬುದು ನನ್ನ ಭಾವನೆ.
![]()
2. ಚಿತ್ರಕ್ಕೆ ಇಂಗ್ಲಿಷ್ ಡಬ್ಬಿಂಗ್ ನಡೆಯುತ್ತಿದೆ. ಸುದೀಪ್ ಪಾತ್ರದ ಡಬ್ಬಿಂಗ್ ಕೆಲಸ ಮಾತ್ರ ಮುಗಿದ್ದು, ಉಳಿದವರ ಪಾತ್ರಗಳಿಗೆ ಡಬ್ಬಿಂಗ್ ನಡೆಯುತ್ತಿದೆ. ನನಗೆ ಗೊತ್ತಿರುವಂತೆ ಒಂದು ಕಮರ್ಷಿಯಲ್ ಚಿತ್ರದಲ್ಲಿ ನಾಯಕ ನಟನೊಬ್ಬ ತಮ್ಮ ಪಾತ್ರಕ್ಕೆ ತಾವೇ ಇಂಗ್ಲಿಷ್‌ನಲ್ಲಿ ಡಬ್ ಮಾಡಿರುವುದು ಇದೇ ಮೊದಲು. ದಕ್ಷಿಣ ಭಾರತದ ಯಾವ ಹೀರೋಗಳು ಕೂಡ ತಮ್ಮ ಪಾತ್ರಕ್ಕೆ ತಾವೇ ಸಂಪೂರ್ಣವಾಗಿ ಇಂಗ್ಲಿಷ್‌ನಲ್ಲಿ ವಾಯ್‌್ಸ ಕೊಟ್ಟಿಲ್ಲ.
Vikranth Rona ಸಿನಿಮಾದ ಇಂಗ್ಲೀಷ್ ವರ್ಷನ್‌ಗೆ ಕಿಚ್ಚ ಸುದೀಪ್ ಡಬ್ಬಿಂಗ್!
3. ಇಂಗ್ಲಿಷ್‌ಗೆ ಡಬ್ ಮಾಡುವಾಗ ತಾಂತ್ರಿಕವಾಗಿ ಮತ್ತು ಕ್ರಿಯೇಟಿವ್ ಆಗಿ ಸಾಕಷ್ಟುಸವಾಲುಗಳನ್ನು ಎದುರಿಸಿದ್ದೇವೆ. ಆ್ಯಕ್ಸೆಂಟ್ ಸವಾಲನ್ನು ಸುದೀಪ್ ತುಂಬಾ ಅದ್ಭುತವಾಗಿ ನಿಭಾಯಿಸಿದ್ದಾರೆ. ನಿರ್ದೇಶಕನಾಗಿ ನನಗೆ ಎದುರಾಗಿದ್ದು, ಕನ್ನಡ ಅವತರಿಣಿಕೆಯಲ್ಲಿ ಬರುವ ಗಾದೆ ಮಾತುಗಳನ್ನು ಇಂಗ್ಲಿಷಿಗೆ ಹೇಗೆ ತೆಗೆದುಕೊಂಡು ಹೋಗುವುದು ಎನ್ನುವುದು. ಅವು ಇಂಗ್ಲಿಷ್‌ಗೆ ವರ್ಕ್ ಆಗಲ್ಲ. ಅಂಥ ಕಡೆ ಯಾವ ಸಂಭಾಷಣೆ ಬರಬೇಕು, ಇಂಡಿಯನ್ ಇಂಗ್ಲಿಷ್ ಆದರೂ ಅದನ್ನು ಪಾತ್ರಧಾರಿಯ ಬಳಿ ತೆರೆ ಮೇಲೆ ಹೇಗೆ ಮಾತನಾಡಿಸಬೇಕು ಎನ್ನುವ ಸವಾಲುಗಳನ್ನು ಈ ಚಿತ್ರದಲ್ಲಿ ಎದುರಿಸಿದ್ದೇನೆ.
Kichcha Sudeep ಹೀಗೂ ಮಾಡ್ತಾರಾ! ವಿಕ್ರಾಂತ್ ರೋಣ ತಂಡ ನೀಡಿದೆ ಹೊಸ ಸರ್ಪೈಸ್
4. ಬಿಡುಗಡೆ ದಿನಾಂಕವನ್ನು ಇನ್ನೂ ಪಕ್ಕಾ ಮಾಡಿಲ್ಲ. ಅದನ್ನು ನಿರ್ಮಾಪಕ ಜಾಕ್ ಮಂಜು ಅವರೇ ಹೇಳಬೇಕು. ಆದರೆ, ಏಕಕಾಲಕ್ಕೆ ಎಲ್ಲಾ ಭಾಷೆಗಳಲ್ಲೂ ಚಿತ್ರವನ್ನು ಬಿಡುಗಡೆ ಮಾಡುತ್ತೇವೆ.
