ವಿದ್ಯಾಭ್ಯಾಸದ ಜೊತೆಗೆ ಸಿನಿಮಾ ಕ್ಷೇತ್ರದಲ್ಲಿ ಬ್ಯುಸಿಯಾಗಿರುವ ನಟಿ ಶ್ರೀಲೀಲಾ, ತಮ್ಮ ಸಿನಿ ಜರ್ನಿಗೆ ತಾತ ಸಿಗ್ನಲ್ ಕೊಟ್ಟಿದ್ದು ಎಂದು ಹೇಳಿದ್ದಾರೆ.
'ಕಿಸ್' (Kiss) ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಶ್ರೀಲೀಲಾ (Sreeleela) ಅಚಾನಕ್ಕಾಗಿ ಮನೋರಂಜನೆ ಕ್ಷೇತ್ರಕ್ಕೆ ಬಂದಿದ್ದು ಎಂದು ಹೇಳಿಕೊಂಡಿದ್ದಾರೆ. 10 ನೇ ತರಗತಿಯಲ್ಲಿದ್ದಾಗ ಬಣ್ಣದ ಜರ್ನಿ ಆರಂಭಿಸಿದ ಶ್ರೀಲೀಲಾ ಈಗ ಎಂಬಿಬಿಎಸ್ (MBBS) ಮಾಡುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ತೆಲುಗು ಮತ್ತು ತಮಿಳು ಸಿನಿಮಾಗಳನ್ನು ಕೂಡ ಆಯ್ಕೆ ಮಾಡಿಕೊಂಡಿದ್ದಾರೆ. ಸೈಲೆಂಟ್ ಆಗಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿರುವ ಲೀಲಾ ಮಾತುಗಳಿದು...
'ತುಂಬಾ ತಾಳ್ಮೆಯಿಂದ ಜೀವನ ಮಾಡುತ್ತೀನಿ. ನಾನು ಬಾಲ್ಯದಿಂದಲೂ ಹೀಗೆ ಇರುವುದು. ತಾಳ್ಮೆ (Patience) ನನ್ನ ದೊಡ್ಡ ಶಕ್ತಿ. ಅನೇಕ ಕಲಾವಿದರು ಹೇಳಿರುವುದನ್ನು ಕೇಳಿದ್ದೀನಿ, ನನಗೂ ಕೂಡ ಹಾಗೆ ಅಪ್ಪಿತಪ್ಪಿ ಚಿತ್ರರಂಗಕ್ಕೆ ಬಂದವಳು. ಹೀಗಾಗಿ ನನ್ನ ಮುಂದಿನ ಕೆಲಸಗಳನ್ನು ಪ್ಲ್ಯಾನ್ ಮಾಡುವುದಿಲ್ಲ flowನಲ್ಲಿ ನಡೆಸಿಕೊಂಡು ಹೋಗುತ್ತೀನಿ' ಎಂದು ಶ್ರೀಲೀಲಾ ಹೇಳಿದ್ದಾರೆ.

ಪರ್ಸನಲ್ ಲೈಫ್‌ನ ಲೈಮ್‌ಲೈಟ್‌ನಿಂದ ದೂರವಿಟ್ಟಿರುವ ಶ್ರೀಲೀಲಾ ತಮ್ಮ ಜರ್ನಿ ನೆನಪಿಸಿಕೊಂಡಿದ್ದಾರೆ. 'ನನ್ನ ಫ್ಯಾಮಿಲಿಯಲ್ಲಿ ಒಂದ ಫಂಕ್ಷನ್ ನಡೆಯಿತ್ತು ಆಗ ಕ್ಲಿಕ್ ಮಾಡಿದ ಫೋಟೋ ವೈರಲ್ ಆಗಿತ್ತು. ಈಗ ಸಿನಿಮ್ಯಾಟೋಗ್ರಾಫರ್ ಆಗಿ ಗುರುತಿಸಿಕೊಂಡಿರುವ ಭುವನ ಗೌಡ (Bhuvan Gowda) ಅವರು ನನ್ನ ಫೋಟೋ ಕ್ಲಿಕ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡರು ಅದನ್ನು ಅರ್ಜುನ್ ಅಣ್ಣ ನೋಡಿ ನನ್ನ ಆಯ್ಕೆ ಮಾಡಿದರು. ನನ್ನ ತಾಯಿಯನ್ನು ಸಂಪರ್ಕಿಸಿ ನಮ್ಮ ಮನೆಗೆ ಬಂದರು. ಮನೆಗೆ ಯಾರೇ ಅತಿಥಿಗಳು ಬಂದರೂ ನಾನು ಮನೋರಂಜನೆ ನೀಡುತ್ತಿದ್ದೆ ಹೀಗಾಗಿ ಅರ್ಜುನ್ ಅಣ್ಣ ಮನೆಗೆ ಬಂದಾಗ ನಾನು ಡ್ಯಾನ್ಸ್ ಮಾಡಿದೆ, ಹಾಡು ಹಾಡಿದೆ ಹಾಗೆ ಕೆಲವೊಂದು ಜೋಕ್ ಹೇಳಿ ತಮಾಷೆ ಮಾಡಿದೆ. ಮನೋರಂಜನೆ ನೀಡುವ ಪ್ಯಾಕೆಜ್ ನಾನು. ಈ ಕಾರಣಕ್ಕೆ ಅರ್ಜುನ್ ಅಣ್ಣ ನನ್ನನ್ನು ಕಿಸ್ ಚಿತ್ರಕ್ಕೆ ಆಯ್ಕೆ ಮಾಡಿದರು' ಎಂದು ಶ್ರೀಲೀಲಾ ಖಾಸಗಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಕುಟುಂಬಸ್ಥರ ರಿಯಾಕ್ಷನ್:
'ಕೆಲವರಿಗೆ ನಾನು ಸಿನಿಮಾ ಆಯ್ಕೆ ಮಾಡಿಕೊಳ್ಳುವುದು ಇಷ್ಟ ಇರಲಿಲ್ಲ, ಇನ್ನೂ ಕೆಲವರು ಈ ರೀತಿ ಅವಕಾಶ ಎಲ್ಲರಿಗೂ ಸಿಗುವುದಿಲ್ಲ ಎಂದು ಹೇಳುತ್ತಿದ್ದರು. ನಿಜ ಹೇಳಬೇಕು ಅಂದ್ರೆ ನನ್ನ ತಾಯಿ ಓದುವಾಗಲೂ ಅವರಿಗೆ ಸಿನಿಮಾ ಆಫರ್ ಬಂದಿತ್ತು ಆದರೆ ಅವರು ರಿಜೆಕ್ಟ್ ಮಾಡಿದ್ದರಂತೆ. ನನಗೆ ಆಫರ್ ಬಂದಾಗ ನನ್ನ ತಾತ ಅವರ ಜೊತೆ ಮಾತನಾಡಿ ಅನುಮತಿ ಪಡೆದುಕೊಂಡೆ. ಜೀವನದಲ್ಲಿ ಎಲ್ಲಾನೂ ಸಮವಾಗಿ ನಿಭಾಯಿಸಬೇಕು ಎಂದು ಸಲಹೆ ಕೊಟ್ಟರು' ಎಂದಿದ್ದಾರೆ ಲೀಲಾ.
ಮದುವೆಗೂ ಮುನ್ನವೇ ನಟಿ ಶ್ರೀಲೀಲಾ ಮಡಿಲಲ್ಲಿ ಕಂದಮ್ಮ; 'By two ಲವ್' ಪೋಸ್ಟರ್ ರಿಲೀಸ್!
ಶೂಟಿಂಗ್ ದಿನಗಳು:
'10ನೇ ಕ್ಲಾಸ್‌ನಲ್ಲಿ ಚಿತ್ರೀಕರಣ ಮಾಡುವಾಗ ನನಗೆ ಈ ಸಿನಿಮಾ ಆಗಲಿ ಅಥವಾ ನಾನು ಏನು ಮಾಡುತ್ತಿದ್ದೀನಿ ಅನ್ನೋ ಐಡಿಯಾ ಇರಲಿಲ್ಲ. ವಿದ್ಯಾರ್ಥಿನಿ ಆಗಿರುವುದರಿಂದ ನನಗೆ ದಿನಗಳು ಪ್ಯಾಕ್ ಆಗಿರುತ್ತಿತ್ತು. ಸ್ಕೂಲ್ ಮುಗಿಸಿಕೊಂಡು ನಾನು ಡ್ಯಾನ್ಸ್ ಕ್ಲಾಸ್ ಹೋಗುತ್ತಿದ್ದೆ, ವೀಣೆ ಕಲಿಯುತ್ತಿದ್ದೆ ಮತ್ತು ಸ್ವಿಮ್ಮಿಂಗ್ ಮಾಡುತ್ತಿದ್ದೆ. ಚಿತ್ರಮಂದಿರಗಳಲ್ಲಿ ನಾನು ಸಿನಿಮಾ ನೋಡಿಲ್ಲ ಆದರೆ ನನಗೆ ಗೊತ್ತಿರುವುದು ಒಂದೇ ನಟಿ ಮಾಧುರಿ ದೀಕ್ಷಿತ್ (Madhuri Dixit), ಅದು ಅವರು ಡ್ಯಾನ್ಸರ್ ಆಗಿರುವುದಕ್ಕೆ' ಎಂದು ಲೀಲಾ ಮಾತನಾಡಿದ್ದಾರೆ.
