ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ವಾಸುಕಿ ವೈಭವ್; ಗುಟ್ಟು ಬಿಟ್ಟುಕೊಟ್ಟ ನಟಿ ತಾರಾ!
ವಾಸುಕಿ ವೈಭವ್ ಮದುವೆ ಬಗ್ಗೆ ರಿವೀಲ್ ಮಾಡಿದ ನಟಿ ತಾರಾ ಅನುರಾಧ. ದಯವಿಟ್ಟು ಹೇಳ್ಬೇಡಿ ಎಂದು ಮನವಿ ಮಾಡಿಕೊಂಡ ನಟ....
ಕನ್ನಡ ಚಿತ್ರರಂಗದ ಅದ್ಭುತ ಸಂಗೀತ ಸಂಯೋಜಕ ವಾಸುಕಿ ವೈಭವ್ ಇದೇ ತಿಂಗಳು ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಸಖತ್ ಸೀಕ್ರೆಟ್ ಆಗಿಟ್ಟಿದ್ದ ವಾಸುಕಿ ಮದುವೆ ವಿಚಾರವನ್ನು ನಟಿ ತಾರಾ ರಿವೀಲ್ ಮಾಡಿದ್ದಾರೆ. ದಯವಿಟ್ಟು ಎಡಿಟ್ ಮಾಡಿ ಎಂದು ಮನವಿ ಮಾಡಿಕೊಂಡರೂ ಪ್ರಸಾರ ಮಾಡಿದ ಆಂಕರ್ ಅನುಶ್ರೀ....
ಹೌದು! ಆಂಕರ್ ಅನುಶ್ರೀ ಯುಟ್ಯೂಬ್ ಚಾನೆಲ್‌ನಲ್ಲಿ ಟಗರು ಪಲ್ಯ ಸಿನಿಮಾ ಪ್ರಚಾರ ಮಾಡಲು ಇಡೀ ತಂಡ ಆಗಮಿಸಿತ್ತು. ಡಾಲಿ ಧನಂಜಯ್, ನಾಗಭೂಷಣ್, ಅಮೃತಾ ಪ್ರೇಮ್, ತಾರಾ ಮತ್ತು ವಾಸುಕಿ ವೈಭವ್ ಭಾಗಿಯಾಗಿದ್ದರು. ವಾಸುಕಿ ಮದುವೆ ಗಂಡಿನ ಪಾತ್ರ ಮಾಡಿರುವ ಕಾರಣ ನೀವು ಮದುವೆಯಾಗುವ ಹುಡುಗಿ ಹೇಗಿರಬೇಕು ಎಂದು ಅನುಶ್ರೀ ಹಾಗೆ ಸುಮ್ಮನೆ ಪ್ರಶ್ನೆ ಮಾಡುತ್ತಾರೆ. ಪಕ್ಕದಲ್ಲಿದ್ದ ತಾರಾ ಮದುವೆ ಬಗ್ಗೆ ರಿವೀಲ್ ಮಾಡುತ್ತಾರೆ.
ರಾಣಾ ದಗ್ಗುಬಾಟಿ ನಿರ್ಮಾಣದ ಹೊಸ ಚಿತ್ರಕ್ಕೆ Vasuki Vaibhav ಸಂಗೀತ
ಮುಂದಿನ ತಿಂಗಳ ವಾಸುಕಿ ಮದುವೆ ಆಗುತ್ತಿದ್ದಾರೆ ಎಂದು ತಾರಾ ಹೇಳಿಬಿಡುತ್ತಾರೆ. ಅಯ್ಯೋ ಅಮ್ಮ ದಯವಿಟ್ಟು ಹೇಳ್ಬೇಡಿ ಯಾರಿಗೂ ಹೇಳಿಲ್ಲ ಯಾರಿಗೂ ಗೊತ್ತಿಲ್ಲ ಎಂದು ವಾಸುಕಿ ಹೇಳುತ್ತಾರೆ. ಅಯ್ಯೋ ಹೇಳ್ಬೇಡಿ ಅಂತ ಮೊದಲೇ ಹೇಳಬೇಕು ಅಲ್ಲ ಗೊತ್ತಿರಲಿಲ್ಲ ಇರಲಿ ಬಿಡಿ ಅನುಶ್ರೀ ಇದನ್ನು ಕಟ್ ಮಾಡಿ ಎನ್ನುತ್ತಾರೆ ತಾರಾ. ಇಲ್ಲ ಇಲ್ಲ ಖಂಡಿತಾ ಇಲ್ಲ ನಮ್ಮ ಚಾನೆಲ್‌ನಲ್ಲಿ ಇದು ಮೊದಲು ರಿವೀಲ್ ಆಗಬೇಕು ಎಂದು ಅನುಶ್ರೀ ಅದನ್ನು ಎಡಿಟ್ ಮಾಡಿಸದೇ ಅಪ್ಲೋಡ್ ಮಾಡುತ್ತಾರೆ.
ಅಲ್ಲಿಂದ ಶುರುವಾಯ್ತು ವಾಸುಕಿ ವೈಭವ್ ಮದುವೆ ವಿಚಾರ. ಕೆಲವು ಬಿಗ್ ಬಾಸ್ ಚಂದನ ಜೊತೆ ಮದುವೆ ಅಂತಾರೆ ಇನ್ನು ಕೆಲವರು ಬಾಲ್ಯ ಸ್ನೇಹಿತೆ ಜೊತೆ ಮದುವೆ ಅಂತಾರೆ. ಒಟ್ಟಾರೆ ವಾಸುಕಿ ಸಿಂಗಲ್ ಅಲ್ವೇ ಅಲ್ಲ. ಕೆಲವು ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ ನವೆಂಬರ್ 16ರಂದು ಮದುವೆ ನಿಶ್ಚಯವಾಗಿದೆ.
ವಾಸುಕಿ ವೈಭವ್ ರಿಯಲ್ ಆಗಿ ಹೇಗೆ ತಿಂತಾರೆ, ಫೋಟೋಗೆ ಹೇಗೆ ಪೋಸ್ ಕೊಡ್ತಾರೆ ನೋಡಿ!
2016ರಲ್ಲಿ ರಾಮ ರಾಮ ರೇ ಸಿನಿಮಾ ಮೂಲಕ ಸಂಗೀತ ನಿರ್ದೇಶಕನಾಗಿ ಜನಪ್ರಿಯತೆ ಪಡೆದ ವಾಸುಕಿ ವೈಭವ್ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿ ಸೀಸನ್ 7ರಲ್ಲಿ ಎರಡನೇ ರನ್ನರ್ ಅಪ್ ಸ್ಥಾನ ಪಡೆದರು. ಇದಾದ ಮೇಲೆ ಚೂರಿಕಟ್ಟೆ, ಸರಕಾರಿ ಹಿರಿಯ ಪ್ರಾರ್ಥಮಿಕ ಶಾಲೆ, ಒಂದಲ್ಲ ಎರಡಲ್ಲ, ಮುಂದಿನ ನಿಲ್ದಾಣ, ಕಥಾ ಸಂಗಮ, ಲಾ, ಫ್ರೆಂಚ್ ಬಿರಿಯಾನಿ, ಬಡವ ರಾಸ್ಕಲ್, ಹರಿಕಥೆ ಅಲ್ಲ ಗಿರಿಕಥೆ ಮತ್ತು ತತ್ಸಮ ತದ್ಭವ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ.