IPL ಅಂದ್ರೆ ಹಬ್ಬ IPL ಅಂದ್ರೆ ಆರ್‌ಸಿಬಿ.  ಎಲ್ಲ ಕ್ರಿಕೆಟಿಗರನ್ನು ಒಟ್ಟಾಗಿ ನೋಡುವುದೇ ಒಂದು ಮಜಾ. ಅದರಲ್ಲೂ ಆರ್‌ಸಿಬಿಗೆ ಮಾತ್ರ ಸಪರೇಟ್‌ ಫ್ಯಾನ್ಸ್ ಬೇಸ್‌ ಇದ್ದಾರೆ. ಗೆದ್ದರೂ ನೀನೇ ಬೇಕು, ಸೋತರೂ ನೀನೇ ಬೇಕು ಎಂದು ಪ್ರೇಮ ಕವಿತೆ ಹೇಳಿ ಹೃದಯದಲ್ಲಿಟ್ಟು ಕೊಂಡಿರುತ್ತಾರೆ. 

IPL 2020: ಚಹಾಲ್ ಸ್ಪಿನ್ ಮೋಡಿಗೆ SRH ತಬ್ಬಿಬ್ಬು, RCBಗೆ ಸಿಕ್ತು ಗೆಲುವು! 

ಮೊದಲ ಮ್ಯಾಚ್‌ ಗೆದ್ದು, ಅಭಿಮಾನಿಗಳಿಗೆ ಅರ್ಪಣೆ ಮಾಡಿದ ಆರ್‌ಸಿಬಿ ಎರಡನೇ ಮ್ಯಾಚ್‌ನಲ್ಲಿ ಹೀನಾಯವಾದ ಸೋಲು ಎದುರಿಸಿದೆ. ಅದರಲ್ಲೂ ಕ್ಯಾಪ್ಟನ್‌ ಕ್ಯಾಚ್‌ ಬಿಟ್ಟಿದ್ದು ನೋಡಿ ಕ್ರಿಕೆಟ್‌ ಪ್ರೇಮಿಗಳು ಮೌನವಾಗಿದ್ದಾರೆ. ಕನ್ನಡ ಚಿತ್ರರಂಗದ ಹೆಸರಾಂತ ಗಾಯಕ ರಾಜೇಶ್‌ ಕೃಷ್ಣನ್‌ ಕೂಡ ಟ್ವೀಟ್‌ ಮಾಡುವಂತೆ ಮಾಡಿದೆ ನಿನ್ನೆಯ(ಸೆಪ್ಟೆಂಬರ್ 24) ಪಂದ್ಯ.

ಯುವರಾಜ್‌ ಅಥವಾ ಶಿವಮ್?
ಆರ್‌ಸಿಬಿ ತಂಡದ ಆಲ್‌ ರೌಂಡರ್‌ ಆಗಿರುವ ಶಿವಮ್ ದುಬೆ ಬಗ್ಗೆ ರಾಜೇಶ್‌ ಕಷ್ಣನ್ ಟ್ವೀಟ್ ಮಾಡಿದ್ದಾರೆ. 'ಶಿವಮ್ ದುಬೆ ನೋಡಲು ಸ್ವಲ್ಪ ಯಂಗ್ ಯುವರಾಜ್‌ ಸಿಂಗ್. ಇದು ಬ್ಯಾಟಿಂಗ್ ಮಾಡುವಾಗ ಮಾತ್ರ. ನಾನು ಲುಕ್ಸ್‌ ಬಗ್ಗೆ ಮಾತ್ರ ಹೇಳುತ್ತಿರುವುದು,' ಎಂದು ಟ್ವೀಟ್ ಮಾಡಿದ್ದಾರೆ.

ಇನ್ನು 136 ರನ್‌ ಬಾರಿಸುವ ಮೂಲಕ ಎಲ್ಲರೂ ಮನೆ ಮಾತಾಗಿರುವ ಕರ್ನಾಟಕದ ಹುಡುಗ ಕೆ ಎಲ್‌ ರಾಹುಲ್‌ ಬಗ್ಗೆಯೂ ಟ್ವೀಟ್ ಮಾಡಿದ್ದಾರೆ. 'ಕೆ ಎಲ್‌ ರಾಹುಲ್ ಒಬ್ಬನೇ ಮಾಡಿದ ಸ್ಕೋರನ್ನೂ ದಾಟಲು ಆಗಲಿಲ್ಲ, ಎಂದು ಬೇಸರದ ಎಮೋಜಿ ಶೇರ್ ಮಾಡಿಕೊಂಡಿದ್ದಾರೆ.

IPL 2020: ಶತಕ ಸಿಡಿಸಿ ದಾಖಲೆ ಬರೆದ ಕೆಎಲ್ ರಾಹುಲ್! 

ಟ್ರೋಲ್ ಪೇಜ್‌ ಹಾವಳಿ:
ಮ್ಯಾಚ್‌ ಪ್ರತೀ ಕ್ಷಣದ ಅಪ್ಡೇಟ್ಸ್ ಶೇರ್ ಮಾಡುವ ಟ್ರೋಲ್ ಪೇಜ್‌ಗಳು ರಾಹುಲ್‌ನನ್ನು ಕೊಂಡಾಡಿವೆ. ಆದರೆ, ಕೆಲವು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ಆರ್‌ಸಿಬಿ ತಂಡದಲ್ಲಿದ್ದಾಗ ಇಲ್ಲದ ಹುಮ್ಮಸನ್ನು ಈಗ ನೋಡಿ ಶಾಕ್ ಆಗಿದ್ದಾರೆ. ಅಲ್ಲದೇ ನಿನ್ನೆ ಗುರುವಾರವಾದ ಕಾರಣ ಆರ್‌ಸಿಬಿ ಎರಡನೇ ಮ್ಯಾಚ್ನ್ನೂ ಸಾಯಿ ಬಾಬ/ ರಾಘವೇಂದ್ರ ಸ್ವಾಮಿಗೆ ಅರ್ಪಿಸಿದ್ದಾರೆ, ಎಂದೂ ಹೇಳಿದ್ದಾರೆ.