ವಿಶೇಷ ಪೋಸ್ಟರ್‌ ಬಿಡುಗಡೆ, ಕಾಮನ್‌ ಡಿಪಿ, ಹೊಸ ಚಿತ್ರಗಳ ಸುದ್ದಿ, ಶುಭಾಶಯಗಳ ಸುರಿಮಳೆ... ಹೀಗೆ ಹದಿನೈದು ದಿನ ಹಿಂದಿಂದಲೇ ಜಾಲತಾಣಗಳಲ್ಲಿ ಸೆಂಚುರಿ ಸ್ಟಾರ್‌ ಹವಾ ಶುರುವಾಗಿತ್ತು.

ಇದೀಗ ನಟ, ನಟಿಯರು, ನಿರ್ದೇಶಕರು ಸೇರಿದಂತೆ ಇಡೀ ಚಿತ್ರರಂಗ ಶಿವಣ್ಣನ ಹುಟ್ಟು ಹಬ್ಬಕ್ಕೆ ವಿವಿಧ ರೀತಿಯಲ್ಲಿ ಶುಭ ಕೋರಿದ್ದಾರೆ. ಸೋಷಿಯಲ್‌ ಮೀಡಿಯಾಗಳಲ್ಲಿ ಸಕ್ರಿಯವಾಗಿರುವ ಶಿವಣ್ಣನ ಅಭಿಮಾನಿಗಳು ಕಳೆದ 15 ದಿನಗಳಿಂದಲೇ ಹುಟ್ಟು ಹಬ್ಬದ ಅಭಿಯಾನ ಆರಂಭಿಸಿದ್ದರು. ಕಾಮನ್‌ ಡಿಪಿ, ವಿಶೇಷ ಪೋಸ್ಟರ್‌ಗಳನ್ನು ಬಿಡುಗಡೆ ಮಾಡುವ ಮೂಲಕ ತಮ್ಮ ನೆಚ್ಚಿನ ನಟನ 58ನೇ ಜನ್ಮದಿನವನ್ನು ಕಲರ್‌ ಫುಲ್‌ ಆಚರಣೆಗೆ ಕಾರಣಕರ್ತರಾದರು.

ಜು. 12 ರಂದು ರಾತ್ರಿ 12 ಗಂಟೆಗೆ ಕೇಕ್‌ ಕತ್ತರಿಸುವ ಮೂಲಕ ಸರಳವಾಗಿ ತಮ್ಮ ಜನ್ಮದಿನವನ್ನು ಶಿವಣ್ಣ ಆಚರಿಸಿಕೊಂಡರು. ಮನೆಯಲ್ಲೇ ನಡೆದ ಈ ಕಾರ್ಯಕ್ರಮದಲ್ಲಿ ಗೀತಾ ಶಿವರಾಜ್‌ ಕುಮಾರ್‌, ಕೆ ಪಿ ಶ್ರೀಕಾಂತ್‌ ಸೇರಿದಂತೆ ಕೆಲವರೇ ಹಾಜರಿದ್ದರು.

 

ಭಜರಂಗಿ 2 ಟೀಸರ್‌ ಖದರ್‌

‘ಭಜರಂಗಿ- 2’ ಚಿತ್ರದ ಟೀಸರ್‌ ಬಿಡುಗಡೆ ಮಾಡುವ ಮೂಲಕ ನಿರ್ದೇಶಕ ಹರ್ಷ, ನಿರ್ಮಾಪಕ ಜಯಣ್ಣ ಅವರು ಶಿವಣ್ಣನ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದರು.

ಜಾಕಿ ಭಾವನಾ, ಶಿವಣ್ಣ ಕಾಂಬಿನೇಷನ್‌ ಭಜರಂಗಿ 2 ಚಿತ್ರದ ಟೀಸರ್‌ ಪವರ್‌ ಫುಲ್‌ ಆಗಿದ್ದು ಎಲ್ಲೆಡೆ ಭರಪೂರ ಮೆಚ್ಚುಗೆ ಹರಿದುಬಂದಿದೆ. ಕಾಡು, ಮಂತ್ರಗಳು, ಮಾಂತ್ರಿಕರು, ಕಾಡಿನ ಜನರ ಅಕ್ರಂದನ, ವಿಭಿನ್ನ ಸೆಟ್‌, ಅಬ್ಬರದ ಸಂಗೀತದಲ್ಲಿ ಶಿವಣ್ಣನ ಭರ್ಜರಿ ಎಂಟ್ರಿ.

ಶಿವರಾಜ್‌ಕುಮಾರ್ ಪುತ್ರಿ ನಿವೇದಿತಾ ಈಗ ನಿರ್ಮಾಪಕಿ; ಹೇಗಿದ್ದಾರೆ ನೋಡಿ!

ಆ್ಯಕ್ಷನ್‌, ಥ್ರಿಲ್ಲರ್‌ ಮತ್ತು ಸಸ್ಪೆನ್ಸ್‌ನಿಂದ ಕೂಡಿರುವ ಟೀಸರ್‌ಗೆ ಶಿವಣ್ಣ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ. ಟೀಸರ್‌ನಲ್ಲಿ ಜಾಕಿ ಭಾವನಾ ಅವರ ಪಾತ್ರದ ಲುಕ್ಕು ಕೂಡ ಬಹಿರಂಗವಾಗಿದ್ದು, ಆದಿವಾಸಿಗಳ ನಾಯಕಿಯ ಆಗಿ ಭಾವನಾ ತೆರೆ ಮೇಲೆ ಮಿಂಚಿದ್ದಾರೆಯೇ ಎನ್ನುವ ಕುತೂಹಲವಿದೆ.