ದುಬೈ(ಸೆ.24): ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಅಬ್ಬರಿಸಿದ ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕ ಕೆಎಲ್ ರಾಹುಲ್ ಆಕರ್ಷಕ ಶತಕ ಸಿಡಿಸಿದ್ದಾರೆ. ಈ ಮೂಲಕ 13ನೇ ಐಪಿಎಲ್ ಟೂರ್ನಿ ಮೊದಲ ಸೆಂಚುರಿ ಸಿಡಿಸಿದ ಹೆಗ್ಗಳಿಕಿಗೆ ರಾಹುಲ್ ಪಾತ್ರರಾಗಿದ್ದಾರೆ. 

ರಾಹುಲ್ 63 ಎಸೆತದಲ್ಲಿ ಸೆಂಚುರಿ ಪೂರೈಸಿದರು. ಪಂಜಾಬ್ ತಂಡದ ಇತರ ಬ್ಯಾಟ್ಸ್‌ಮನ್‌ಗಳು ಆರ್‌ಸಿಬಿ ದಾಳಿಗೆ ತತ್ತರಿಸಿದರೆ ರಾಹುಲ್ ಮಾತ್ರ ಉತ್ತಮ ಪ್ರದರ್ಶನ ನೀಡಿದರು. ಈ ಮೂಲಕ ರಾಹುಲ್ ಐಪಿಎಲ್ ಟೂರ್ನಿಯ 2ನೇ ಶತಕ ದಾಖಲಿಸಿದರು. ಐಪಿಎಲ್ ಟೂರ್ನಿಯಲ್ಲಿ ಭಾರತೀಯ ಬ್ಯಾಟ್ಸ್‌ಮನ್ ಸಿಡಿಸಿದ ವೈಯುಕ್ತಿ ಗರಿಷ್ಠ ಮೊತ್ತ ಅನ್ನೋ ದಾಖಲೆಗೆ ರಾಹುಲ್ ಪಾತ್ರರಾಗಿದ್ದಾರೆ. 

ಅಂತಿಮ 4 ಓವರ್‌ನಲ್ಲಿ ಪಂಜಾಬ್ ಬ್ಯಾಟಿಂಗ್ ಕಂಡು ಆರ್‌ಸಿಬಿ ತಬ್ಬಿಬ್ಬಾಗಿದೆ. ಕಾರಣ ರಾಹುಲ್ ಸಿಕ್ಸರ್ ಅಬ್ಬರಕ್ಕೆ ಅಂತಿಮ 4 ಓವರ್‌ಗಳಲ್ಲಿ ಆರ್‌ಸಿಬಿ 74 ರನ್ ಬಿಟ್ಟುಕೊಟ್ಟಿದೆ.

IPL ಟೂರ್ನಿಯಲ್ಲಿ ವೈಯುಕ್ತಿಕ ಗರಿಷ್ಠ ಮೊತ್ತ
ಕ್ರಿಸ್ ಗೇಲ್ 175*
ಬ್ರೆಂಡನ್ ಮೆಕಲಂ 158*
ಎಬಿ ಡಿವಿಲಿಯರ್ಸ್ 133*
ಕೆಎಲ್ ರಾಹುಲ್ 132*