ಲೀಲಾ ಸಿನಿಮಾಗಳು:
'ಮೂರು ವರ್ಷಗಳ ಹಿಂದೆ ನಾನು ಚಿತ್ರಮಂದಿರ ಒಳಗೆ ನಡೆದುಕೊಂಡು ಹೋಗುವಾಗ ಒಂದು ಸೈಡ್ ಕಿಸ್ ಚಿತ್ರದ ಪೋಸ್ಟರ್ ಇರುತ್ತಿತ್ತು ಮತ್ತೊಂದು ಕಡೆ ಭರಾಟೆ (Bharate) ಚಿತ್ರದ ಪೋಸ್ಟರ್. ಎಲ್ಲಿ ನೋಡರೂ ನಾನೇ ಕಾಣಿಸುತ್ತಿದ್ದೆ. ತೆಲುಗು ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುವೆ ಆದರೆ ನಮ್ಮ ಕನ್ನಡ ಭಾಷೆ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ರಿಯಲ್ ಲೈಫ್‌ನಲ್ಲಿ ನಾವಲ್ಲದ ವ್ಯಕ್ತಿಗಳಂತಿರುವ ಪಾತ್ರಗಳನ್ನು ಆಯ್ಕೆ ಮಾಡಿಕೊಂಡು ಸಿನಿಮಾ ಮಾಡುತ್ತಾರೆ ಕೆಲವರು. ಆದರೆ ನನ್ನ ನನಗೆ ಜೀವನ ಅರ್ಥ ಮಾಡಿಸಿದೆ. ಮುಂಚೆ ನಾನು ಮನೆಯಲ್ಲಿ ನಾಲ್ಕು ಜನರ ಮುಂದೆ ಮಾಡುತ್ತಿದ್ದೆ ಈಗ ನೂರಾರು ಜನರ ಮುಂದೆ ಮಾಡುತ್ತಿರುವೆ' ಎಂದಿದ್ದಾರೆ.
ಕನ್ನಡದ ಹುಡ್ಗಿ ಈಗ ಚಿನ್ನದ ರಾಯಭಾರಿ; ಬಿಟೌನ್‌ನಲ್ಲಿ 'ಭರಾಟೆ' ಹುಡುಗಿ
ತಾಯಿ ಬಗ್ಗೆ:
'ನನ್ನ ತಾಯಿ ಸ್ವರ್ಣಲತಾ ನನ್ನ ಜೀವನ. ಅವರೇ ನನ್ನ ಬ್ಯಾಕ್ ಬೋನ್. ಜೀವನದಲ್ಲಿ ಫೋಕಸ್ ಆಗಿರಬೇಕು ಪ್ರಿನ್ಸಿಪಲ್‌ಗಳು ಇರಬೇಕು ಚಲದಿಂದ ಗಿಟ್ಟಿಸಿಕೊಳ್ಳಬೇಕು ಎಂದು ಹೇಳಿಕೊಟ್ಟಿದ್ದಾರೆ. ಮೆಡಿಕಲ್ ಮಾಡಿದ ನಂತರ ಮದುವೆಯಾದರು. ಸುಮಾರು 15 ವರ್ಷಗಳ ಕಾಲ ಇದನ್ನು ವೃತ್ತಿಯಾಗಿ ಆಯ್ಕೆ ಮಾಡಿಕೊಂಡಿರಲಿಲ್ಲ. ಈಗ ಬೆಸ್ಟ್ ಡಾಕ್ಟರ್ ಆಗಿ ಗುರುತಿಸಿಕೊಂಡಿದ್ದಾರೆ. ಪರ್ಸನಲ್ ಮತ್ತು ಪ್ರೊಫೆಷನಲ್ ಲೈಫ್ ಹೇಗೆ ಬ್ಯಾಲೆನ್ಸ್ ಮಾಡಬೇಕು ಎಂದು ಹೇಳಿಕೊಟ್ಟಿದ್ದಾರೆ'
