ಕನ್ನಡ ಚಿತ್ರರಂಗದ ಅದ್ಭುತ ಗಾಯಕಿ, ನಟ ರವಿಶಂಕರ್ ಗೌಡ ಪತ್ನಿ ಸಂಗೀತಾ ಗುರುರಾಜ್‌ಗೆ ಕೊರೋನಾ ಸೋಂಕು ತಗುಲಿ, ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಕೊರೋನಾ ಎರಡನೇ ಅಲೆ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತಿದೆ, ಪಾಸಿಟಿವ್ ಎಂದು ತಿಳಿದು ಬಂದಾಗ ಏನು ಮಾಡಬೇಕು ಎಂದು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 

ಫೇಮಸ್ ಇನ್ ಸರ್ಜರಿ ಆ್ಯಂಡ್ ಭರ್ಜರಿಯ ಡಾ.ವಿಠ್ಠಲ್‌ ರಾವ್‌ ಮನ ಕದ್ದವರು ಇವರು...! 

ಸಂಗೀತ ಮಾತು: 

'ಹೌದು..ನಾನು ಕೋವಿಡ್19 ಪಾಸಿಟಿವ್ ಆಗಿದ್ದೆ, ಗುಣಮುಖಳಾಗಿರುವೆ. ಕೊರೋನಾ ಎಂದು ಹೇಳಿಕೊಳ್ಳಲು ಅವಮಾನ ಅಥವಾ ಲಾಭ ಏನೂ ಇಲ್ಲ. ನಾನು ಸದಾ ಮನೆಯಲ್ಲಿಯೇ ಇದ್ದರೂ, ಕೊರೋನಾ ಹೇಗೆ ಬಂತು ಎಂಬುದು ನನಗೂ ಗೊತ್ತಿಲ್ಲ. ಅದಕ್ಕೆ ಇದರ ಬಗ್ಗೆ ನಿಮ್ಮ ಜೊತೆ ಚರ್ಚೆ ಮಾಡುತ್ತೇನೆ' 

ಕೊರೋನಾ ಬಂದರೆ ಏನು ಮಾಡಬೇಕು?
'ನೀವು ಪ್ಯಾನಿಕ್ ಆಗುವುದನ್ನು ಬಿಡಬೇಕು. ರಿಪೋರ್ಟ್ ಬರುವ ಮುನ್ನವೇ ಆಲೋಚನೆಗಳಿಗೆ ಒಳಗಾಗಬೇಡಿ. ನಿಮಗೆ ನಿಮ್ಮ ದೇಹದ ಬಗ್ಗೆ ಗೊತ್ತು, ನಿಮ್ಮ ದೇಹ ಕೆಲವೊಂದು ಸೂಚನೆಗಳನ್ನು ನೀಡುತ್ತದೆ. ಐಸೋಲೇಟ್ ಆಗಿ.  ವೈರಲ್ ಜ್ವರ ಇರಬೇಕು ಹೋಗುತ್ತೆ, ಎಂದು ನಿರ್ಲಕ್ಷ್ಯ ಮಾಡಬೇಡಿ. ನಿಮ್ಮಿಂದ ನಿಮ್ಮ ಕುಟುಂಬದವರಿಗೆ ತೊಂದರೆ ಆಗಬಾರದು ಎಂಬ ಯೋಚನೆ ಇದ್ದರೆ ಚೈನ್ ಬ್ರೇಕ್ ಮಾಡಬೇಕು. ಹಾಗಾಗಿ ಐಸೋಲೇಟ್ ಆಗಿ. ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ. ದಯವಿಟ್ಟು ವಾಟ್ಸಪ್‌ನಿಂದ ಬರುವ ಮೆಸೇಜ್‌ಗಳನ್ನು ನಂಬಬೇಡಿ. ಪ್ರತಿಯೊಬ್ಬರ ದೇಹವು ಒಂದೊಂದು ರೀತಿ ಪ್ರತಿಕ್ರಿಯೆ ನೀಡುತ್ತದೆ. ನನ್ನ ವೈದ್ಯರು ಅರವಿಂದ್. ನನ್ನ ಇಡೀ ಕುಟುಂಬದ ಆರೋಗ್ಯ ನೋಡಿಕೊಂಡರು. ವಿಡಿಯೋ ಕಾಲ್ ಮಾಡಿ, ಕುಟುಂಬದವರ ಜೊತೆ ಮಾತನಾಡಿ. ನನ್ನ ರೂಮ್ ಬಾಗಿಲು ಮುಚ್ಚಿಕೊಂಡು ನನ್ನ ಪತಿ ರವಿಶಂಕರ್ ಜೊತೆ ಮಾತನಾಡುತ್ತಿದ್ದೆ. ಇದೊಂದು ಅಭ್ಯಾಸವಾಗಿತ್ತು. ನನ್ನ ಕೆಲಸದ ಬಗ್ಗೆ ಹೆಚ್ಚಿನ ಗಮನ ಕೊಟ್ಟೆ. ಈ ಕಾರಣಕ್ಕೆ 17 ದಿನ ಕಳೆದಿದ್ದು ಹೇಗೆ ಎಂದು ಗೊತ್ತಾಗುವುದಿಲ್ಲ. ನೀವು ಧೈರ್ಯವಾಗಿರಿ. ಈ ಕಷ್ಟದ ಸಮಯವನ್ನು ಎದುರಿಸಬಹುದು,' ಎಂದು ಸಂಗೀತಾ ಬರೆದಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona