Asianet Suvarna News Asianet Suvarna News

ನಟ ಭೈರವ ಮೊಮ್ಮಗ ನಟ ಭಯಂಕರ: ವಜ್ರಮುನಿ ಹೆಸರು ಉಳಿಸುತ್ತಾನೆ ಈ ಹುಡುಗ!

ವಜ್ರಮುನಿ ಅವರ ಹಾಗೆ ಬೆಚ್ಚಿ ಬೀಳಿಸೋ ಡೈಲಾಗ್ ಹೇಳೋ ಈ ಹುಡುಗ ವಜ್ರಮುನಿ ಅವರ ಮೊಮ್ಮಗ. ಇವನ ಡೈಲಾಗ್ ಡೆಲೆವರಿಯನ್ನ ನೋಡಿದ್ರೆ ಒಂದ್ ರೀರಿ ಮರಿ ಪ್ರಚಂಡ ರಾವಣನ ಹಾಗೆ ಕಾಣಿಸ್ತಾನೆ. 

kannada veteran actor vajramuni grandson akarsh super talent story gvd
Author
First Published Nov 27, 2023, 8:07 PM IST

ವಜ್ರಮುನಿ ಬಗ್ಗೆ ಎಷ್ಟ್ ಹೇಳಿದ್ರು ಅದು ಕಮ್ಮಿನೆ. ಇವರ ಆರಭಟದ ಅಭಿನಯ ಎಂದೂ ಮರೆಯಲು ಸಾಧ್ಯವಿಲ್ಲ ಇವರಂತೆ ನಟಿಸೋ ಮತ್ತೊಬ್ಬ ಕಲಾವಿಧ ಖಳನಟ ಕನ್ನಡಲ್ಲಿ ಮತ್ತೊಬ್ಬ ಬಂದಿಲ್ಲ. ಆದ್ರೆ ಈ ನಟ ಭೈರವನ ಹೆಸರನ್ನೂ ಉಳಿಸೋಕೆ ಅವರಿಗಿಂತ ಅದ್ಭುತ ನಟ ನಾನು ಅಂತ ಹೇಳೋಕೆ ವಜ್ರಮುನಿ ಅವರ ಮೊಮ್ಮಗ ರೆಡಿಯಾಗಿದ್ದಾನೆ.. ಇವನ ಬಾಯಿಂದ ಬರೋ ಡೈಲಾಗ್ ಗಳನ್ನ ಕೇಳಿದ್ರೆ ಅಬ್ಬಬ್ಬಾ ಅನ್ನಿಸುತ್ತೆ. 

ಹೀಗೆ ವಜ್ರಮುನಿ ಅವರ ಹಾಗೆ ಬೆಚ್ಚಿ ಬೀಳಿಸೋ ಡೈಲಾಗ್ ಹೇಳೋ ಈ ಹುಡುಗ ವಜ್ರಮುನಿ ಅವರ ಮೊಮ್ಮಗ. ಇವನ ಡೈಲಾಗ್ ಡೆಲೆವರಿಯನ್ನ ನೋಡಿದ್ರೆ ಒಂದ್ ರೀರಿ ಮರಿ ಪ್ರಚಂಡ ರಾವಣನ ಹಾಗೆ ಕಾಣಿಸ್ತಾನೆ. ವಜ್ರಮುನಿ ಅವರ ಪುತ್ತಳಿ ಅನಾವರಣ ಕಾರ್ಯಕ್ರಮಕ್ಕೆ ಈ ಪುಟ್ಟ ಪೋರ ಆಕರ್ಷ್ ಕೂಡ ಬಂದಿದ್ದ. ಶಿವಣ್ಣನ ಎದುರು ವಜ್ರಮುನಿ ಅವರ ಪ್ರಚಂಡ ರಾವಣ ನಾಟಕದ ಡೈಲಾಗ್ ಹಂಗೆ ಬಿಟ್ಟಾ ನೋಡಿ. ಶಿವಣ್ಣ ಫುಲ್ ತ್ರಿಲ್ ಆಗಿ ಎದ್ದು ನಿಂತು ಈ ಹುಡುಗನ್ನ ಅಪ್ಪಿ ಮುದ್ದಾಡ್ಬಿಟ್ರು. 

ನಟ ಭಯಂಕರ ವಜ್ರಮುನಿ ಅವರ ಮೊಮ್ಮಗ ಆಕರ್ಷ್ ವಜ್ರಮುನಿ ಡೈಲಾಗ್ ಹೇಳಿದ್ದನ್ನ ಕೇಳಿ ಖುಷಿ ಪಟ್ಟ ಶಿವಣ್ಣ ಆಕರ್ಷ್ಗೆ ಅಧ್ಬುತ ಭವಿಷ್ಯ ಇದೆ ಅಂತ ಭವಿಷ್ಯ ನುಡಿದ್ರು. ಆಕರ್ಶ್ ವಜ್ರಮುನಿಗೆ ಕಲೆ ರಕ್ತಗತವಾಗೆ ಬಂದಿದೆ. ಅದರಲ್ಲು ವಜ್ರಮುನಿ ಮೊಮ್ಮಗ ಅಂದ್ಮೇಲೆ ಆ ಗಾಂಭರ್ಯದ ನಟನೆ ಇದ್ದೇ ಇರುತ್ತೆ. ಈಗ ಆಕರ್ಶ್ ಟ್ಯಾಲೆಂಟ್ ನೋಡಿ ಈತ ದೊಡ್ಡ ಕಲಾವಿಧ ಆಗ್ತಾನೆ ಅಂತ ಶಿವಣ್ಣನೇ ಭವಿಷ್ಯ ನುಡಿದಿದ್ದಾರೆ. ಸಧ್ಯ ಪ್ರೈಮರಿ ಸ್ಕೂಲ್ ಓದುತ್ತಿರೋ ಆಕರ್ಶ್ ಎಲ್ಲರ ಆಕರ್ಷಣೆ ಆಗುತ್ತಿದ್ದಾನೆ. 

Follow Us:
Download App:
  • android
  • ios